Chaitra Kundapura: ನನಗೆ ಬಿಗ್‌ಬಾಸ್ ಸೂಟ್ ಆಗಲ್ಲ: ಚೈತ್ರಾ ಕುಂದಾಪುರ, ಮನೆಯಿಂದ ಹೊರಗೆ ಬರುವ ಸುಳಿವು!
ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಗೆ ಬಂದು ಇನ್ನಷ್ಟು ಒಳ್ಳೆಯ ಹೆಸರು ಮಾಡಬೇಕು ಎಂದುಕೊಂಡಿದ್ದರು. ಆದರೆ, ಅವರ ಲೆಕ್ಕಚಾರಗಳು ತಲೆಕೆಳಗಾಗಿವೆ. ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರನ್ನೇ ಎಲ್ಲರೂ ಟಾರ್ಗೆಟ್ ಮಾಡುತ್ತಿದ್ದು, ಚೈತ್ರಾ ಕಣ್ಣೀರಾಗಿದ್ದಾರೆ. ಬಿಗ್‌ಬಾಸ್‌ನಿಂದ ಹೊರ ಬರುವ ಬಗ್ಗೆ ಚೈತ್ರಾ ಕುಂದಾಪುರ ಅವರು ಸುಳಿವು ಬಿಟ್ಟುಕೊಟ್ಟಿದ್ದಾರೆ. ಬಿಗ್‌ಬಾಸ್‌ನಲ್ಲಿ ಚೈತ್ರಾ ಅವರು ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಾರೆ. ವೀಕೆಂಡ್ ಬಂದರೆ ಜ್ವರ, ಆರೋಗ್ಯ ಸರಿ ಇಲ್ಲ ಎನ್ನುತ್ತಾರೆ ಅಂತ ಆರೋಪ ಕೇಳಿ ಬಂದಿದೆ. ಈ ಬಾರಿ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಸಹ ಕ್ಲಾಸ್ ತೆಗೆದುಕೊಂಡಿದ್ದರು. ನೀವು ಅನ್‌ಫಿಟ್ ಎನ್ನುವ ಮಾತುಗಳೂ ಕೇಳಿ ಬಂದಿದ್ದವು. ಈ ವಿಷಯಗಳಿಗೆ ಚೈತ್ರಾ ಕುಂದಾಪುರ ಅವರು ಕಣ್ಣೀರಾಗಿದ್ದು, ಹೊರ ಬರುವ ಬಗ್ಗೆ ಮಾತನಾಡಿದ್ದಾರೆ.
ಚೈತ್ರಾಕುಂದಾಪುರ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ನೇರಾ ನೇರವಾಗಿ ಆರೋಪ ಮಾಡಿರುವುದು ಪದೇ ಪದೇ ಕಳಪೆ ಅಂತ ಹೇಳ್ತಾ ಇರೋದು ಚೈತ್ರಾ ಅವರಿಗೆ ಬಿಸಿ ತುಪ್ಪವಾಗಿದೆ. ಚೈತ್ರಾ ಅವರು ಬಿಗ್‌ಬಾಸ್‌ನಲ್ಲಿ ಹ್ಯಾಟ್ರಿಕ್ ಮೂರು ಬಾರಿ ಕಳಪೆ ಪಟ್ಟವನ್ನು ಹೊತ್ತು ಜೈಲು ಸೇರಿದ್ದಾರೆ. ಅವರು ಡ್ರಾಮಾ ಮಾಡ್ತಿದ್ದಾರೆ ಅದು ಎಲ್ಲರಿಗೂ ಗೊತ್ತಾಗ್ತಿದೆ ಅಂತ ಸ್ಪರ್ಧಿಗಳು ಅವರ ಮುಖಕ್ಕೆ ಹೊಡೆದಂಗೆ ಹೇಳಿದ್ದಾರೆ.

ನನ್ನಂಥವಳು ಇಲ್ಲಿಗೆ ಬರಬಾರದಿತ್ತು: ಬಿಗ್‌ಬಾಸ್ ಆಯ್ಕೆಯ ಬಗ್ಗೆಯೇ ಚೈತ್ರಾ ಕುಂದಾಪುರ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಆಟ ನನಂತವರಿಗೆ ಅಲ್ಲ. ನಾನು ತಪ್ಪು ನಿರ್ಧಾರ ಮಾಡಿಬಿಟ್ಟೆ ಅಂತ ಚೈತ್ರಾ ಕುಂದಾಪುರ ಅವರು ಹೇಳಿದ್ದಾರೆ. ಶಾಲೆಗೆ ಹೋಗುವವರು ಶಾಲೆಗೆ, ದೇವಸ್ಥಾನಕ್ಕೆ ಹೋಗುವವರು ದೇವಸ್ಥಾನಕ್ಕೆ ಹೋಗಬೇಕು. ಅದೇ ತರ ಪಬ್ಗೆ ಹೋಗುವವರು ಪಬ್ಗೇ ಹೋಗಬೇಕು ನಾನು ತಪ್ಪು ಮಾಡಿಬಿಟ್ಟೆ. ನನ್ನಂಥವರು ಇಲ್ಲಿಗೆ ಬರಲೇಬಾರದಿತ್ತು ಅಂತ ಚೈತ್ರಾ ಅವರು ಹೇಳಿಕೊಂಡಿದ್ದು, ಬಿಗ್‌ಬಾಸ್‌ನಿಂದ ಹೊರ ಬರುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ.
ಬಿಗ್‌ಬಾಸ್ ಮೈಂಡ್ ಗೇಮ್ ಹಾಗೂ ವ್ಯಕ್ತಿತ್ವ ಪರೀಕ್ಷೆಯ ಗೇಮ್ ಆಗಿದೆ. ಬಿಗ್‌ಬಾಸ್‌ನಲ್ಲಿ ಚೈತ್ರಾಕುಂದಾಪುರ ಅವರು ಏನೇ ಸರ್ಕಸ್ ಮಾಡಿದರು ಕೆಲವೊಂದು ಎಡವಟ್ಟುಗಳನ್ನು ಮಾಡಿಕೊಂಡಿದ್ದರು. ಶಿಶಿರ್ ಅವರ ಜೋಡಿಯನ್ನು ಬಿಟ್ಟು ತ್ರಿವಿಕ್ರಮ್ ಅವರೊಂದಿಗೆ ಆಟವಾಡುತ್ತೇನೆ ಎಂದಾಗಲೆ ಬಿಗ್‌ಬಾಸ್ ನೋಡುವವರಿಗೆ ಹಾಗೂ ಸ್ಪರ್ಧಿಗಳಿಗೂ ಶಾಕ್ ಆಗಿತ್ತು. ಆ ನಿರ್ಧಾರ ಬಿಗ್‌ಬಾಸ್‌ನಲ್ಲಿ ಚೈತ್ರಾ ಅವರಿಗೆ ತಿರುಗುಬಾಣವಾಯಿತು. ಇದಾದ ಮೇಲೆ ಅವರು ಆಸ್ಪತ್ರೆಗೆ ದಾಖಲಾಗಿ, ಆಸ್ಪತ್ರೆಯಿಂದ ಬಂದ ಮೇಲೆ ಬಿಗ್‌ಬಾಸ್‌ನಲ್ಲಿರುವ ಸ್ಪರ್ಧಿಗಳ ಬಗ್ಗೆ ಹೊರಗಿನ ಜನ ಯಾವ ರೀತಿ ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಸ್ಟೇಟ್‌ಮೆಂಟ್ ಕೊಟ್ಟು, ಕಿಚ್ಚ ಸುದೀಪ್ ಅವರಿಂದ ಸಿಕ್ಕಾಪಟ್ಟೆ ತರಾಟೆಗೆ ಗುರಿಯಾಗಿದ್ದರು.

ಚೈತ್ರಾ ಅವರ ಮಾತು ಕಿರಿಕಿರಿ ಎನ್ನುವ ಅಭಿಪ್ರಾಯವನ್ನು ಅವರಿಂದ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ನಾನು ಇಲ್ಲಿ ಪರಿಸ್ಥಿತಿ ಎಂದು ತುಂಬಾ ಸಲ ಅಂದುಕೊಳ್ಳುತ್ತೀನಿ ಆದರೆ, ಆಗ್ತಿಲ್ಲ ಎಂದಿದ್ದಾರೆ. ನನ್ನ ಮಾತು ಕಿರಿಕಿರಿ ಅಂತ ಇಲ್ಲಿಯ ವರೆಗೆ ನನಗೆ ಯಾರೂ ಹೇಳಿರಲಿಲ್ಲ. ನನ್ನ ಮಾತು ನನಗೆ ಅನ್ನ ಕೊಟ್ಟಿದೆ, ಬದುಕು ಕಟ್ಟಿಕೊಳ್ಳಲು ಸಹಾಯವಾಗಿದೆ ಎಂದು ಚೈತ್ರಾ ಅವರು ಕಣ್ಣೀರಾಕಿದ್ದಾರೆ. ಕಳೆದ ಬಾರಿ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಾಗಲೇ ಚೈತ್ರಾ ಕುಂದಾಪುರ ಅವರು ಹೊರ ಬರುವುದಾಗಿ ಕ್ಯಾಮೆರಾ ಮುಂದೆ ಬಂದು ಹೇಳಿದ್ದರು. ಈಗ ಮನೆಯ ಒಳಗಿಂದಲೇ ಒತ್ತಡ ಹೆಚ್ಚಾಗಿದೆ . ಹೀಗಾಗಿ, ಹೊರಗೆ ಬರ್ತಾರಾ ಎನ್ನುವ ಅನುಮಾನ ಹೆಚ್ಚಾಗಿದೆ.
ಚೈತ್ರಾ ಟ್ರೋಲ್: ಇನ್ನು ಸೋಷಿಯಲ್ ಮೀಡಿಯಾದಲ್ಲೂ ಚೈತ್ರಾ ಕುಂದಾಪುರ ಅವರ ಬಗ್ಗೆ ಟ್ರೋಲ್‌ಗಳು ಹೆಚ್ಚಾಗಿವೆ. ಒಂದು ಜನ ಬೈಯುತ್ತಾರೆ, ಇಲ್ಲಿ ಕಿಚ್ಚ ಸುದೀಪ್ ಬೈಯುತ್ತಾರೆ ಅದೂ ಇಲ್ಲ ಅಂದರೆ ಬಿಗ್‌ಬಾಸ್ ಸ್ಪರ್ಧಿಗಳು ಬೈಯುತ್ತಾರೆ ಪಾಪ ಚೈತ್ರಾ ಅವರು ಎನ್ನುವ ಟ್ರೋಲ್‌ಗಳು ಶುರುವಾಗಿದೆ. ಅವರ ಅಭಿಮಾನಿಗಳು ಸಹ ಇದಕ್ಕೆ ತಿರುಗೇಟು ಕೊಟ್ಟಿದ್ದಾರೆ. ಬಿಗ್‌ಬಾಸ್‌ನಲ್ಲಿ ಬೇರೆ ಯಾರೂ ಇಲ್ವಾ ಯಾಕೆ ಚೈತ್ರಾ ಅವರೇ ಟಾರ್ಗೆಟ್ ಆಗುತ್ತಿದ್ದಾರೆ ಅಂತ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications