Vijay Deverakonda: ವಿಜಯ್ ದೇವರಕೊಂಡ ಬಂಧನ ಸಾಧ್ಯತೆ, ನಟನ ವಿರುದ್ಧ FIR ದಾಖಲಾಗಿದ್ದೇಕೆ?
ಟಾಲಿವುಡ್ ನಟ ವಿಜಯ್ ದೇವರಕೊಂಡ ವಿರುದ್ಧ ಕೇಸ್ ದಾಖಲಾಗಿದೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಹಾಗೂ ದೇವರಕೊಂಡ ಅವರು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವ ಗಾಸಿಪ್‌ಗೆ ಪುಷ್ಟಿ ನೀಡಿದ್ದರು. ಇನ್ನು ವೇದಿಕೆಗಳಲ್ಲಿ ವಿಜಯ್ ದೇವಕೊಂಡ ಮಾತು ವಿಶೇಷವಾಗಿರುತ್ತೆ. ಹಲವು ಸಿನಿಮಾ ಕಾರ್ಯಕ್ರಮಗಳಲ್ಲಿ ವಿಜಯ್ ತಮ್ಮದೇ ಸ್ಟೈಲಲ್ಲಿ ಮಾತನಾಡುವ ಮೂಲಕ ಗಮನ ಸೆಳೆಯುತ್ತಿದ್ದರು. ಇಂದು ಅದೇ ಅವರಿಗೆ ಕಾನೂನು ಸಂಕಷ್ಟಕ್ಕೆ ದೂಡಿದೆ. ವಿಜಯ್ ಆಡಿರುವ ಮಾತಿನಿಂದಲೇ ಅವರ ಮೇಲೆ ಪ್ರಕರಣ ದಾಖಲಾಗಿದೆ. ಇಷ್ಟಕ್ಕೂ ವಿಜಯ್ ನೀಡಿದ ಆ ಹೇಳಿಕೆ ಏನು? ಎಂಬ ವಿವರ ಇಲ್ಲಿದೆ.
ನಟ ವಿಜಯ್ ದೇವರಕೊಂಡ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಸೈಬರಾಬಾದ್‌ನ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಬುಡಕಟ್ಟು ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಈ ಕೇಸ್ ಬಿದ್ದಿದೆ. ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷ ಅಶೋಕ್ ಕುಮಾರ್ ನಾಯಕ್ ನಟನ ವಿರುದ್ಧ ನೀಡಿದ್ದು, ಇತ್ತೀಚೆಗೆ ರಿಲೀಸ್ ಆದ ತಮಿಳು ನಟ ಸೂರ್ಯ ನಟನೆಯ "ರೆಟ್ರೋ" ಸಿನಿಮಾದ ಕಾರ್ಯಕ್ರಮದಲ್ಲಿ ದೇವರಕೊಂಡ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ವಿಜಯ್ ಅವರ ಹೇಳಿಕೆ ಆಕ್ರಮಣಕಾರಿ ಹಾಗೂ ಬುಡಕಟ್ಟು ಸಮುದಾಯವನ್ನು ಅವಮಾನಿಸುವಂತಿವೆ ಎಂದು ಹೇಳಲಾಗಿದೆ. ಎರಡು ತಿಂಗಳ ಹಿಂದೆ ವಿಜಯ್ ಆಡಿದ ಮಾತುಗಳಿಗೆ ಆಕ್ಷೇಪಿಸಿ ದೂರು ನೀಡಲಾಗಿದೆ. ನಾಯಕ ಸೂರ್ಯ ನಟಿಸಿದ 'ರೆಟ್ರೋ' ಚಿತ್ರದ ಪೂರ್ವ-ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಲನಚಿತ್ರ ನಟ ವಿಜಯ್ ದೇವರಕೊಂಡ ಅವರು ಬುಡಕಟ್ಟು ಜನಾಂಗದವರ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಅವರನ್ನು ಗಂಭೀರವಾಗಿ ಅವಮಾನಿಸುವ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹೇಳಿಕೆಗಳನ್ನು ಬುಡಕಟ್ಟು ಸಮುದಾಯದ ಸ್ವಾಭಿಮಾನ ಮತ್ತು ಘನತೆಗೆ ಮಾಡಿದ ಗಂಭೀರ ಅವಮಾನವೆಂದು ಪರಿಗಣಿಸಲಾಗಿದೆ. ಆದ್ದರಿಂದ ನಟ ವಿಜಯ್ ದೇವರಕೊಂಡ ವಿರುದ್ಧ ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿಯಿಸಿದ್ದಾರೆ ಎಂದು ಪೊಲೀಸ್ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ವಿಜಯ್ ನಟನೆಯ "ಕಿಂಗ್‌ಡಮ್" ಮೇ ತಿಂಗಳಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಈ ಚಿತ್ರವು ಜುಲೈ 4ರಂದು ರಿಲೀಸ್ ಆಗಲಿದೆ. ಸಿನಿಮಾ ರಿಲೀಸ್ ಹೊತ್ತಲ್ಲೇ ದೇವರಕೊಂಡ ವಿರುದ್ಧ ಕೇಸ್ ದಾಖಲಾಗಿದೆ.
ಕ್ಷಮೆ ಕೇಳಿದ್ಧ ವಿಜಯ್ ದೇವರಕೊಂಡ
ನಟ ವಿಜಯ್ ದೇವರಕೊಂಡ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದರು. ನನ್ನ ಸಂದೇಶದ ಯಾವುದೇ ಭಾಗವು ತಪ್ಪಾಗಿ ಅರ್ಥೈಸಲ್ಪಟ್ಟಿದ್ದರೆ ಅಥವಾ ನೋವುಂಟುಮಾಡಿದ್ದರೆ, ನಾನು ನನ್ನ ಪ್ರಾಮಾಣಿಕ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಶಾಂತಿ, ಪ್ರಗತಿ ಮತ್ತು ಒಗ್ಗಟ್ಟಿನ ಬಗ್ಗೆ ಮಾತನಾಡುವುದು ನನ್ನ ಏಕೈಕ ಗುರಿಯಾಗಿತ್ತು. ಒಗ್ಗೂಡಿಸುವಿಕೆಯನ್ನು ಹೆಚ್ಚಿಸಲು ಎಂದಿಗೂ ವಿಭಜನೆಯಾಗದಂತೆ ನನ್ನ ವೇದಿಕೆಯನ್ನು ಬಳಸಲು ನಾನು ಬದ್ಧನಾಗಿರುತ್ತೇನೆ ಎಂದು ವಿಜಯ್ ಹೇಳಿದ್ದರು.












Click it and Unblock the Notifications