ನಟಿ ಸಮಂತಾಗೆ ಹೊಸ ಬಾಯ್‌ಫ್ರೆಂಡ್, ಸುದ್ದಿಯಲ್ಲಿದ್ದಾರೆ ಖ್ಯಾತ ನಟ
ಬಹುಭಾಷಾ ನಟಿ ಸಮಂತಾ ಅವರು ನಟ ನಾಗಚೈತನ್ಯ ಅವರನ್ನು ವರಿಸಿ, ದಿಢೀರ್ ಡಿವೋರ್ಸ್ ನೀಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಅತ್ತ ನಾಗಚೈತನ್ಯ ಅವರು ಎಲ್ಲವನ್ನೂ ಮರೆತು ಶೋಭಿತಾ ಅವರನ್ನು ಮದುವೆಯಾಗಿದ್ದಾರೆ. ಇತ್ತ ಸಮಂತಾ ಕೂಡ ಖ್ಯಾತ ನಟನೊಂದಿಗೆ ಮತ್ತೆ ಲವ್‌ನಲ್ಲಿ ಬಿದ್ದಿದ್ದಾರಾ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.
ಹೌದು ಬಾಲಿವುಡ್‌ನ ಖ್ಯಾತ ನಟನೊಬ್ಬ ಸಮಂತಾ ಹಿಂದೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಬಾಲಿವುಡ್‌ನ ಖ್ಯಾತ ನಟನಾದ ಅರ್ಜುನ್ ಕಪೂರ್ ಅವರತ್ತ ಬೊಟ್ಟು ಮಾಡುತ್ತಿದೆ. ಇವರಿಬ್ಬರೂ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳದಿದ್ದರೂ ಇದು ಹೇಗೆ ಸಾಧ್ಯ? ಎಂಬ ಕುತೂಹಲ ಎಲ್ಲರಲ್ಲಿ ಎದುರಾಗಿದೆ. ಇಷ್ಟಕ್ಕೆಲ್ಲ ಕಾರಣವಾಗಿದ್ದು ಅರ್ಜುನ್ ಕಪೂರ್ ಮಾಡಿದ ಪೋಸ್ಟ್.

ಸಮಂತಾ ಒಂದು ಕವಿತೆಯನ್ನು ಪೋಸ್ಟ್ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರ್ಜುನ್ ಕಪೂರ್ ಈ ಕವಿತೆ ಒಂದು ಇನ್ಸ್‌ಪಿರೇಷನ್ ಎಂದು ಹೊಗಳಿದ್ದರು. ಇಷ್ಟಾಗಿದ್ದೇ ತಡ ಎಲ್ಲೆಡೆಯೂ ಅರ್ಜುನ್ ಲವ್ಸ್ ಸಮಂತಾ ಎನ್ನುವ ಕಥೆ ಶುರುವಾಗಿಬಿಟ್ಟಿದೆ. ಅರ್ಜುನ್ ಸದ್ದಿಲ್ಲದೆ ಸಮಂತಾಗೆ ಕಾಳು ಹಾಕ್ತಿದ್ದಾರಾ ಎಂದೂ ಹೇಳಲಾಗುತ್ತಿದೆ.
ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ರುಡ್ಯಾರ್ಡ್ ಕಿಪ್ಲಿಂಗ್ ಅವರ ಕವಿತೆಯನ್ನು ಪೋಸ್ಟ್ ಮಾಡಿದ್ದರು. ಈ ಕವಿತೆ ಯಾವಾಗಲೂ ನನಗೆ ದಾರಿದೀಪ. ಅದನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ ಎಂದು ಸ್ಯಾಮ್ ಬರೆದುಕೊಂಡಿದ್ದರು.
ಇದಕ್ಕೆ ಕಾಮೆಂಟ್ ಮಾಡಿದ್ದ ಅರ್ಜುನ್ ಕಪೂರ್, ಕೆಲವು ಕಷ್ಟದ ದಿನಗಳಲ್ಲಿ ಈ ಕವಿತೆ ತನಗೆ ಸಹಾಯ ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಗೋಡೆಯ ಮೇಲೆ ಇದರ ಮುದ್ರಣವಿದೆ. ನನಗೆ ಸ್ಫೂರ್ತಿ ಬೇಕಾದಾಗ ನಿಜವಾಗಿಯೂ ನನಗೆ ಇದು ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಎಲ್ಲೆಡೆಯಿಂದಲೂ ಸಮಂತಾ ಅರ್ಜುನ್ ಪ್ರೇಮ ಕಥೆಗೆ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ. ಆದರೆ, ಈ ಬಗ್ಗೆ ಇಬ್ಬರೂ ಇಲ್ಲಿವರೆಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.

ಸಮಂತಾ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತಮ್ಮ ಅದ್ಭುತ ಅಭಿನಯಕ್ಕೆ ಹೆಸರಾಗಿರುವ ಸಮಂತಾ ರುತ್ ಪ್ರಭು 1987ರ ಎಪ್ರಿಲ್ 28ರಂದು ಚೆನ್ನೈನಲ್ಲಿ ಜನಿಸಿದರು. ಸದ್ಯ ಅವರು ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ.
ಪದವಿ ಓದುವಾಗ ಪಾರ್ಟ್ ಟೈಮ್ ಮಾಡೆಲಿಂಗ್ ಮಾಡಿಕೊಂಡಿದ್ದ ಸಮಂತಾ, 2010ರಲ್ಲಿ ತೆರೆಕಂಡ ಗೌತಮ್ ಮೆನನ್ ಅವರ ಯೇ ಮಾಯಾ ಚೇಸಾವೆ ತೆಲಗು ಚಿತ್ರದಿಂದ ಸಿನಿರಂಗ ಪ್ರವೇಶಿಸಿದರು. ನಂತರ ತಮಿಳು ಚಿತ್ರಗಳಲ್ಲಿ ಕೂಡ ಮಿಂಚತೊಡಗಿದ ಸಮಂತಾ ಹಲವು ಪ್ರಶಸ್ತಿಗಳಿಗೆ ಭಾಜನರಾದರು.
ಸಮಂತಾ 2017ರಲ್ಲಿ ತಮ್ಮ ಮೊದಲ ಚಿತ್ರದ ನಾಯಕ ಹಾಗೂ ನಾಗಾರ್ಜುನ್ ಅವರ ಹಿರಿಯ ಪುತ್ರ ನಾಗಚೈತನ್ಯರನ್ನು ವಿವಾಹವಾದರು. ಆದರೆ 2021ರ ಅಕ್ಟೋಬರ್ 2ರಂದು ಕಾರಣಾಂತರಗಳಿಂದ ಇಬ್ಬರೂ ಪರಸ್ಪರ ಡಿವೋರ್ಸ್ ಪಡೆದರು. ಇದಾದ ಬಳಿಕ ಸಮಂತಾ ಎರಡನೇ ಮದುವೆ ವಿಚಾರ ಮುನ್ನೆಲೆಗೆ ಬರುತ್ತಲೇ ಇದೆ.












Click it and Unblock the Notifications