Puneeth RajKumar: ಅಪ್ಪುಗೆ ಕೊಟ್ಟ ಗಿಫ್ಟ್ ಬಗ್ಗೆ ಬಿಗ್‌ಬಾಸ್ ಪ್ರಥಮ್ ಪೋಸ್ಟ್: ಫ್ಯಾನ್ಸ್ ಕ್ಲಾಸ್!
ನಟ ದಿ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಬಿಗ್‌ಬಾಸ್ ವಿನ್ನರ್, ನಟ ಒಳ್ಳೆ ಹುಡುಗ ಪ್ರಥಮ್ ಅವರು ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಾಜ್ಯದಾದ್ಯಂತ ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನಾಚರಣೆಯ ಸಂಭ್ರಮಾಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅವರ ಪುಸ್ತಕ ಬಿಡುಗಡೆ ಹಾಗೂ ಸಮಾಜ ಸೇವೆ ಕೆಲಸಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಹಲವರು ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಪ್ರಥಮ್ ಸಹ ಪುನೀತ್ ರಾಜ್‌ಕುಮಾರ್ ಅವರಿಗೆ ಕೊಟ್ಟಿದ್ದ ಚಿನ್ನದ ಗಿಫ್ಟ್‌ನ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ನೆಟ್ಟಿಗರು ಹಾಗೂ ಅವರ ಅಪ್ಪು ಅಭಿಮಾನಿಗಳು ಗರಂ ಆಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಜನ್ಮದಿನದ ಸಂದರ್ಭದಲ್ಲಿ ನೀಡಿದ್ದ ಸಣ್ಣ ಗಿಫ್ಟ್‌ನ ಬಗ್ಗೆ ಹಾಗೂ ಅದಕ್ಕೆ ಪುನೀತ್ ರಾಜ್‌ಕುಮಾರ್ ಅವರು ರಿಯಾಕ್ಷನ್ ಬಗ್ಗೆ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜನ್ಮದಿನದಂದು ಈ ಪೋಸ್ಟ್ ಮಾಡಲಾಗಿದ್ದು. ಈಗ ಭಾರೀ ವೈರಲ್ ಆಗುತ್ತಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿರುವ ಅವರು, ಅದೆಲ್ಲಾ ಸರಿ...ಇನ್ಮೊಂದೆ ನನ್ನಂತ ಹೊಸಬರಿಗೆ ಈಥರ ಬುದ್ಧಿ ಹೇಳೋರು ಯಾರು?🤔🤔 ಒಂದು ಭಾವಪೂರ್ಣ ನೆನಪು! ಎಂದಿದ್ದಾರೆ.

ಮುಂದುವರಿದು ಬಿಗ್ಬಾಸ್ ಗೆದ್ದಮೇಲೆ 1st Birthdayಗೆ ಸದಾ ಸ್ಮರಣೆಯಲ್ಲಿರಲೆಂದು ಉಂಗುರ ಕೊಟ್ಟಾಗ ಅಪ್ಪು ಸರ್ ಏನ್ ಹೇಳಿದ್ರು ಗೊತ್ತಾ?
ಅಯ್ಯೋ ಈ ರಷ್‌ನಲ್ಲಿ ಎಲ್ಲಾದ್ರೂ ಬಿದೋದ್ರೆ ? ಸಿಕ್ಕವನು ಚೆನ್ನಾಗಿರ್ಲಿ ಬಿಡು ಅಂದ್ರು 😅 ನನಗೆ ಸ್ವಲ್ಪ ಬೇಜಾರಾಯ್ತು. ತಕ್ಷಣ ಅರ್ಥ ಮಾಡಿಕೊಂಡು ಸಮಾಧಾನ ಮಾಡಿ, ಅಯ್ಯೋ ಸುಮ್ನೆ ಹೇಳಿದೆ ನಮ್ ಬಿಗ್ಬಾಸ್ ಕೊಟ್ಟಿರೋದಪ್ಪ, ಜೋಪಾನವಾಗಿ ಇಟ್ಕೋತೀನಿ ಅಂದ ಮಾತು ಇನ್ನು ಈ ಕಿವಿಯಲ್ಲಿದೆ ಇದೆ ಅಂತ ನೆನಪಿಸಿಕೊಂಡಿದ್ದಾರೆ.
ಅವರ ಪಕ್ಕದಲ್ಲಿದ್ದ foreign friendಗೆ ನನ್ನ ತೋರಿಸಿ ಇವನಿಗೆ ಅಂತ design ಮಾಡಿದ ಶೋ ಟೈಮ್ ಸಿಕ್ಕಾಗ ನೋಡ್ತಿದ್ನಪ್ಪ...ನೀನ್ ಮಾಡ್ತಿದ್ದ ಕಿತಾಪತಿನ... ನೀನ್ ಗೆದ್ದಿದ್ದು ಖುಷಿ ಆಯ್ತು ಬಿಡೋ! ಮೊದ್ಲು ಮನೆ ಕಟ್ಟು ನಮ್ಮ ಹುಡುಗ್ರು ಸೆಟಲ್ ಆಗ್ಬೇಕು. ಯಾವುದಕ್ಕೂ ಕೇರ್ ಮಾಡ್ಬೇಡ, ಚೆನ್ನಾಗಿ ಬದುಕು... ಅಂತ ಹೇಳಿದ್ದರು. ಅದೆಲ್ಲವೂ ನನ್ನ ಕಿವಿಯಲ್ಲಿದೆ. ಈಗ ನನ್ನ ಪ್ರಶ್ನೆ ಏನಂದ್ರೆ, ಇದೆಲ್ಲಾ ಓಕೆ ಇನ್ಮುಂದೆ ನನಗೆ ಬುದ್ಧಿ ಹೇಳೋರು ಯಾರು ಅಂತ ಪ್ರಥಮ್ ಪೋಸ್ಟ್ ಮಾಡಿಕೊಂಡಿದ್ದಾರೆ.
ಫ್ಯಾನ್ಸ್ ಗರಂ: ಇದಕ್ಕೆ ಫ್ಯಾನ್ಸ್ ಸಹ ಗರಂ ಆಗಿದ್ದಾರೆ. ಕೊಟ್ಟಿರುವ ಗಿಫ್ಟ್ ಅನ್ನು ಯಾರಾದರೂ ಈ ರೀತಿ ಹೇಳಿಕೊಳ್ಳುತ್ತಾರಾ ಅಂತ ಕೇಳಿದರೆ. ಇನ್ನೂ ಕೆಲವರು ಯಾರಿಗೆ ಏನಿಲ್ಲವೋ ಅದನ್ನೇ ಹೇಳುತ್ತಾರೆ ಅಂತಲೂ. ಇನ್ನೂ ಕೆಲವರು ಕನ್ನಡ ಚಿತ್ರರಂಗದಲ್ಲಿ ಫ್ಯಾನ್ಸ್‌ಗಳ ನಡುವೆ ಫ್ಯಾನ್ಸ್ ವಾರ್ ಶುರುವಾಗುವುದಕ್ಕೆ ಇವರೇ ಕಾರಣ ಅಂತಲೂ ಆರೋಪ ಮಾಡಿದ್ದಾರೆ.
ಯಾರಿಲ್ಲ ಬಿಡು ಬ್ರೋ: ಈ ಪೋಸ್ಟ್‌ಗೆ ಹಲವು ಪುನೀತ್ ಅಭಿಮಾನಿಗಳು ರಿಯಾಕ್ಟ್ ಮಾಡಿದ್ದಾರೆ. ನಟ ದಿ. ಪುನೀತ್ ರಾಜ್‌ಕುಮಾರ್ ಅವರ ರೀತಿ ಯಾರೂ ಇಲ್ಲಿ ಬಿಡಿ ಬ್ರೋ ಅಂತ ಕಮೆಂಟ್ ಮಾಡಿದ್ದಾರೆ. ಪ್ರಥಮ ಅವರೇ ನಿಮಗೆ ಒಳ್ಳೆಯದು ಆಗಲಿ.. ಪುನೀತ್ ಸರ್ ಅಭಿಮಾನಿಯಾಗಿರಿ ಎನ್ನುವ ಕಮೆಂಟ್‌ಗಳು ಬಂದಿವೆ. ಇನ್ನೂ ಕೆಲವರು ಪ್ರಥಮ್ ಅವರು ಪ್ರಚಾರದ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲವರು ಪುನೀತ್ ರಾಜ್‌ಕುಮಾರ್ ಅವರ ರೀತಿ ಇನ್ನೊಬ್ಬರು ಬರುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.












Click it and Unblock the Notifications