ನನ್ನ ಐಶ್ವರ್ಯಾ ಮಧ್ಯೆ ಬಂದ್ರೆ ಶಿಶಿರ್‌ ಮುಖಕ್ಕೆ ಹೊಡೀತೀನಿ: ವಾರ್ನಿಂಗ್‌ ಕೊಟ್ಟ ಬಿಗ್‌ಬಾಸ್‌ ವಿನ್ನರ್‌

ಕನ್ನಡ ಬಿಗ್‌ಬಾಸ್‌ ಸೀಸನ್‌ 11ರ ಸ್ಪರ್ಧಿಗಳಾಗಿದ್ದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ಇವರ ಒಡನಾಟ ಕಂಡು ಎಲ್ಲರೂ ಮಸ್ತ್‌ ಜೋಡಿ ಎಂದು ಕಾಲೆಳೆದಿದ್ದರು. ಬಿಗ್‌ಬಾಸ್‌ ಮನೆಯಿಂದ ಹೊರಬಂದ ನಂತರ ಇವರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಟಾಕ್‌ ಆಫ್‌ ದಿ ಟೌನ್‌ ಆಗಿದ್ದಾರೆ. ಆದರೆ ಶಿಶಿರ್‌ ಹಾಗೂ ಐಶ್ವರ್ಯಾ ಮೊದಲಿನಿಂದಲೂ ಸ್ನೇಹಿತರು. ಕಿರುತೆರೆಯಲ್ಲೇ ಇಬ್ಬರೂ ಮಿಂಚಿದ್ದರಿಂದ ಪರಸ್ಪರ ಪರಿಚಿತರು. ಆದರೆ, ಇದೀಗ ಇವರಿಬ್ಬರ ನಡುವೆ ಮತ್ತೊಬ್ಬರ ಎಂಟ್ರಿಯಾಗಿದೆ. ಅಲ್ಲದೆ ಶಿಶಿರ್‌ಗೆ ಐಶ್ವರ್ಯಾ ವಿಚಾರವಾಗಿ ವಾರ್ನಿಂಗ್‌ ಕೂಡ ಆಗಿದೆ.

ಹೌದು, ಶಿಶಿರ್‌ ಅವರಿಗೆ ಬಿಗ್‌ಬಾಸ್‌ ಸ್ಪರ್ಧಿಯಿಂದಲೇ ವಾರ್ನಿಂಗ್‌ ಬಂದಿದೆ. ಐಶ್ವರ್ಯಾ ಜೊತೆಯಲ್ಲಿರುವಾಗಲೇ ಶಿಶಿರ್‌ ಹೆಸರು ಉಲ್ಲೇಖಿಸಿ ವಾರ್ನ್‌ ಮಾಡಲಾಗಿದೆ. ಇಷ್ಟಕ್ಕೂ ಶಿಶಿರ್‌-ಐಶ್ವರ್ಯಾ ನಡುವೆ ಈಗ ಎಂಟ್ರಿ ಕೊಟ್ಟಿರೋದು ಬೇರೆ ಯಾರೂ ಅಲ್ಲ, ಬಿಗ್‌ಬಾಸ್‌ ವಿನ್ನರ್‌ ಆಗಿದ್ದ ಒಳ್ಳೆ ಹುಡುಗ ಪ್ರಥಮ್.‌ ಹೌದು, ಪ್ರಥಮ್‌ ಅವರೇ ಶಿಶಿರ್‌ಗೆ ವಾರ್ನಿಂಗ್‌ ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಐಶ್ವರ್ಯಾ ಸಿಂಧೋಗಿ ಕೂಡ ಇದ್ದು, ಪ್ರಥಮ್‌ ಮಾತಿಗೆ ಶಾಕ್‌ ಆಗಿದ್ದಾರೆ.

Bigg Boss Kannada Winner Pratham Warns Shishir Shastry Over Aishwarya Sindhogi

ವೈರಲ್‌ ವಿಡಿಯೋದಲ್ಲಿ ಪ್ರಥಮ್‌ ಹಾಗೂ ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಯಾವುದೋ ಕಾರ್ಯಕ್ರಮದಲ್ಲಿ ಇವರು ಭೇಟಿಯಾಗಿದ್ದಾಗ ಇವರಿಬ್ಬರೂ ಮಾತನಾಡಿದ್ದಾರೆ. ಈ ವೇಳೆ ಪ್ರಥಮ್‌ ಐಶ್ವರ್ಯಾ ಜೊತೆ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದಾರೆ. ನಾವಿಬ್ಬರೂ ಖಂಡಿತವಾಗಿಯೂ ಸಿನಿಮಾ ಮಾಡೋಣ ಎಂದಿದ್ದಾರೆ. ಇದಕ್ಕೆ ಐಶ್ವರ್ಯಾ ಇನ್ನೂ ಯಾವಾಗ? ನನಗೆ ಮಗುವಾದಾಗ್ಲಾ? ಇಲ್ಲ ನಿಮಗೆ ಮೊಮ್ಮಕ್ಕಳಾದ ಮೇಲಾ? ಎಂದು ಪ್ರಥಮ್‌ ಕಾಲೆಳೆದಿದ್ದಾರೆ.

ನಾವಿಬ್ಬರೂ ಜೊತೆಯಲ್ಲಿ ವರ್ಕ್‌ ಮಾಡೇ ಮಾಡ್ತೀವಿ. ಆ ಸಿನಿಮಾದಲ್ಲಿ ಶಿಶಿರ್‌ನನ್ನೇ ವಿಲನ್‌ ಆಗಿ ಹಾಕಿಕೊಳ್ತೀನಿ. ಅವನು ಕಾಫಿ ಏನಾದ್ರೂ ಕುಡಿಸೋಕೆ ಬಂದ್ರೆ, ಮುಖಕ್ಕೆ ಹೊಡೀತೀನಿ ಎಂದು ಪ್ರಥಮ್‌ ಹೇಳಿದ್ದಾರೆ. ಶಿಶಿರ್‌, ಇದನ್ನ ನೆನಪಿನಲ್ಲಿಟ್ಕೋ, ನಾನು ಐಶ್ವರ್ಯಾ ಸಿನಿಮಾ ಮಾಡ್ತಾ ಇದ್ದೀವಿ, ನಮಗೆ ತೊಂದ್ರೆ ಕೊಡೋದೆಲ್ಲ ಇಲ್ಲ, ಇದು ನಿನಗೆ ಕೊಡ್ತಿರೋ ವಾರ್ನಿಂಗ್‌ ಎಂದು ಪ್ರಥಮ್‌ ತಮಾಷೆಯಾಗಿ ಹೇಳಿದ್ದಾರೆ. ಇದಕ್ಕೆ ಐಶ್ವರ್ಯಾ ಸಿಂಧೋಗಿ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Bigg Boss Kannada Winner Pratham Warns Shishir Shastry Over Aishwarya Sindhogi

ಐಶ್ವರ್ಯಾ ಹಾಗೂ ಶಿಶಿರ್‌ ಬಿಗ್‌ಬಾಸ್‌ ಮನೆಯಲ್ಲಿ ಸಖತ್‌ ಸದ್ದು ಮಾಡಿದ್ದರು. ಇದೀಗ ಹೊರಬಂದ ನಂತರವೂ ಈ ಜೋಡಿ ಸುದ್ದಿಯಲ್ಲಿದೆ. ಇತ್ತೀಚೆಗೆ ಇವರಿಬ್ಬರೂ ಐಶ್ವರ್ಯಾ ಸಿಂಧೋಗಿ, ಶಿಶಿರ್ ಶಾಸ್ತ್ರಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ದರ್ಶನ ಪಡೆದು, ಪ್ರಸಾದ ಸೇವಿಸಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಐಶ್ವರ್ಯ, ಶಿಶಿರ್ ಇತ್ತೀಚೆಗೆ ಕ್ಯೂಟ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದರು. ಇವರಿಬ್ಬರ ಕೆಮಿಸ್ಟ್ರಿ ಕಂಡು ನೀವೇಕೆ ಮದುವೆ ಆಗಬಾರದು ಎಂದು ನೆಟ್ಟಿಗರು ಇವರ ಕಾಲೆಳೆಯುತ್ತಿದ್ದಾರೆ. ಇದೀಗ ಸಿನಿಮಾಗಳಲ್ಲೂ ಮಿಂಚಲು ಈ ಜೋಡಿ ರೆಡಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+