Aishwarya Rai: ಮತ್ತೆ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ
ಮುಂಬೈ ನವೆಂಬರ್ 7: ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿಚ್ಛೇದನದ ಸುದ್ದಿ ಹೆಚ್ಚಾಗಿ ವೈರಲ್ ಆಗುತ್ತಿದೆ. ಇಬ್ಬರೂ ಬೇರೆಯಾಗುತ್ತಿದ್ದಾರೆ ಮತ್ತು ಅವರಿಬ್ಬರ ನಡುವಿನ ಸಂಬಂಧ ಸರಿಯಾಗಿಲ್ಲ ಎಂಬ ವರದಿಗಳಿವೆ. ಆದರೆ ಇಲ್ಲಿಯವರೆಗೂ ಈ ವಿಚಾರದಲ್ಲಿ ದಂಪತಿ ಮೌನ ತಾಳಿದ್ದಾರೆ. ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಖ್ಯಾತ ನಿರ್ಮಾಪಕ ಮಣಿರತ್ನಂ ಅವರು ಐಶ್ವರ್ಯಾ ಮತ್ತು ಅಭಿಷೇಕ್ ಜೋಡಿಯನ್ನು ಒಂದಾಗಿಸಲು ಮುಂದಾಗಿದ್ದಾರೆ.
ಐಶ್ವರ್ಯ ಹಾಗೂ ಅಭಿಷೇಕ್ ಬಾಲಿವುಡ್‌ನ ಕ್ಯೂಟ್ ಕಪಲ್. ಇವರಿಬ್ಬರಿಗೂ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಆದರೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂಬ ವದಂತಿಗಳು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಈಗ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿರುವ ಸುದ್ದಿ ಕೇಳಿ ಅವರ ಫ್ಯಾನ್ಸ್‌ಗೆ ದಿಲ್ ಖುಷ್ ಆಗಿದೆ.

ಸಿನಿಮಾ ಮಾಡುವ ಮೂಲಕ ನಿರ್ದೇಶಕ ಮಣಿರತ್ನಂ ಅವರು ಐಶ್ವರ್ಯ ಹಾಗೂ ಅಭಿಷೇಕ್ ಅವರನ್ನು ಮತ್ತೆ ಒಂದಾಗಿಸಲು ಹೊರಟಿದ್ದಾರೆ. ಮಣಿರತ್ನಂ ನಿರ್ಮಾಣದ ಸಿನಿಮಾದಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿಗೆ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಅಭಿಷೇಕ್-ಐಶ್ವರ್ಯಾ!
ಹೌದು.. ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಹೊಸ ಹಿಂದಿ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದು ಐಶ್ ದಂಪತಿಗಳನ್ನು ಮತ್ತೆ ಒಟ್ಟಿಗೆ ಸೇರಿಸಬಹುದು ಎನ್ನಲಾಗುತ್ತಿದೆ. ಈ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಸಂತೋಷಗೊಂಡಿದ್ದಾರೆ. ಇದರಿಂದಾಗಿ ಇವರಿಬ್ಬರ ಸಂಬಂಧದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಬೀಳಲಿದೆ ಎಂದು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಎರಡು ಬಾರಿ ಒಟ್ಟಿಗೆ ಸಿನಿಮಾ
ಮಣಿರತ್ನಂ ಅವರೊಂದಿಗೆ ಅಭಿಷೇಕ್-ಐಶ್ವರ್ಯಾ ಜೋಡಿ ಕೊನೆಯದಾಗಿ 2007ರ ಗುರು ಸಿನಿಮಾದಲ್ಲಿ ಕೆಲಸ ಮಾಡಿತ್ತು. ಅಭಿಷೇಕ್-ಐಶ್ವರ್ಯಾ ಮದುವೆಗೂ ಸ್ವಲ್ಪ ಮೊದಲು ಈ ಸಿನಿಮಾ ಬಿಡುಗಡೆಯಾಯಿತು. ಇವರಿಬ್ಬರ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಯಿತು. ಇದಾದ ನಂತರ ಮತ್ತೊಮ್ಮೆ ಈ ಜೋಡಿ ರಾವಣ ಸಿನಿಮಾದಲ್ಲಿ ಕಾಣಿಸಿಕೊಂಡಿತು. ಈಗ ಮಣಿರತ್ನಂ ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ ಕೂಡ ರೆಡಿಯಾಗಿದೆ ಎನ್ನಲಾಗುತ್ತಿದೆ. ಮಣಿರತ್ನಂ ಅವರ ಈ ಹೊಸ ಸಿನಿಮಾದಲ್ಲಿ ಅಭಿಷೇಕ್-ಐಶ್ವರ್ಯಾ ಮತ್ತೆ ಒಂದಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಹಾಗೊಂದು ವೇಳೆ ಸಿನಿಮಾ ಸಿದ್ಧತೆ ತೀವ್ರಗೊಂಡರೆ ಮತ್ತೆ ಈ ಜೋಡೆ ತೆರೆಯ ಮೇಲೆ ಬರುವುದು ಪಕ್ಕಾ ಎನ್ನಲಾಗುತ್ತಿದೆ.

ಮಣಿರತ್ನಂ ಅವರೊಂದಿಗೆ ಆಳವಾದ ಸಂಪರ್ಕ
ಅಭಿಷೇಕ್‌ಗೆ ಇದು ಮಣಿರತ್ನಂ ಅವರೊಂದಿಗಿನ ನಾಲ್ಕನೇ ಪ್ರಾಜೆಕ್ಟ್ ಆಗಿದ್ದು, ಈ ಹಿಂದೆ ಯುವಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ನಿರ್ದೇಶಕರೊಂದಿಗಿನ ಅಭಿಷೇಕ್ ಅವರ ಸಂಬಂಧ ತುಂಬಾ ಆಳವಾಗಿದೆ. ಅಭಿಷೇಕ್ ಒಮ್ಮೆ ಜೂಮ್‌ಗೆ ನೀಡಿದ ಸಂದರ್ಶನದಲ್ಲಿ ಯುವಾ ಸಿನಿಮಾಗೆ ತಾವು ಆಯ್ಕೆಯಾಗಿರುವುದು ಎಷ್ಟು ಗೌರವ ಎಂದು ಹೇಳಿದ್ದರು.
ಇದಕ್ಕಾಗಿ ಮಣಿರತ್ನಂ ಅವರು ಮುನಿರತ್ನಾ ಅವರ ಮನೆಗೆ ಮೊದಲು ಹೋದಾಗ ತಮ್ಮ ತಂದೆ ಅಮಿತಾಬ್ ಬಚ್ಚನ್‌ಗಾಗಿ ಬಂದಿದ್ದಾರೆ ಎಂದು ಅಭಿಷೇಕ್ ಆರಂಭದಲ್ಲಿ ಭಾವಿಸಿದ್ದರಂತೆ. ಆದರೆ ಮಣಿರತ್ನಂ ಅವರಂತ ಖ್ಯಾತ ನಿರ್ಮಾಪಕ ಅಭಿಷೇಕ್ ಅವರನ್ನು ಕಾಣಲು ಬಂದಿದ್ದಾರೆನ್ನುವುದನ್ನು ಕೇಳಿ ಅಭಿಷೇಕ್ ಅವರಿಗೆ ತುಂಬಾ ಖುಷಿ ಆಗಿತಂತೆ. ಮಣಿರತ್ನಂ ಅವರು ನನ್ನನ್ನು ಅಂದು ಗುರುತಿಸಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಕೂಡ ಹೇಳಿಕೊಂಡಿದ್ದರು ಅಭಿಷೇಕ್.
ಹೀಗಾಗಿ ಈ ಮಣಿರತ್ನಂ ಅವರು ಸಿನಿಮಾ ಮಾಡಿದರೆ ಅದಕ್ಕೆ ಹೀರೋ ಆಗಿ ಅಭಿಷೇಕ್‌ಗೆ ಆಹ್ವಾನ ನೀಡಿದರೆ ಅಭಿಷೇಕ್ ಇಲ್ಲ ಎನ್ನುವುದಿಲ್ಲ. ಜೊತೆಗೆ ಐಶ್ವರ್ಯ ಕೂಡ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಹೀಗಾಗಿ ಈ ಜೋಡಿ ಮತ್ತೆ ಒಂದಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಹೆಚ್ಚಾಗಿದೆ. ಹಾಗೊಂದು ವೇಳೆ ಇಬ್ಬರು ಒಟ್ಟಿಗೆ ಸಿನಿಮಾದಲ್ಲಿ ನಟಿಸಿದ್ದೇ ಆದಲ್ಲಿ ವಿಚ್ಚೇದನದ ಸುದ್ದಿಗಳಿಗೆ ಸಂಪೂರ್ಣ ತೆರೆ ಬೀಳಲಿದೆ.












Click it and Unblock the Notifications