Chaithra Kundapura: ತಂದೆಯನ್ನೇ ಕೊಲೆಗೈಯ್ಯಲು ಸುಪಾರಿ ನೀಡಿದ್ರಾ ಚೈತ್ರಾ ಕುಂದಾಪುರ?
ಹಿಂದೂಪರ ಸಂಘಟನೆಯ ನಾಯಕಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ಮತ್ತು ಅವರ ತಂದೆ ಬಾಲಕೃಷ್ಣ ನಾಯಕ್ ನಡುವಿನ ಜಗಳ ದೊಡ್ಡ ಮಟ್ಟಕ್ಕೆ ತಲುಪಿದೆ. ಇತ್ತೀಚೆಗಷ್ಟೆ ಚೈತ್ರಾ ಕುಂದಾಪುರ ಅವರು ಪ್ರೀತಿಸಿದ ಹುಡುಗನ ಜೊತೆಗೆ ಮದುವೆ ಆಗಿದ್ದಾರೆ. ಇದೀಗ ಚೈತ್ರಾ ಕುಂದಾಪುರ ಅವರ ತಂದೆ, ಮಗಳ ವಿರುದ್ಧ ಹಲವು ಆರೋಪಗಳನ್ನ ಬಿಚ್ಚಿಟ್ಟಿದ್ದು, ಇದೀಗ ಚೈತ್ರಾ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬಾಲಕೃಷ್ಣ ಅವರು ಆರೋಪಿಸಿದ್ದಾರೆ.
ಕಳೆದ ವಾರವಷ್ಟೇ ಮಗಳ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದ ಬಾಲಕೃಷ್ಣ ಅವರು ಇದೀಗ ಚೈತ್ರಾ ಕುಂದಾಪುರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಂದೆಯೇ ಮಗಳ ವಿರುದ್ಧ ಕೊಲೆ ಬೆದರಿಕೆ ಆರೋಪ ಮಾಡಿದ್ದಾರೆ. ಇದೀಗ ತಂದೆಯನ್ನು ಕೊಲೆಗೈಯ್ಯಲು ಹಿಂದೂಪರ ಸಂಘಟನೆಯ ನಾಯಕಿ ಚೈತ್ರಾ ಕುಂದಾಪುರ ಅವರು ಸುಪಾರಿ ನೀಡಿದ್ರಾ ಎನ್ನುವ ಪ್ರಶ್ನೆ ಮೂಡಿದ್ದು, ತಂದೆ ಮಗಳ ಜಗಳ ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಚೈತ್ರಾ ಕುಂದಾಪುರ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬಾಲಕೃಷ್ಣ ಅವರು ಆರೋಪಿಸಿದ್ದಾರೆ. ತಂದೆ ಮಗಳ ನಡುವೆ ಹಣಕಾಸಿನ ವ್ಯವಹಾರಗಳು ಮತ್ತು ಮದುವೆಯ ವಿಷಯವೇ ಈ ಜಗಳಕ್ಕೆ ಕಾರಣ ಎನ್ನಲಾಗಿದೆ. ಚೈತ್ರಾ ಅವರು ತಮ್ಮ ತಂದೆಯ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ಧ ಸುಪಾರಿ ಹತ್ಯೆಯ ಬೆದರಿಕೆ ಆರೋಪ ಕೇಳಿ ಬಂದಿದೆ.ಚೈತ್ರಾ ತಂದೆ ಬಾಲಕೃಷ್ಣ ನಾಯಕ್ ಆರೋಪ ಮಾಡಿ,ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಭೂಗತ ದೊರೆಗಳಿಗೆ ಸುಪಾರಿ ನೀಡಿ ಕೊಲೆ ಮಾಡಿಸುವ ಬೆದರಿಕೆ ಎಂದು ಆರೋಪ ಮಾಡಿದ್ದಾರೆ.
ದೂರಲ್ಲೇನಿದೆ?
ಚೈತ್ರಾ ಅವರು ಗೆಳೆಯರ ಜೊತೆ ಮನೆಗೆ ಬಂದು ದೊಡ್ಡ ಮಟ್ಟದ ದುಡ್ಡಿನ ವ್ಯವಹಾರ ಮಾಡುತ್ತಿದ್ದರು. ಒಂದು ದಿನ ರಾತ್ರಿ ಕೋಟ್ಯಂತರ ರೂಪಾಯಿ ತಂದು ಎಣಿಸಿದ್ದನ್ನು ಕಂಡು ನಾನು ಭಯಗೊಡೆ. ಇದನ್ನು ಪ್ರಶ್ನಿಸಿದ್ದಕ್ಕೆ ನನಗೆ ಅವರು ದಬಾಯಿಸಿದರು. ಹೀಗಾಗಿ, ನಾನು ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದೆ. ಇದು ಗೋವಿಂದ ಪೂಜಾರಿ ಹಣ ಎಂಬ ವಿಚಾರ ನನಗೆ ಆ ಬಳಿಕ ತಿಳಿಯಿತು. ಈ ವಿಚಾರವನ್ನು ನಾನು ಎಲ್ಲಾದರೂ ಹೇಳಬಹುದು ಎಂಬ ಕಾರಣಕ್ಕೆ ನನ್ನ ಹೆಂಡತಿ ರೋಹಿಣಿ ಹಾಗೂ ನನ್ನ ಮಗಳಾದ ಚೈತ್ರ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದರು ಎಂದು ದೂರಿನಲ್ಲಿ ಹೇಳಿದ್ದಾರೆ.

ನನ್ನ ಮಗಳು ಆಕೆಯ ಸ್ನೇಹಿತನಾದ ಶ್ರೀಕಾಂತ್ ಅವರನ್ನು ಮದುವೆಯಾಗಲು ನಿರ್ಧರಿಸಿದ ವಿಷಯ ತಿಳಿಯಿತು. ಆಗ ನಾನು ಅವಳ ಬಳಿ ಆತನನ್ನು ಮದುವೆ ಆಗುವುದು ಸರಿಯಲ್ಲ, ಆತ ಸರಿಯಿಲ್ಲ ಎಂದು ಹೇಳಿದೆ. ನನ್ನ ಮಗಳು ಚೈತ್ರಾ ನನ್ನ ಬಳಿ ಒಂದು ವೇಳೆ ಆತನನ್ನು ಬಿಟ್ಟು ಬೇರೆ ಹುಡುಗನನ್ನು ಮದುವೆಯಾಗುವುದಾದರೆ ನನಗೆ 5 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದಳು. ಇದರಲ್ಲಿ ನನ್ನ ಪತ್ನಿ ರೋಹಿಣಿ ಕೂಡ ಶಾಮೀಲಿದ್ದಾಳೆ ಎಂದು ದೂರಿದ್ದಾರೆ.
ಮದುವೆಗೆ ಬರದೇ ಹೋದರೆ ಭೂಗತ ದೊರೆಗಳ ಮೂಲಕ ಕೊಲೆಗೈಯ್ಯುವ ಬೆದರಿಕೆ ಹಾಕಿದ್ದಾಳೆ. ಆಸ್ತಿಗಾಗಿ ಯಾವ ಹೇಯ ಕೃತ್ಯವನ್ನು ಎಸಗಲು ಅವಳು ಸಿದ್ಧಳಿದ್ದಾಳೆ. ನಾನು ಸತ್ತು ಹೋಗಿದ್ದೇನೆ ಎಂದು ಹೇಳಿಕೊಂಡು ಬರುತ್ತಿದ್ದಾಳೆ. ನನಗೆ ರಕ್ಷಣೆ ನೀಡಿ ಎಂದು ಬಾಲಕೃಷ್ಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.












Click it and Unblock the Notifications