Bigg Boss Kannada: ಲಾಯರ್ ಜಗದೀಶ್ ಹೊರಬಂದ ಬೆನ್ನಲ್ಲೇ ಮತ್ತೆ ಜೈಲು ಸೇರಿದ ಚೈತ್ರಾ ಕುಂದಾಪುರ!
ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ತಾರಕಕ್ಕೇರಿದೆ. ವಕೀಲ ಜಗದೀಶ್ ಮತ್ತು ಉಳಿದ ಅಭ್ಯರ್ಥಿಗಳ ಜೊತೆ ಭಾರಿ ಜಗಳವಾದ ಹಿನ್ನಲೆಯಲ್ಲಿ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿದೆ. ಲಾಯರ್ ಜಗದೀಶ್ ಜೊತೆ ಮತ್ತೊಬ್ಬ ಅಭ್ಯರ್ಥಿ ರಂಜಿತ್‌ರನ್ನು ಕೂಡ ಎಲಿಮಿನೇಟ್ ಮಾಡಲಾಗಿದೆ. ಇವರಿಬ್ಬರು ಕಾರ್ಯಕ್ರಮದಿಂದ ಹೊರಹೋದ ಬೆನ್ನಲ್ಲೇ ಮತ್ತೊಬ್ಬ ಸ್ಪರ್ಧಿ ಚೈತ್ರಾ ಕುಂದಾಪುರ ಜೈಲು ಸೇರಿದ್ದಾರೆ!.
ಹೌದು, ಚೈತ್ರಾ ಕುಂದಾಪುರ ಎರಡನೇ ಬಾರಿ ಜೈಲು ಪಾಲಾಗಿದ್ದಾರೆ. ಆದರೆ ಈ ಬಾರಿ ಅವರು ಹೋಗಿರೋದು ಬಿಗ್ ಬಾಸ್ ಮನೆಯಲ್ಲಿರುವ ವಿಶೇಷ ಜೈಲಿಗೆ! ಪ್ರತಿ ಬಿಗ್ ಬಾಸ್ ಆವೃತ್ತಿಯಲ್ಲಿ 'ಜೈಲು' ಪರಿಕಲ್ಪನೆ ಇರುತ್ತದೆ. ಸ್ಪರ್ಧಿಗಳು ವರ್ತನೆ ಆಧಾರದ ಮೇಲೆ ಕಳಪೆ ಮತ್ತು ಉತ್ತಮ ಎನ್ನುವ ಕಾರಣಗಳನ್ನು ನೀಡಿ ಜೈಲಿನಲ್ಲಿ ಇಡಲಾಗುತ್ತದೆ. ಈ ಬಾರಿ ಕೆಲವು ಬದಲಾವಣೆ ಮಾಡಿದ್ದು, ಅಪ್ರಾಮಾಣಿಕ ಮತ್ತು ಕುತಂತ್ರಿ ಎನಿಸಿಕೊಂಡವರನ್ನು ಜೈಲಿಗೆ ಹಾಕಲಾಗಿದೆ.

ಸ್ಪರ್ಧಿಗಳು ಅಪ್ರಾಮಾಣಿಕ ಮತ್ತು ಕುತಂತ್ರಿಗಳು ಯಾರು ಎನ್ನುವುದನ್ನು ಸೂಚಿಸುತ್ತಾರೆ ಮತ್ತು ಅದಕ್ಕೆ ಸೂಕ್ತವಾದ ಕಾರಣ ಕೊಡುತ್ತಾರೆ. ಯಾವ ಸ್ಪರ್ಧಿಗೆ ಹೆಚ್ಚು ಕುತಂತ್ರಿ, ಅಪ್ರಾಮಾಣಿಕ ಎನ್ನುವ ಪಟ್ಟ ಸಿಗುತ್ತದೆಯೋ ಅವರನ್ನು ಜೈಲಿನಲ್ಲಿ ಇಡಲಾಗುತ್ತದೆ. ಈ ವಾರದಲ್ಲಿ ಚೈತ್ರಾ ಕುಂದಾಪುರ ಅವರನ್ನು ಉಳಿದ ಸ್ಪರ್ಧಿಗಳು ಕುತಂತ್ರಿ ಎಂದು ಪಟ್ಟ ಕಟ್ಟಿದ್ದು ಜೈಲು ಪಾಲಾಗುವಂತೆ ಮಾಡಿದ್ದಾರೆ.
ಖುಷಿಯಾಗಿದೆ ಎಂದ ಚೈತ್ರಾ
ಉಳಿದ ಸ್ಪರ್ಧಿಗಳಿಂದ ಕುತಂತ್ರಿ ಎನಿಸಿಕೊಂಡು ಜೈಲು ಸೇರಿರುವ ಚೈತ್ರಾ ಕುಂದಾಪುರ, ಖುಷಿಯಿಂದಲೇ ಜೈಲಿನೊಳಗೆ ಹೋಗಿದ್ದಾರೆ. ಹೊರಗಡೆ ನಿಮ್ಮ ಮುಖ ನೋಡಿ ಬೇಜಾರಾಗಿದೆ, ಜೈಲಿನಲ್ಲಿ ನನಗೆ ಖಾಸಗಿತನ ಸಿಗುತ್ತದೆ, ಜೈಲಿಗೆ ಹೋಗಲು ನನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರಿಗೆ ಜೈಲು ಏನು ಹೊಸದಲ್ಲ, ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷ ಒಡ್ಡಿದ್ದು, 5 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಅವರು ಜೈಲು ಸೇರಿದ್ದರು. ಈ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅವರು ಬಳಿಕು ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಲಾಯರ್ ಜಗದೀಶ್ ಕ್ಷಮೆ
ಬಿಗ್ ಬಾಸ್‌ನಲ್ಲಿ ಜಗಳ ಆಡಿಕೊಂಡು ಹೊರ ಬಂದಿರುವ ವಕೀಲ ಜಗದೀಶ್, ತಮ್ಮಿಂದ ಬೇಸರವಾಗಿರುವುದಕ್ಕೆ ಬಿಗ್ ಬಾಸ್ ಮತ್ತು ಸುದೀಪ್‌ರ ಕ್ಷಮೆ ಕೇಳಿದ್ದಾರೆ. ಬಿಗ್ ಬಾಸ್‌ನಿಂದ ನಾನು ತುಂಬಾ ಕಲಿತಿದ್ದೇನೆ ಎಂದು ಹೇಳಿದ್ದಾರೆ. ಕೋಟ್ಯಂತರ ಜನ ನನ್ನನ್ನು ನೋಡಿ ಇಷ್ಟಪಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications