Toxic Yash: ಟಾಕ್ಸಿಕ್ ಚಿತ್ರಕ್ಕೆ ಆರಂಭದಲ್ಲೇ ವಿಘ್ನ: ಆಗಿದ್ದೇನು?
ಕನ್ನಡ ಚಿತ್ರ ರಂಗದ ನ್ಯಾಷನಲ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರಕ್ಕೆ ಆರಂಭದಲ್ಲಿ ವಿಘ್ನ ಎದುರಾಗಿದೆ. ಈಗಾಗಲೇ ಕೆಜಿಎಫ್ 2 ನಂತರ ಯಶ್, ಟಾಕ್ಸಿಕ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟಾಕ್ಸಿಕ್ ಚಿತ್ರ ತಂಡಕ್ಕೆ ಆರಂಭದಲ್ಲಿ ಸಂಕಷ್ಟ ಎದುರಾಗಿದೆ.
ಇತ್ತೀಚಿಗಷ್ಟೇ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಪುತ್ರನ ಮದುವೆ ವೇಳೆ ಕಾಣಿಸಿಕೊಂಡಿದ್ದರು. ಆಗಲೇ ಅವರ ನೂತನ ಚಿತ್ರ ಟಾಕ್ಸಿಕ್ ಲುಕ್ ಸಹ ವೈರಲ್ ಆಗಿತ್ತು. ಯಶ್ ಅವರ ನ್ಯೂ ಲುಕ್ ಟ್ರೆಂಡ್ ಆಗಿತ್ತು. ಹೀಗಾಗಿ ಟಾಕ್ಸಿಕ್ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಈಗ ಈ ಚಿತ್ರ ತಂಡಕ್ಕೆ ಆರಂಭದಲ್ಲಿ ವಿಘ್ನ ಎದುರಾಗಿದೆ.

ವಿಘ್ನ ಏಕೆ?
ಬೆಂಗಳೂರಿನ ಹೊರ ವಲಯದ ಎಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಭಾರೀ ವೆಚ್ಚದಲ್ಲಿ ಸೆಟ್ ಹಾಕಲಾಗಿದೆ. ಸುಮಾರು 20 ಎಕರೆ ಪ್ರದೇಶದಲ್ಲಿ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ. ಈ ಸೆಟ್ ನಿರ್ಮಿಸಿರುವುದು ಅರಣ್ಯ ಭೂಮಿಯಲ್ಲಿ ಎಂದು ಆರೋಪಿಸಿ ವಕೀಲ ಜಿ.ಬಾಲಾಜಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರಣ್ಯ ಭೂಮಿಯಲ್ಲಿ ಸೆಟ್ ಹಾಕಲಾಗಿದೆ ಎಂದು ಪಿಐಎಲ್ ಸಲ್ಲಿಸಿದ್ದಾರೆ.
ಈ ಅರ್ಜಿ ಹಿನ್ನೆಲೆ, ಈಗಾಗಲೇ ಕೆವಿಎನ್ ಪ್ರೊಡಕ್ಷನ್‌ಗೆ ಹೈಕೋರ್ಟ್ ನೋಟಿಸ್ ಸಹ ನೀಡಿದೆ. ಇಷ್ಟೇ ಅಲ್ಲದೆ ಸೆಟ್ ನಿರ್ಮಾಣಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರ ಹಾಗೂ ಎಚ್‌ಎಂಟಿ ಕಂಪನಿಗೂ ನೋಟಿಸ್ ನೀಡಲಾಗಿದೆ.
ಅರಣ್ಯ ಭೂಮಿಯಲ್ಲಿ ಅನಧಿಕೃತವಾಗಿ ಸೆಟ್ ನಿರ್ಮಿಸಲಾಗಿದ್ದು, ಕೂಡಲೇ ತೆರವು ಗೊಳಿಸಬೇಕು ಎಂದು ವಕೀಲ ಜಿ.ಬಾಲಾಜಿ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ಪೀಠದಿಂದ ನೋಟಿಸ್ ಜಾರಿ ಮಾಡಿದೆ. ಅರ್ಜಿ ವಿಚಾರಣೆ ಆಗಸ್ಟ್ 19ಕ್ಕೆ ಮುಂದೂಡಲಾಗಿದೆ.












Click it and Unblock the Notifications