ಬಾಲಿವುಡ್ ನಟಿ ಶ್ರೀದೇವಿ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಸ್ಪೋಟಕ ಸೀಕ್ರೆಟ್‌ ರಿವೀಲ್‌ ಮಾಡಿದ ಪತಿ ಬೋನಿ ಕಪೂರ್‌

ಬಾಲಿವುಡ್ ಹಿರಿಯ ನಟಿ ಶ್ರೀದೇವಿಯ ಸಾವು ಸಹಜವಾದ ಸಾವಲ್ಲ ಎಂದು ಪತಿ ಬೋನಿ ಕಪೂರ್ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ನಿಧನರಾದ ನಟಿ ಶ್ರೀದೇವಿ ಬಗ್ಗೆ ಪತಿ ಬೋನಿ ಕಪೂರ್ ಹಲವಾರು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ನಟಿ ಶ್ರೀದೇವಿ ಇಂದು ನಮ್ಮ ನಡುವೆ ಇಲ್ಲದಿರಬಹುದು, ಆದರೆ ಅವರ ಅತ್ಯುತ್ತಮ ಅಭಿನಯ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ಇವತ್ತಿಗೂ ಇಂಡಸ್ಟ್ರಿಯ 'ಚಾಂದಿನಿ' ಹಾಡಿಗೆ ಎಲ್ಲರೂ ಹುಚ್ಚೆದ್ದು ಕುಣಿಯುತ್ತಾರೆ. ಹೀಗಾಗಿ ನಟಿ ತಮ್ಮ ಅಭಿಮಾನಿಗಳ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ.

Bollywood actress Sridevis death is not a natural death, says Boney Kapoor!

ಅವರು ಅಗಲಿ ಈಗ ಹಲವು ವರ್ಷಗಳು ಕಳೆದಿವೆ. ಇತ್ತೀಚೆಗೆ ನಿಧನರಾದ ನಟಿ ಶ್ರೀದೇವಿಯ ಪತಿ ಬೋನಿ ಕಪೂರ್ ಅವರ ಸಾವಿಗೆ ಸಂಬಂಧಿಸಿದಂತೆ ಹಲವು ಬಹಿರಂಗಪಡಿಸಿದ್ದಾರೆ. ನಟಿಯ ಸಾವಿಗೂ ಮುನ್ನ ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿವಂಗತ ನಟಿ ಸಾವಿನ ಬಗ್ಗೆ ಬೋನಿ ಹೇಳಿದ್ದು ಹೀಗೆ- 'ಇದು ಸಹಜ ಸಾವಲ್ಲ. ಅದೊಂದು ಆಕಸ್ಮಿಕ ಸಾವು. ನನ್ನ ವಿಚಾರಣೆ ನಡೆಸಿದಾಗ ಸುಮಾರು 24 ಅಥವಾ 48 ಗಂಟೆಗಳ ಕಾಲ ನಾನು ಅದರ ಬಗ್ಗೆ ಮಾತನಾಡದೇ ಇರಲು ನಿರ್ಧರಿಸಿದೆ. ವಾಸ್ತವವಾಗಿ, ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿದ್ದ ಕಾರಣ ನಾವು ಇದನ್ನು ಮಾತಾಬೇಕಾಯಿತು' ಎಂದಿದ್ದಾರೆ.

ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಹೇಳಿಕೆ

ಬೋನಿ ಕಪೂರ್ ಅವರು, 'ಈ ಪ್ರಕರಣದಲ್ಲಿ ನನ್ನನ್ನು ಆರೋಪಿಯನ್ನಾಗಿ ಮಾಡಲಾಯಿತು. ಹಾಗಾಗಿ ನಾನು ಸುಳ್ಳು ಪತ್ತೆ ಪರೀಕ್ಷೆ ಮತ್ತು ಉಳಿದಂತೆ ಎಲ್ಲಾ ಪರೀಕ್ಷೆಗಳ ಮೂಲಕ ಸತ್ಯದ ಜಾಡು ಹಿಡಿದು ಹೋದೆ. ಇದೆಲ್ಲದರ ನಂತರ ಬಂದ ವರದಿಯಲ್ಲಿ ಇದು ಆಕಸ್ಮಿಕ ಎಂದು ಸ್ಪಷ್ಟವಾಗಿ ತಿಳಿಯಿತು. ಅವರು ಅಗಲಿರುವುದು ನೋಡಿ ನನಗೆ ತುಂಬಾ ಬೇಸರವಾಗಿದೆ, ಆದರೆ ಅವರ ಮರಣದ ನಂತರ ನಡೆದ ಸಂಗತಿಗಳು ಸರಿಯಾಗಿಲ್ಲ ಮತ್ತು ಅದು ನನ್ನನ್ನು ಹೆಚ್ಚು ಬೇಸರಗೊಳಿಸಿವೆ' ಎಂದು ಹೇಳಿದ್ದಾರೆ.

Bollywood actress Sridevis death is not a natural death, says Boney Kapoor!

ಶ್ರೀದೇವಿ ಚೆನ್ನಾಗಿ ಕಾಣಬೇಕೆಂದು ಬಯಸಿದ್ದರು

ಶ್ರೀದೇವಿ ಸಾಯುವ ಸಮಯಕ್ಕೂ ಮುನ್ನ ಆಹಾರ ಕ್ರಮದಲ್ಲಿದ್ದರು ಎಂದು ಬೋನಿ ಹೇಳಿದರು. 'ಆಕೆಗೆ ಆಗಾಗ ಹಸಿವಾಗುತ್ತಿತ್ತು. ಅವಳು ಚೆನ್ನಾಗಿ ಕಾಣಬೇಕೆಂದು ಬಯಸಿದ್ದರಿಂದ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ತೆರೆಯ ಮೇಲೆ ಚೆನ್ನಾಗಿ ಕಾಣಲು ಆಕೆ ಸುಸ್ಥಿತಿಯಲ್ಲಿರಬೇಕೆಂದು ಬಯಸಿದ್ದಳು. ಅವಳು ನನ್ನನ್ನು ಮದುವೆಯಾದಾಗಿನಿಂದ, ಅವಳಿಗೆ ಕೆಲವು ಸಂದರ್ಭಗಳಲ್ಲಿ ಕ್ರ್ಯಾಶ್ ಡಯಟ್ ಇತ್ತು ಮತ್ತು ಅವಳಿಗೆ ಕಡಿಮೆ ರಕ್ತದೊತ್ತಡದ ಸಮಸ್ಯೆ ಇದೆ ಎಂದು ವೈದ್ಯರು ಹೇಳುತ್ತಿದ್ದರು. ಇಂಗ್ಲಿಷ್ ವಿಂಗ್ಲಿಷ್‌ನಂತಹ ಚಿತ್ರಗಳಲ್ಲಿ ಶ್ರೀದೇವಿ ತೂಕವನ್ನು 46-47 ಕೆಜಿಗೆ ಇಳಿದಿದ್ದರು ಎಂದು ಅವರು ಹೇಳಿದರು' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+