Darshan Thoogudeepa: ಹಂದಿ ರಕ್ತ ಬಳಸಿ ದರ್ಶನ್ ವಿರುದ್ಧ ಮಾಟ: ಡಿ-ಬಾಸ್ ಮತ್ತೆ ಮೈಸೂರಿಗೆ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಪ್ರಸ್ತುತ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಕೋರ್ಟ್, ಆಸ್ಪತ್ರೆ ಎಂದು ಸುಸ್ತಾಗಿದ್ದ ಡಿ-ಬಾಸ್ ತಮ್ಮ ತಾಯಿ, ಸಾಕುಪ್ರಾಣಿ ಅಲ್ಲದೆ ಆತ್ಮೀಯರೊಂದಿಗೆ ಕಾಲ ಕಳೆದು ಕೊಂಚ ರಿಲೀಫ್ ಆಗಿದ್ದಾರೆ. ಅವರು ಮೈಸೂರಿನಲ್ಲಿ ಉಳಿಯಲು ಕೋರ್ಟ್ ನೀಡಿದ್ದ ಅವಧಿ ಜನವರಿ 5ಕ್ಕೆ ಪೂರ್ಣಗೊಂಡಿದ್ದು ಅವರು ಮತ್ತೆ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಈ ನಡುವೆ ಹಂದಿ ರಕ್ತ ಬಳಸಿ ಬೆಂಗಳೂರು ಉದ್ಯಮಿಯೊಬ್ಬರು ದರ್ಶನ್ ವಿರುದ್ಧ ಮಾಟ ಮಾಡಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೆಲ್ಲಾ ಬೆಳವಣಿಗೆಗಳ ನಡುವೆ ದರ್ಶನ್ ಮತ್ತೆ ಮೈಸೂರಿಗೆ ವಾಪಾಸ್ ತೆರಳುವ ಮನಸ್ಸು ಮಾಡಿದ್ದಾರೆ.

ಹೌದು... ಬೆಂಗಳೂರು ಬಿಟ್ಟು ಬೇರೆ ಕಡೆ ಪ್ರಯಾಣ ಮಾಡದಿರಲು ಷರತ್ತು ವಿಧಿಸಿ ಕೋರ್ಟ್ ದರ್ಶನ್‌ಗೆ ಜಾಮೀನು ನೀಡಿತ್ತು. ಆದರೆ ಪೂರ್ಣಾವಧಿ ಜಾಮೀನು ಪಡೆದ ಬಳಿಕ ದರ್ಶನ್ ತಮ್ಮ ತಾಯಿ ಹಾಗೂ ಸಾಕುಪ್ರಾಣಿಗಳನ್ನು ಕಾಣಲು ಕೋರ್ಟ್‌ನಿಂದ ಅನುಮತಿ ಪಡೆದಿದ್ದರು. ಕೋರ್ಟ್‌ ದರ್ಶನ್ ಅವರಿಗೆ ಜನವರಿ 5ರ ವರೆಗೆ ಮೈಸೂರಿನಲ್ಲಿ ಇರಲು ಅವಕಾಶವನ್ನು ನೀಡಿತ್ತು.

black magic against darshan thoogudeepa d-boss back to mysuru

ಈ ಅವಧಿಯಲ್ಲಿ ದರ್ಶನ್ ತಮ್ಮ ತಾಯಿ, ಸಾಕುಪ್ರಾಣಿ ಅಲ್ಲದೆ ತಮ್ಮ ಸಂಬಂಧಿಕರೊಂದಿಗೆ ಕಾಲ ಕಳೆಯುವುದು ಮಾತ್ರವಲ್ಲದೆ ಮೈಸೂರಿನಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ ವೈದ್ಯರನ್ನು ಕಂಡು ಫಿಸಿಯೋಥಿರೋಪಿ ಮಾಡಿಸಿಕೊಳ್ಳುತ್ತಾ ತಮ್ಮ ಕಾಲು ನೋವು ವಾಸಿ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಕೋರ್ಟ್ ಅವಧಿ ಮುಗಿದರೂ ಕೂಡ ದರ್ಶನ್‌ಗೆ ಮೈಸೂರು ಬಿಟ್ಟು ಇರಲು ಆಗುತ್ತಿಲ್ಲ. ತೋಟದ ಮನೆಯಲ್ಲಿ ಕಾಲ ಕಳೆಯಲು ಬಯಸುತ್ತಿದ್ದಾರೆ. ಇದರಿಂದಾಗಿ ಮೈಸೂರಿನಲ್ಲಿ ಉಳಿಯಲು ಮತ್ತಷ್ಟು ಕಾಲಾವಕಾಶ ಕೋರಿ ವಕೀಲರಿಂದ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ ದಾಸ. ಹೀಗಾಗಿ ಕೋರ್ಟ್‌ ಅನುಮತಿ ಪಡೆದು ದರ್ಶನ್ ಮತ್ತೆ ಮೈಸೂರಿಗೆ ತೆರಳಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇಷ್ಟೆಲ್ಲಾ ಆದರೂ ಕೂಡ ಕಾಲು ನೋವಿದ್ರೂ ಕಾಯಕವೇ ಕೈಲಾಸ ಎಂದು ತಮ್ಮ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದಾರೆ ದರ್ಶನ್.

ಕಾಲು ನೋವಿದ್ರೂ ಕಾಯಕವೇ ಕೈಲಾಸ ಎಂದ ದಾಸ

ಹೌದು... ದರ್ಶನ್ ಅವರಿಗೆ ಪ್ರಸ್ತುತ ಬೆನ್ನು ನೋವು ಕಡಿಮೆ ಆಗಿದ್ದು ಕಾಲು ನೋವು ಹೆಚ್ಚಾಗಿದೆ. ಇದರಿಂದ ಡಿ-ಬಾಸ್‌ಗೆ ನಡೆಯುವುದು ಸಿಕ್ಕಾಪಟ್ಟೆ ಕಷ್ಟವಾಗುತ್ತಿದೆ. ಕುಂಟುತ್ತಲೇ ದರ್ಶನ್ ತಮಗಿದ್ದ ಜವಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಡೆವಿಲ್ ಡಬ್ಬಿಂಗ್ ಪೂರ್ಣಗೊಳಿಸಿದ ದಾಸ ಶೂಟಿಂಗ್‌ಗೆ ಹೋಗಲು ಕೂಡ ಸಿದ್ಧತೆ ನಡೆಸಿದ್ದಾರೆ. ನೋವಿನಲ್ಲೂ ದರ್ಶನ್ ತಮಗಿದ್ದ ಜವಬ್ದಾರಿಗಳನ್ನು ಒಂದೊಂದಾಗಿ ಪೂರ್ಣಗೊಳಿಸುತ್ತಿದ್ದಾರೆ.

ದಾಸನಿಗೆ ಬೆಂಗಳೂರಿಗಿಂತ ಮೈಸೂರು ಬೆಸ್ಟ್ ಯಾಕೆ?

ದರ್ಶನ್ ಪ್ರಸ್ತುತ ಮೈಸೂರಿನಲ್ಲೇ ಇರಬೇಕು ಅನ್ನೋ ಯೋಜನೆ ಮಾಡಿದ್ದಾರೆ. ಯಾಕೆಂದರೆ ದರ್ಶನ್ ವೈದ್ಯರ ಸಲಹೆಯಂತೆ ಅವರು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ತಮ್ಮ ಕುಟುಂಬಸ್ಥರು ಹಾಗೂ ಸಾಕುಪ್ರಾಣಿಗಳೊಂದಿಗೆ ಕೆಟ್ಟ ಘಟನೆಯನ್ನು ಮರೆಯುತ್ತಾ ಮೈಂಡ್ ರಿಲೀಫ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ತಮ್ಮ ಸಿನಿಮಾ ಶೂಟಿಂಗ್‌ ಬಗ್ಗೆ ಕೂಡ ಯೋಚನೆಗೆ ಸಮಯ ನೀಡುತ್ತಿದ್ದಾರೆ. ಬೆಂಗಳೂರಿನಲ್ಲೇ ಇದ್ದರೆ ಎಲ್ಲಾ ನೆನಪುಗಳು ಮರೆಯುವುದು ಕೊಂಚ ಕಷ್ಟವಾಗಬಹುದು. ಹೀಗಾಗಿ ದರ್ಶನ್ ಅವರು ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‌ ನಲ್ಲಿ ಎಲ್ಲಾ ಘಟನೆಗಳನ್ನು ಮರೆಯುತ್ತಿದ್ದಾರೆ. ಮೈಸೂರಿನ ತೋಟದ ಮನೆ ಅವರಿಗೆ ಬೆಂಗಳೂರಿಗಿಂತ ಆರಾಮದಾಯಕ ಅನುಭವ ನೀಡುತ್ತಿದೆ. ದರ್ಶನ್‌ ವಿರುದ್ಧ ಮಾಟ ಮಾಡಿಸಲಾಗಿದಿಯಾ?

ಹಂದಿ ರಕ್ತ ಬಳಸಿ ದರ್ಶನ್ ವಿರುದ್ಧ ಮಾಟ

ಬೆಂಗಳೂರಿನ ರಿಯಲ್‌ ಎಸ್ಟೇಟ್ ಉದ್ಯಮಿಯೊಬ್ಬರು ಹಂದಿ ರಕ್ತ ಬಳಸಿ ದರ್ಶನ್ ವಿರುದ್ಧ ಮಾಟ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಮೂರು ವರ್ಷಗಳ ಹಿಂದೆ ಐದು ಲಕ್ಷ ಹಣ ಪಡೆದು ದರ್ಶನ್ ವಿರುದ್ಧ ಮಾಟ ಮಾಡಿಸಲಾಗಿತ್ತು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದೇ ಕಾರಣಕ್ಕೆ ದರ್ಶನ್ ಅವರಿಗೆ ಒಂದಾದ ಬಳಿಕ ಒಂದು ತೊಂದರೆಗಳು ಹೆಗಲೇರುತ್ತಿವೆ ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೂ ಕೂಡ ದರ್ಶನ್ ಬೆಂಗಳೂರಿನಲ್ಲಿ ಇರಲು ಮನಸ್ಸು ಮಾಡುತ್ತಿಲ್ಲ ಅಂತಲೂ ಹೇಳಲಾಗುತ್ತಿದೆ.

ದರ್ಶನ್ ಮತ್ತೆ ಮೈಸೂರಿಗೆ!

ಇದೆಲ್ಲಾ ಕಾರಣಗಳಿಂದಾಗಿ ದರ್ಶನ್ ಮತ್ತೆ ಮೈಸೂರಿಗೆ ತೆರಳುವ ಸಾಧ್ಯತೆ ಇದೆ. ಅವರ ವಕೀಲರ ಮೂಲಕ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಮೈಸೂರಿನಲ್ಲಿರಲು ಸಮಯವಕಾಶ ನೀಡುವಂತೆ ಮನವಿ ಮಾಡಿಕೊಳ್ಳುವ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಮತ್ತೆ ಮೈಸೂರಿಗೆ ಹೋಗುವುದು ಪಕ್ಕಾ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+