Nagarjuna Akkineni: ಸೆಲ್ಫಿ ಕೇಳಲು ಬಂದ ಫ್ಯಾನ್ ಮೇಲೆ ಬಾಡಿಗಾರ್ಡ್ ದರ್ಪ; ವಿಡಿಯೋ ವೈರಲ್ ಆದ ಬೆನ್ನಲ್ಲೇ ಕ್ಷಮೆ ಕೇಳಿದ ಸ್ಟಾರ್
ನಟ ನಟಿಯರು ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಶೂಟಿಂಗ್, ಕಾರ್ಯಕ್ರಮ ಅದು ಇದು ಎಂದು ಹಲವು ಕಡೆ ಪ್ರಯಾಣಿಸುತ್ತಿರುತ್ತಾರೆ. ಈ ವೇಳೆ ಹೆಚ್ಚು ಜನರಿಗೆ ಸೆಲ್ಫಿ ಕೇಳಲು, ಒಮದು ಫೋಟೋ ತೆಗೆಸಿಕೊಳ್ಳಲು ಅದು ಸರಿಯಾದ ಜಾಗ ಎನಿಸುತ್ತದೆ. ಇದೆ ಕಾರಣಕ್ಕೆ ಹಲವು ಮಂದಿ ಏರ್‌ಪೋರ್ಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ಸ್ಟಾರ್ ನಟನ ಬಾಡಿಗಾರ್ಡ್ ಅಭಿಮಾನಿ ಜೊತೆಗೆ ಅನಾಗರಿಕನ ಹಾಗೆ ವರ್ತಿಸಿದ್ದಾರೆ.
ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಭಾನುವಾರ ವಿಮಾನ ನಿಲ್ದಾಣದಲ್ಲಿ ಹೋಗುವಾಗ ವಯಸ್ಸಾದ ಅಭಿಮಾನಿಯೊಬ್ಬರು ನಟನ ಬಳಿ ಹೋಗಿದ್ದಾರೆ. ಇದನ್ನು ನೋಡಿದ ಅಂಗರಕ್ಷಕ ಆವರನ್ನು ಎಳೆದು ನೂಕಿದ್ದಾರೆ. ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲದಂತೆ ನಾಗಾರ್ಜುನ ನಡೆದುಕೊಂಡು ಹೋಗಿದ್ದಾರೆ.

ಈ ಘಟನೆ ವಿಮಾನ ನಿಲ್ದಾಣದೊಳಗೆ ನಡೆದಿದೆ. ಪಾಪರಾಜಿಗಳು ನಾಗಾರ್ಜುನ ಅವರ ವಿಡಿಯೋ, ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿಯೇ ವಯಸ್ಸಾದ ವ್ಯಕ್ತಿಯ ಮೇಲೆ ಬಾಡಿಗಾರ್ಡ್ ದರ್ಪ ನಡೆಸಿರುವುದು ಕೂಡ ರೆಕಾರ್ಡ್ ಆಗಿದೆ. ಯಾವುದೇ ಮುಲಾಜಿಲ್ಲದೇ ಅಭಿಮಾನಿಯೊಬ್ಬರನ್ನು ಹೀಗೆ ಎಳೆದು ಎಸೆಯುವುದಕ್ಕೆ ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾಗಾರ್ಜುನ ಈ ಘಟನೆಯನ್ನು ಗಮನಿಸದೆ ಮುಂದೆ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕ್ಷಮೆ ಕೇಳಿದ ನಟ ನಾಗಾರ್ಜುನ ಅಕ್ಕಿನೇನಿ
ಈ ವಿಡಿಯೋ ಇಂಟರ್ನೆಟ್‌ನಾದ್ಯಂತ ವೈರಲ್ ಆಗಿದ್ದು, ಹಲವರು ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರನ್ನು ಟೀಕಿಸಲು ಪ್ರಾರಂಭಿಸಿದರು. ಸ್ಟಾರ್ ನಟನ ವರ್ತನೆ ಅಸಭ್ಯವಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನೆಟ್ಟಿಗರು ತರಾಟೆ ತೆಗೆದುಕೊಂಡ ಬೆನ್ನಲ್ಲೇ ನಟ ತನ್ನ ಸೋಶಿಯಲ್ ಮಿಡಿಯಾ ಫ್ಲಾಟ್‌ಫಾರಂಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ಘಟನೆಯ ವೀಡಿಯೊವನ್ನು ಹಂಚಿಕೊಂಡಿರುವ ನಟ ನಾಗಾರ್ಜುನ ಅಕ್ಕಿನೇನಿ, "ಇದು ಈಗತಾನೆ ನನ್ನ ಗಮನಕ್ಕೆ ಬಂದಿದೆ ... ಇದು ಸಂಭವಿಸಬಾರದಿತ್ತು !! ನಾನು ಸಜ್ಜನರಲ್ಲಿ ಕ್ಷಮೆಯಾಚಿಸುತ್ತೇನೆ ಮತ್ತು ಭವಿಷ್ಯದಲ್ಲಿ ಹೀಗಾಗದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇನೆ " ಎಂದು ಬರೆದುಕೊಂಡು ಕ್ಷಮೆಯಾಚಿಸಿದ್ದಾರೆ.
This just came to my notice … this shouldn’t have happened!!
— Nagarjuna Akkineni (@iamnagarjuna) June 23, 2024
I apologise to the gentleman 🙏and will take necessary precautions that it will not happen in the future !! https://t.co/d8bsIgxfI8
ನಟ ನಾಗಾರ್ಜುನ ಅವರು ದಕ್ಷಿಣ ಭಾರತದಾದ್ಯಂತ, ವಿಶೇಷವಾಗಿ ತೆಲುಗು ರಾಜ್ಯಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತೆಲುಗು ಚಲನಚಿತ್ರಗಳಲ್ಲಿನ ಅಭಿನಯಕ್ಕಾಗಿ ಫೇಮಸ್ ಆಗಿದ್ದರೂ, ಅವರು ಅನೇಕ ತಮಿಳು ಮತ್ತು ಹಿಂದಿ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಗೀತಾಂಜಲಿ ಸಿನಿಮಾದಲ್ಲಿ ನಟಿಸಿದ್ದಾರೆ.
ಅನ್ನಮಯ್ಯ ಸಿನಿಮಾಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. 1990 ರ ದಶಕ ಮತ್ತು 2000 ರ ದಶಕದ ಆರಂಭದಲ್ಲಿ ಉತ್ತುಂಗಕ್ಕೇರಿದ ಅವರ ವೃತ್ತಿಜೀವನದಲ್ಲಿ ತೆಲುಗು ಸಿನಿರಂಗ್ಕಕೆ ಅನೇಕ ಬ್ಲಾಕ್‌ಬಸ್ಟರ್‌ಗಳನ್ನು ನೀಡಿದೆ.












Click it and Unblock the Notifications