Bigg Boss: 'ತಾಕತ್ತಿದ್ದರೆ ಸಿಂಗಲ್ಲಾಗಿ ಆಡು' ಗೌತಮಿಗೆ ರಜತ್ ಸವಾಲ್
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ರಜತ್ ಕಿಶನ್ ಭಾರೀ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರ ಆಟ, ಕೆಲ ಮಾತುಗಳು ಬಿಗ್‌ಬಾಸ್ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಿವೆ. ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ ಒಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಇಷ್ಟೊಂದು ಜನ ಮೆಚ್ಚುಗೆ ಗಳಿಸಿರುವುದು ಅಂದರೆ ತಪ್ಪಾಗುವುದಿಲ್ಲ. ರಜತ್ ಜಗಳದಲ್ಲಿ ಬಳಕೆ ಮಾಡುವ ಕೆಟ್ಟ ಪದಗಳಿಂದ ದೂರ ಉಳಿದರೆ ಟಾಪ್ ಸ್ಪರ್ಧಿ ಆಗುವುದರಲ್ಲಿ ಅನುಮಾನವೇ ಇಲ್ಲ. ಆದರೆ ರಜತ್ ನಿತ್ಯ ಒಬ್ಬರಿಲ್ಲ ಒಬ್ಬ ಸ್ಪರ್ಧಿಯೊಂದಿಗೆ ಜಗಳವಾಡುತ್ತಿರುವುದು ಮನೆಯ ಇತರ ಸದಸ್ಯರಿಗೆ ಮಾತ್ರವಲ್ಲ ಬಿಗ್‌ಬಾಸ್ ವೀಕ್ಷಕರಿಗೂ ಕಿರಿಕಿರಿಯನ್ನುಂಟು ಮಾಡಿದೆ.
ಹೌದು... ಬಿಗ್‌ಬಾಸ್ ನೀಡಿದ ಟಾಸ್ಕ್‌ವೊಂದರಲ್ಲಿ ರಜತ್ ಹಾಗೂ ಗೌತಮಿ ನಡುವೆ ವಾಗ್ವಾದವಾಗಿದೆ. ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ವೀಡಿಯೋ ಕ್ಲಿಪ್‌ನಲ್ಲಿ ರಜತ್ ಹಾಗೂ ಗೌತಮಿ ನಡುವೆ ಜಗಳ ನಡೆದಿದೆ. ರಜತ್ ಕಿಶನ್ ಗೌತಮಿ ಜಾದವ್ ವಿರುದ್ಧ ಕೂಗಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ರಜತ್ ಹಾಗೂ ಗೌತಮಿ ನಡುವೆ ಗಲಾಟೆ
ವೈರಲ್ ಆದ ವೀಡಿಯೋದ ಆರಂಭದಲ್ಲಿ ಬಿಗ್‌ಬಾಸ್, ಮನೆಯ ಎಲ್ಲಾ ಸದಸ್ಯರಿಗೆ 60 ನಿಮಿಷದಲ್ಲಿ ಮನೆಯಿಡೀ ಹರಡಿದ ಪೇಪರ್ ಅನ್ನು ತೆಗೆದು ಸ್ವಚ್ಚಗೊಳಿಸುವಂತೆ ತಿಳಿಸುತ್ತಾರೆ. ಮನೆಯಲ್ಲಿ ಎಲ್ಲಾ ಸದಸ್ಯರು ಈ ಟಾಸ್ಕ್‌ನಲ್ಲಿ ಭಾಗಿಯಾಗಿ ಮನೆ ಗುಡುಸಿ ಸ್ವಚ್ಚಗೊಳಿಸಲು ಶುರುಮಾಡುತ್ತಾರೆ. ಆದರೆ ರಜತ್ ಮಾತ್ರ ಚೇರ್ ಮೇಲೆ ಸುಮ್ಮನೆ ಕುಳಿತಿರುವುದು ಕಂಡು ಬಂದಿದೆ. ಇದರಿಂದಾಗಿ ಗೌತಮಿ ಹಾಗೂ ರಜತ್ ನಡುವೆ ಮಾತಿಗೆ ಮಾತು ಜೋರಾಗಿದ್ದು ಕಂಡು ಬಂದಿದೆ.
'ಡೈಲಾಗ್ ಹೊಡಿ ಕುತ್ಕೋ ಒಂದಿಷ್ಟು ಹಣ್ಣು ತಿನ್ನು' ಎಂದು ಗೌತಮಿ ಕೆಲಸ ಮಾಡದೆ ಸುಮ್ಮನೆ ಕುಳಿತ ರಜತ್‌ಗೆ ಹೇಳುತ್ತಾರೆ. ಆಗ ರಜತ್ ಕೂಡ 'ನೀನೇನ್ ಮನೆಯಿಂದ ತಂದು ಕೊಟ್ಟಿದಿಯಾ' ಎಂದು ಪ್ರಶ್ನೆ ಮಾಡುತ್ತಾರೆ. ಹೀಗೇ ಮಾತಿಗೆ ಮಾತು ಬೆಳೆದು ರಜತ್ ಹಾಗೂ ಗೌತಮಿ ನಡುವೆ ಜೋರು ಜಗಳವಾಗಿದೆ.
ತಾಕತ್ತಿದ್ದರೆ ಸಿಂಗಲ್ಲಾಗಿ ಆಡು- ಗೌತಮಿಗೆ ರಜತ್ ಸವಾಲ್
ಇದೇ ವೇಳೆ, ಯಾರದ್ದೋ ಸಪೋರ್ಟ್ ತಗೊಂಡು ಆಡೋದು ಅಲ್ಲ ತಾಕತ್ತಿದ್ದರೆ ಸಿಂಗಲ್ ಆಗಿ ಆಡು ಎಂದು ಗೌತಮಿ ವಿರುದ್ಧ ರಜತ್ ಸಿಡಿದೆದ್ದಿದ್ದಾರೆ. ಆದರೆ ಇಲ್ಲಿ ರಜತ್ ಕೆಲಸ ಮಾಡದೆ ಸುಮ್ಮನೆ ಕುಳಿತಿದ್ದು ಯಾಕೆ? ಇದಕ್ಕೆ ಕಾರಣ ಏನು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಇಂದಿನ ಸಂಚಿಕೆಯಲ್ಲಿ ಇದಕ್ಕೆ ಉತ್ತರ ಗೊತ್ತಾಗಲಿದೆ.
ಧನ್‌ರಾಜ್ ಹಾಗೂ ರಜತ್ ನಡುವೆ ಜಗಳ
ಕಳೆದ ವಾರ ಧನ್‌ರಾಜ್ ಹಾಗೂ ರಜತ್ ನಡುವೆ ಜೋರಾಗಿ ಗಲಾಟೆ ನಡೆದಿತ್ತು. ಧನ್‌ರಾಜ್ ಅವರನ್ನು ರಜತ್ ಪಾಪು ಎಂದಿದ್ದಕ್ಕೆ ರಜತ್ ಕೆನ್ನೆಗೆ ತಟ್ಟಿ ಧನ್‌ರಾಜ್ ರಜತ್ ಅವರನ್ನು ಕೆಣಕಿದ್ದರು. ಇದಕ್ಕೆ ಸಿಡಿದೆದ್ದಿದ್ದ ರಜತ್ ಧನ್‌ರಾಜ್ ಮೇಲೆ ಕೈ ಮಾಡಲು ಮುಂದಾಗಿದ್ದರು. ಇಂತಹ ಘಟನೆ ನಡೆದಿರುವುದು ಇದೇ ಮೊದಲು ಆಲ್ಲ. ಈ ಹಿಂದೆ ಕೂಡ ರಜತ್‌ಗೂ ಮನೆಯ ಇತರ ಸದಸ್ಯರೊಂದಿಗೆ ಜಗಳವಾಗಿರುವುದು ಇದೆ.
ರಜತ್ ಬಿಗ್‌ಬಾಸ್ ಮನೆಗೆ ಆಗಮಿಸಿದ ಆರಂಭದಲ್ಲಿ ಗೋಲ್ಡ್ ಸುರೇಶ್ ಅವರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಆಗ ರಜತ್ ತುಂಬಾ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದರು. ಇದು ಬಿಗ್‌ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು. ರಜತ್ ಮಾತಿನಲ್ಲಿ ಸತ್ಯ ಇರಬಹುದು, ಅವರು ಆಟ ತುಂಬಾ ಚೆನ್ನಾಗಿಯೇ ಆಡುತ್ತಿರಬಹುದು. ಆದರೆ ಅವರು ಕೋಪದಲ್ಲಿ ಬಳಕೆ ಮಾಡುವ ಪದಗಳು ತುಂಬಾ ಕೆಟ್ಟದಾಗಿರುತ್ತವೆ. ಇದು ಅವರ ಬಿಗ್‌ಬಾಸ್ ಮನೆಯಲ್ಲಿ ವಿನ್ನರ ಸ್ಥಾನವನ್ನು ಕಿತ್ತುಕೊಳ್ಳುತ್ತಿದೆ. ಒಟ್ಟನಲ್ಲಿ ರಜತ್ ಕೊಂಚ ತಾಳ್ಮೆಯಿಂದ ವರ್ತಿಸಿದರೆ ವಿನ್ನರ್ ರೇಸ್‌ನಲ್ಲಿ ಖಂಡಿತಾ ಇರುತ್ತಾರೆ. ಆದರೆ ತಾಳ್ಮೆ ಕಳೆದುಕೊಂಡರೆ ಅವರು ಬಹುಬೇಗ ಮನೆಗೂ ಹೋಗಬಹುದು.












Click it and Unblock the Notifications