Bigg Boss: ನನಗೆ ಯಾರ್ ಸಿಕ್ರು ಓಕೆ ಮದುವೆ ಆಗ್ತೀನಿ ಎಂದ ತ್ರಿವಿಕ್ರಮ್
ಬಿಗ್‌ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ತ್ರಿವಿಕ್ರಮ್ ಅವರು ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ತಮಗೆ ಎಂಥಹ ಹುಡುಗಿ ಬೇಕು ಅನ್ನೋದನ್ನು ಹೇಳಿದ್ದಾರೆ. ಹಾಗಾದರೆ ತ್ರಿವಿಕ್ರಮ್ ಮದುವೆ ಆಗೋ ಹುಡುಗಿ ಹೇಗಿರಬೇಕು? ಈ ಪ್ರಶ್ನೆಗೆ ತ್ರಿವಿಕ್ರಮ್ ಹೇಳಿದ್ದೇನು?
ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ತ್ರಿವಿಕ್ರಮ್ ಸಾಕಷ್ಟು ಸುದ್ದಿ ವಾಹಿನಿಗಳ ಸಂದರ್ಶನದಲ್ಲಿ ಬಿಗ್‌ಬಾಸ್ ಜರ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ. ಹೀಗೊಂದು ಸಂದರ್ಶನದಲ್ಲಿ ತ್ರಿವಿಕ್ರಮ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮದುವೆ ಆಗೋ ಹುಡುಗಿ ಹೇಗಿರಬೇಕು ಅನ್ನೋ ಪ್ರಶ್ನೆಗೆ ತ್ರಿವಿಕ್ರಮ್ ಹೇಳಿದ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸಿದೆ.

'ನನಗೆ ವಯಸ್ಸು 30 ಆಗುತ್ತಾ ಬಂತು. ಹುಡುಗಿ ಹೀಗಿರಬೇಕು ಹಾಗಿರಬೇಕು ಅನ್ನೋ ವಯಸ್ಸು ನಂದಲ್ಲ. ನನ್ನನ್ನು ಅರ್ಥ ಮಾಡಿಕೊಂಡು. ನನ್ನ ಇಂಡಸ್ಟ್ರಿ ಕೆಲಸ ಅರ್ಥ ಮಾಡಿಕೊಂಡು ಹೋಗುವಂತಹ ಹುಡುಗಿ ಸಿಕ್ರೆ ಸಾಕು. ನನಗೆ ಯಾರ್ ಸಿಕ್ರು ಓಕೆ ಮದುವೆ ಆಗ್ತೀನಿ' ಎಂದು ಹೇಳಿದ್ದಾರೆ. ಇದೇ ವೇಳೆ ಭವ್ಯಾ ಅವರಿಗೆ ಪ್ರಪೋಸ್ ಮಾಡಿದ್ರಿ ಅದರ ಕತೆ ಏನು ಎನ್ನುವ ಪ್ರಶ್ನೆಗೂ ತ್ರಿವಿಕ್ರಮ್ ಉತ್ತರಿಸಿದ್ದಾರೆ.
ಭವ್ಯಾ ನನಗೆ ತುಂಬಾ ಒಳ್ಳೆ ಫ್ರೆಂಡ್ ಅಷ್ಟೆ- ತ್ರಿವಿಕ್ರಮ್
'ಬಿಗ್‌ಬಾಸ್ ಮನೆಯಲ್ಲಿ ನಾನು ಎಲ್ಲರಿಗೂ ಐ ಲವ್ ಯು ಹೇಳಿದ್ದೇನೆ. ಚೈತ್ರಾಕ್ಕ, ಮೋಕ್ಷಿತಾ, ಮಾನಸಾಗೂ ಹೇಳಿದ್ದೆ. ಹಾಗೇ ಭವ್ಯಾಗೂ ಹೇಳಿದ್ದೆ. ಆದರೆ ಬೇರೆಯವರಿಗೆ ಹೇಳಿದ್ದು ಯಾವುದೂ ಕೂಡ ಹೈಲೆಟ್ ಆಗಿಲ್ಲ. ಆದರೆ ಭವ್ಯಾಗೆ ಹೇಳಿದ್ದು ಮಾತ್ರ ಹೈಲೆಟ್ ಆಗಿದೆ. ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಷ್ಟೆ. ನಾನು ಪ್ರಪೋಸ್ ಮಾಡೋದಾದ್ರೆ ಎಲ್ಲರ ಮುಂದೆ ಓಪನ್ ಅಪ್ ಆಗಿ ಹೇಳುತ್ತೇನೆ. ಅದ್ರಲ್ಲಿ ಮುಚ್ಚು ಮರೆ ಏನೂ ಇಲ್ಲ. ಭವ್ಯಾ ಹಾಗೂ ನಾನು ತುಂಬಾ ಒಳ್ಳೆಯ ಫ್ರೆಂಡ್ಸ್ ಅದ್ರಲ್ಲಿ ಎರಡು ಮಾತಿಲ್ಲ' ಎಂದಿದ್ದಾರೆ ತ್ರಿವಿಕ್ರಮ್.
ಹಾಗಾದರೆ ನಿಮ್ಮ ತಾಯಿ ಬಂದು ಭವ್ಯಾ ತ್ರಿವಿಕ್ರಮ್ ಅವರದ್ದು ರಾಧೆ-ಕೃಷ್ಣನಂತೆ ಜೋಡಿ ಎಂದು ಹೇಳಿದ್ರು ಎಂದು ಕೇಳಿದಕ್ಕೆ ತ್ರಿವಿಕ್ರಮ್- 'ಅದು ತುಂಬಾ ಒಳ್ಳೆಯ ಫ್ರೆಂಡ್ಸ್ ಅಂತ ಹೇಳಲು ಹೋಗಿ ಅಮ್ಮ ಆ ರೀತಿ ಹೇಳಿರುತ್ತಾರೆ ಅಷ್ಟೇ. ನನಗೆ ನಮ್ಮ ಮನೆಯಿಂದ ಗ್ರೀನ್ ಸಿಗ್ನಲ್ ಬೇಕಿಲ್ಲ. ನನಗೆ ಏನ್ ಬೇಕೋ ಅದನ್ನು ನಾನು ಮಾಡ್ತೀನಿ' ಎಂದಿದ್ದಾರೆ ತ್ರಿವಿಕ್ರಮ್.
'ರನ್ನರ್ ಅಪ್ ಆಗಿದ್ದು ಬೇಸರ ಇಲ್ಲ'
ಇನ್ನೂ ತ್ರಿವಿಕ್ರಮ್ ಅವರಿಗೆ ತಾವು ರನ್ನರ್ ಅಪ್ ಆಗಿದ್ದು ಬೇಸರ ಇಲ್ವಂತೆ. ಈ ಬಗ್ಗೆ ಕೇಳಿದ್ದಕ್ಕೆ ಅವರು, 'ನನಗೆ ಏನ್ ಬೇಕು ಅಂತ ಹೋಗಿದ್ನೋ ಅದು ನನಗೆ ಸಿಕ್ಕಿದೆ. ನನ್ ಟಾರ್ಗೇಟ್ ನಾನು ರೀಚ್ ಮಾಡಿದ್ದೇನೆ. ಬಿಗ್‌ಬಾಸ್ 120 ದಿನಗಳ ಜರ್ನಿ. ಈ ಜರ್ನಿಗೆ ನಾನು ರೆಡಿಯಾಗಿ ಹೋಗಿದ್ದೆ. ನನಗೆ ಬೇಕಾಗಿರುವುದು ಬಿಗ್‌ಬಾಸ್ ಮನೆಯಲ್ಲಿ ಸಿಕ್ಕಿದೆ. ಅಷ್ಟು ನನಗೆ ಸಾಕು' ಎಂದಿದ್ದಾರೆ.
ಬಿಗ್‌ಬಾಸ್ ಮನೆಗೆ ಹೋಗುವಾಗ ತಾಯಿ, ಸ್ನೇಹಿತರನ್ನು ಬಿಟ್ಟು ಹೋಗೋ ಟೆನ್ಶನ್ ಇತ್ತು. ಹಾಗೆ ಬಿಗ್‌ಬಾಸ್ ಮನೆಯನ್ನು ಬಿಟ್ಟು ಬರಬೇಕಾದಾಗ ಬಿಗ್‌ಬಾಸ್ ಧ್ವನಿ, ಅಲ್ಲಿನ ಸ್ನೇಹಿತರು ಬಿಟ್ಟು ಬರೋದು ಕಷ್ಟ ಆಗಿತ್ತು. ಇಲ್ಲಿವರೆಗೂ ಇದ್ವಿ ಅನ್ನೋ ಖುಷಿ ಇದೆ ಎಂದು ತ್ರಿವಿಕ್ರಮ್ ತಮ್ಮ ಬಿಗ್‌ಬಾಸ್ ಜರ್ನಿಯ ಬಗ್ಗೆ ಹಂಚಿಕೊಂಡಿದ್ದಾರೆ.
ಸುದೀಪ್ ಇಲ್ಲದ ಬಿಗ್‌ಬಾಸ್ ದೇವರಿಲ್ಲದ ಗರ್ಭಗುಡಿ ಇದ್ದಂತೆ- ತ್ರಿವಿಕ್ರಮ್
ಇನ್ನೂ ಸುದೀಪ್ ಅವರು ಬಿಗ್‌ಬಾಸ್ ಹೋಸ್ಟ್ ಆಗುವುದು ಇದೇ ಕೊನೆ. ಈ ಬಗ್ಗೆ ಮಾತನಾಡಿದ ತ್ರಿವಿಕ್ರಮ್ ಅವರು 'ಸುದೀಪ್ ಅಣ್ಣ ಇಲ್ಲದ ಬಿಗ್‌ಬಾಸ್ ದೇವರಿಲ್ಲದ ಗರ್ಭಗುಡಿ ಇದ್ದಂತೆ. ನಾನು ಮುಂದಿನ ವರ್ಷ ಹೋಗಿದ್ದರೆ ನನಗೇ ತುಂಬಾ ಬೇಸರ ಆಗುತ್ತಿತ್ತು. ಆದರೆ ನಾನು ಅವರು ಇರುವಾಗಲೇ ಹೋಗಿದ್ದಕ್ಕೆ ತುಂಬಾ ಖುಷಿ ಇದೆ' ಎಂದಿದ್ದಾರೆ.












Click it and Unblock the Notifications