CCL Viral Video: ಸಿಸಿಎಲ್ ಪಂದ್ಯದ ವೇಳೆ ಬೌಲಿಂಗ್ ಡೈಲಾಗ್: ಕ್ಲ್ಯಾರಿಟಿ ಕೊಟ್ಟ ಕಿಚ್ಚ ಸುದೀಪ್
CCL Viral Video: ಸಿಸಿಎಲ್ 2026ರ ಪಂದ್ಯವೊಂದರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ (Kiccha Sudeep) ಅವರು ಬಳಸಿದ ಪದವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಂದ್ಯ ನಡೆಯುವ ವೇಳೆ ಕೋಪಗೊಂಡ ಅವರು ಬೌಲಿಂಗ್ ವಿಚಾರಕ್ಕೆ ಹೀಗೆ ಬಾಲ್ ಹಾಕಿದ್ರೆ, ಮ್ಯಾಚ್ ***ಹೋಗುತ್ತದೆ ಎಂದ ಹೇಳಿರುವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಇದಕ್ಕೆ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇನ್ನೂ ಇದೀಗ ಈ ಬಗ್ಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಸಿಸಿಎಲ್ ಪಂದ್ಯದ ವೇಳೆ ಕಿಚ್ಚ ಸುದೀಪ್ ಹೇಳಿದ ಬೌಲಿಂಗ್ ಡೈಲಾಗ್ ಸಾಮಾಜಿಕ ಜಾಲಯಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವು ಅಭಿಮಾನಿಗಳು ಟೀಕಿಸಿದರೆ, ಇನ್ನೂ ಕೆಲವರು ಪಂದ್ಯದಲ್ಲಿ ಉತ್ಸಾಹದ ಭಾಗವಾಗಿ ಇದನ್ನು ನೋಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮತ್ತೊಂದೆಡೆ ಇನ್ನೂ ಕೆಲವರು ಇದು ಎಐನಲ್ಲಿ ಕ್ರಿಯೆಟ್ ಮಾಡಿರುವ ವಿಡಿಯೋ ಅಂತಲೂ ಹೇಳುತ್ತಿದ್ದಾರೆ.

ಸಾಮಾನ್ಯವಾಗಿ ಕ್ರಿಕೆಟ್ ಆಡುವಾಗ, ಸ್ನೇಹಿತರ ಜೊತೆ ಕೂಡಿದಾದ ಆಡುವಂತಹ ಪದವನ್ನೇ ಕಿಚ್ಚ ಸುದೀಪ್ ಕ್ರಿಕೆಟ್ ಮೈದಾನದಲ್ಲಿ ಬಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವುದಲ್ಲದೆ, ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಈ ಬಗ್ಗೆ ಕಿಚ್ಚ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕಿಚ್ಚ ಸುದೀಪ್ ಸಷ್ಟನೆ ಏನು?: ಈ ಕುರಿತು ಪ್ರತಿಕ್ರಿಯಿಸಿರುವ ಸುದೀಪ್ ಅವರು, ಅದು ಕ್ರಿಕೆಟ್ ಮೈದಾನದಲ್ಲಿನ ಸ್ನೇಹಪೂರ್ಣ ವಾತಾವರಣದ ಭಾಗವಾಗಿದ್ದು, ಯಾವುದೇ ಉದ್ದೇಶಪೂರ್ವಕ ಅವಮಾನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಗ್ ಬಾಸ್‌ನಂತಹ ಕುಟುಂಬ ಸಮೇತ ವೀಕ್ಷಿಸುವ ಕಾರ್ಯಕ್ರಮ ಮತ್ತು ಕ್ರಿಕೆಟ್ ಆಟದ ಸಂದರ್ಭದ ವರ್ತನೆ ವಿಭಿನ್ನವಾಗಿವೆ ಎಂದು ಅವರು ಹೇಳಿದ್ದಾರೆ.
ಸುದೀಪ್ ಮಾತಿಗೆ ಬಿದ್ದು ಬಿದ್ದು ನಗಾಡಿದ ಪ್ರೇಮ್: ರಾಜ್ ಬಿ ಶೆಟ್ಟಿ ನಟನೆಯ "ರಕ್ಕಸಪೂರದೊಳ್" ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಘಟನೆಗೆ ತಮ್ಮ ಆಪ್ತ ಸ್ನೇಹಿತ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಕಾರಣ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುದೀಪ್, ಪ್ರೇಮ್ ಹಾಗೂ ರಕ್ಷಿತಾ ಶೆಟ್ಟಿ ಉಪಸ್ಥಿತರಿದ್ದು, ಅವರು ಸುದೀಪ್ ಹೇಳಿದ ಆ ಮಾತಿಗೆ ಬಿದ್ದು ಬಿದ್ದು ನಗಾಡಿದ್ದಾರೆ.
ಜೋಗಿ ಪ್ರೇಮ್ ಹೇಳಿದ್ದೇನು?: ಬಳಿಕ ಮಾತನಾಡಿದ ಜೋಗಿ ಪ್ರೇಮ್, "ನಾನು ಬರುವ ವೇಳೆ ಒಂದು ವಿಡಿಯೋ ನೋಡಿದೆ. ಸುದೀಪ್ ಅವರು ಪಂದ್ಯದಲ್ಲಿ ಬಳಸಿದ ಪದದ ಬಗ್ಗೆ ಇಡೀ ಕರ್ನಾಟಕ ಚರ್ಚೆ ಮಾಡುತ್ತಿತ್ತು. ಸಾಮಾನ್ಯವಾಗಿ ನಾನು ಮಾತನಾಡುವಾಗ ಕೆಟ್ಟ ಪದ ಬಳಸಿದರೆ, ಸುದೀಪ್ ನನ್ನನ್ನೇ ಪ್ರಶ್ನಿಸುತ್ತಿದ್ದರು. ಆದರೆ, ಈಗ ಅವರು ಕೂಡ ನಮ್ಮ ರೂಟ್‌ಗೆ ಬಂದಿದ್ದಾರೆ ಅನ್ನೋದಕ್ಕೆ ಖುಷಿಯಾಗಿದೆ. ಅದನ್ನೂ ಒಳ್ಳೆಯ ಸ್ಟೈಲ್‌ನಲ್ಲಿ ಹೇಳಿದ್ದಾರೆ," ಎಂದು ನಗುತ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ಅವರು, "ಮೊನ್ನೆ ವೈರಲ್ ಆದ ಆ ರೀಲ್‌ಗೆ ಕಾರಣ ಪ್ರೇಮ್ ಅವರೇ. ಮುಂದಿನ ಸೆಮಿ ಫೈನಲ್‌ನಲ್ಲಿ ಏನಾದರೂ ಆಗಿದ್ರೆ ಅದಕ್ಕೂ ಕಾರಣ ಅವರೇ," ಎಂದು ಹಾಸ್ಯವಾಗಿ ಉತ್ತರಿಸಿದರು. ಇದಕ್ಕೆ ಪ್ರೇಮ್ ಅವರು ನಗುತ್ತಾ ಸುದೀಪ್ ಅವರನ್ನು ತಬ್ಬಿಕೊಂಡು ಗಮನ ಸೆಳೆದರು.
ಕೆಲವರು, ಬಿಗ್‌ಬಾಸ್‌ನಂತಹ ಕುಟುಂಬ ಸಮೇತ ವೀಕ್ಷಣೆ ಮಾಡಬಹುದಾದ ಕಾರ್ಯಕ್ರಮ ನಿರೂಪಿಸುವವರು ಈ ರೀತಿಯ ಪದ ಬಳಕೆ ಮಾಡಬಾರದು ಎಂದು ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸುವವರು, ವೃತ್ತಿಪರ ಶೋ ನಿರೂಪಣೆ ಮತ್ತು ಸ್ನೇಹಿತರೊಂದಿಗೆ ಕ್ರಿಕೆಟ್ ಆಡುವ ಸಂದರ್ಭದ ವರ್ತನೆ ಎರಡೂ ಭಿನ್ನವಾಗಿವೆ ಎಂಬುದನ್ನು ಗಮನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.












Click it and Unblock the Notifications