ಒಂದು ಸಿನಿಮಾಗಾಗಿ ಇಷ್ಟೆಲ್ಲಾ ಕಷ್ಟಪಡ್ತಾರಾ; ನಟನ ಲುಕ್ ನೋಡಿ ಶಾಕ್ ಆದ ಫ್ಯಾನ್ಸ್!
ನಟ ತನ್ನ ಸಿನಿಮಾಗಾಗಿ ದೇಹವನ್ನು ದಂಡಿಸುವುದು ಕಾಮನ್. ನಟರು ಸಿಕ್ಸ್ ಪ್ಯಾಕ್ ಮಾಡಿಕೊಂಡು ಚಿತ್ರದಲ್ಲಿ ಹಾಡು, ಫೈಟ್ ಮಾಡುತ್ತಾ ಮೈಮಾಟ ಪ್ರದರ್ಶಿಸುತ್ತಾರೆ. ಆದರೆ, ಇಲ್ಲೊಬ್ಬ ನಟ ಇಡೀ ದೇಹವನ್ನು ಮೂರು ಮೂರು ಬಾರಿ ಚಿತ್ರದ ಕಾಲಕ್ಕೆ ತಕ್ಕಂತೆ ಬದಲಿಸಿದ್ದಾರೆ. ಒಮ್ಮೆ ಸಿಕ್ಸ್ ಪ್ಯಾಕ್, ಒಮ್ಮೆ ಫ್ಯಾಮಿಲಿ ಪ್ಯಾಕ್ ಎನ್ನುತ್ತಾ ಫ್ಯಾನ್ಸ್ ಮನ ಗೆದ್ದಿದ್ದಾರೆ.
ಹೌದು... ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಅವರ ನಿರ್ದೇಶನದ 'ಚಂದು ಚಾಂಪಿಯನ್' ಚಿತ್ರದಲ್ಲಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಅವರ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ ನಟ ಕಾರ್ತಿಕ್ ಆರ್ಯನ್. ಚಿತ್ರಕ್ಕಾಗಿ ಅವರು ನಡೆಸುತ್ತಿರುವ ತಯಾರಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿವೆ.

ಒಮ್ಮೆ ಫಿಟ್... ಒಮ್ಮೆ ದಡೂತಿ...!
ಚಂದು ಚಾಂಪಿಯನ್ ಸಿನಿಮಾಗಾಗಿ ನಟ ಕಾರ್ತಿಕ್ ಆರ್ಯನ್ ಒಮ್ಮೆ ದೇಹದಲ್ಲಿ 39% ರಷ್ಟು ಕೊಬ್ಬು ಹೊಂದಿರಬೇಕಿತ್ತು. ಮತ್ತೊಂದು ವೇಳೆ 7 % ಕೊಬ್ಬು ಇರುವಂತ ದೇಹವನ್ನು ದಂಡಿಸಬೇಕಿತ್ತು. ಚಿತ್ರಕ್ಕಾಗಿ ದೇಹವನ್ನು ಹೀಗೆ ಸಂಡಿಸುವುದು ನಿಜಕ್ಕೂ ಕಷ್ಟದ ಕೆಲಸವೇ ಸರಿ. ಈ ರೂಪಾಂತರಗಳ ಫೋಟೋವನ್ನು ನಟ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
'ಚಂದು ಚಾಂಪಿಯನ್' ಗಾಗಿ ಕಾರ್ತಿಕ್ ಆರ್ಯನ್ ಅವರ ತೂಕ ಇಳಿಸುವ ವ್ಯಾಯಾಮ ಅಭಿಮಾನಿಗಳಿಗೆ ಸ್ಪೂರ್ತಿದಾಯಕವಾಗಿದೆ. ನಟ, ತಮ್ಮ ಪೋಸ್ಟ್‌ನಲ್ಲಿ, ಚಿತ್ರಕ್ಕಾಗಿ ಹೇಗೆ ಬದಲಾದರು ಎಂಬುದನ್ನು ಉಲ್ಲೇಖಿಸಿದ್ದಾರೆ. "39% ದೇಹದ ಕೊಬ್ಬಿನಿಂದ 7% ದೇಹದ ಕೊಬ್ಬಿನವರೆಗೆ !! 'ನಿದ್ರಾಹೀನತೆಯಿಂದ' 'ಫಿಟ್‌ನೆಸ್ ಉತ್ಸಾಹಿ' ಆಗಿ ಬದಲಾಗುವವರೆಗೆ... ಇದು ಖಂಡಿತವಾಗಿಯೂ ನನಗೆ ನೆನಪಿಡುವ ಒಂದೂವರೆ ವರ್ಷಗಳ ಪ್ರಯಾಣ" ಎಂದು ಹೇಳಿದ್ದಾರೆ.

ಯಾವುದೂ ಅಸಾಧ್ಯವಲ್ಲ ಎಂದ ಕಾರ್ತಿಕ್ ಆರ್ಯನ್
ಜೀವಂತ ದಂತಕಥೆ ಮುರಳಿಕಾಂತ್ ಪೇಟ್ಕರ್ ಅವರ ಜೀವನವು ನನ್ನನ್ನು ಗಟ್ಟಿಯಾದ ಮನುಷ್ಯನನ್ನಾಗಿ ಮಾಡಿತು. ಮಾತ್ರವಲ್ಲದೆ, ನೀವು ಕನಸು ಕಂಡರೆ, ನೀವು ಅದನ್ನು ಸಾಧಿಸಬಹುದು... ಯಾವುದೂ ಅಸಾಧ್ಯವಲ್ಲ ಎಂಬ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು ಎಂದು ನಟ ಕಾರ್ತಿಕ್ ಆರ್ಯನ್ ಹೇಳಿದ್ದಾರೆ.
"ಮೊದಲೆಲ್ಲಾ ಮಗ ಬೇಗ ಜಿಮ್‌ಗೆ ಹೋಗು ಎಂದು ಅಮ್ಮ ಹೇಳುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ ಮಗ ಜಿಮ್‌ನಿಂದ ಬೇಗ ಹಿಂತಿರುಗಿ ಬಾ ಎಂದು ಕರೆದು ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಹೇಳಿದ್ದಾರೆ. ಇಡೀ ದಿನ ಜಿಮ್‌ನಲ್ಲಿಯೇ ಕಳೆಯುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಭಿಮಾನಿಯೊಬ್ಬರು "ಸಾರ್ವಕಾಲಿಕ ಬ್ಲಾಕ್ಬಸ್ಟರ್ ಚಲನಚಿತ್ರ" ಎಂದು ಬರೆದಿದ್ದಾರೆ. ಇನ್ನೊಬ್ಬರು "ಪ್ರೀತಿ" ಎಂದು ಬರೆದಿದ್ದಾರೆ.
ಇತ್ತೀಚೆಗೆ ನಟ, ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅವರು ಚಂದು ಚಾಂಪಿಯನ್‌ನ ನಿರ್ಮಾಪಕರು ಮಾತ್ರವಲ್ಲದೆ ಕಾರ್ತಿಕ್ ಆರ್ಯನ್ ಅವರ ಕೊನೆಯ ಸಿನಿಮಾ 'ಸತ್ಯಪ್ರೇಮ್ ಕಿ ಕಥಾ' ಗೂ ನಿರ್ಮಾಪಕರಾಗಿದ್ದರು. ಇನ್ನು,ಕಾರ್ತಿಕ್ ಅವರ ಹುಟ್ಟೂರಾದ ಗ್ವಾಲಿಯರ್‌ನಲ್ಲಿರುವ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ಚಂದು ಚಾಂಪಿಯನ್ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ.












Click it and Unblock the Notifications