BBK-12: ಬಿಗ್‌ಬಾಸ್‌ ಕನ್ನಡ ಸೀಸನ್‌-12ರ ದಿನಾಂಕ ಘೋಷಿಸಿದ ಕಿಚ್ಚ ಸುದೀಪ್‌

Bigg Boss Kannada 12: ನಟ ಕಿಚ್ಚ ಸುದೀಪ್‌ ಅವರೇ ಕನ್ನಡ ಬಿಗ್‌ಬಾಸ್‌ ಸೀಸನ್‌-12 ರಿಯಾಲಿಟಿ ಶೋ ನಿರೂಪಣೆ ಮಾಡುವುದು ಪಕ್ಕಾ ಆಗಿದೆ. ಇದೀಗ ಬಿಗ್‌ಬಾಸ್‌ ಬಗ್ಗೆ ಕಿಚ್ಚ ಸುದೀಪ್‌ ಅವರೇ ದೊಡ್ಡ ಘೋಷಣೆ ಮಾಡಿ ಗುಡ್‌ನ್ಯೂಸ್‌ ನೀಡಿದ್ದಾರೆ. ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಬಿಗ್‌ಬಾಸ್‌ ಕಡೆಯಿಂದ ಸರ್‌ಪ್ರೈಸ್‌ ಇದೆ ಎಂದು ಹೇಳಲಾಗಿತ್ತು. ಆದರೆ ಸುದೀಪ್‌ ಇದಕ್ಕೂ ಮುನ್ನವೇ ಈ ಬಿಗ್‌ಬಾಸ್‌ ಸೀಸನ್‌ ಶುರುವಾಗುವ ದಿನಾಂಕ ಘೋಷಿಸಿದ್ದಾರೆ.

ಇಂದು ಮೈಸೂರಿನಲ್ಲಿ ನಡೆದ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಅವರ ಹುಟ್ಟುಹಬ್ಬದ‌ ಕಾರ್ಯಕ್ರಮದಲ್ಲಿ ನಟ ಸುದೀಪ್ ಅತಿಥಿಯಾಗಿ ಭಾಗಿಯಾಗಿದ್ದರು. ಇದೇ ವೇದಿಕೆಯಲ್ಲಿ ಸುದೀಪ್‌ ಬಿಗ್‌ಬಾಸ್‌ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಕೂಗಾಡಿದ್ದರಿಂದ "ಶೀಘ್ರವೇ ಕಿರುತೆರೆ ಮೇಲೆ ಬರುತ್ತಿದ್ದೇನೆ ಎಂದು ದಿನಾಂಕ ಘೋಷಿಸಿದ್ದಾರೆ.

bigg-boss-kannada-season-12-to-start-from-september-28-announces-kiccha-sudeep

ಬಿಗ್‌ಬಾಸ್‌ ಯಾವಾಗ ಶುರುವಾಗುತ್ತೆ? ಎಂದು ಎಲ್ಲರೂ ಕಾತರದಿಂದ ಕಾದಿದ್ದರು. ಇತ್ತೀಚೆಗೆ ಲೋಗೋ ಲಾಂಚ್‌ ಮಾಡಿದ್ದ ಬಿಗ್‌ಬಾಸ್‌ ದಿನಾಂಕ ಘೋಷಿಸಿರಲಿಲ್ಲ. ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲೇ ಶುರುವಾಗುತ್ತೆ ಎಂದು ನಿರೀಕ್ಷಿಸಿದ್ದರು. ಸೆಪ್ಟೆಂಬರ್‌ ಎರಡರಂದು ಸುದೀಪ್‌ ಅವರ ಹುಟ್ಟುಹಬ್ಬದಂದೇ ಬಿಗ್‌ಬಾಸ್‌ ಓಪನಿಂಗ್‌ ದಿನಾಂಕ ಘೋಷಣೆಯಾಗಲಿದೆ ಎಂದೂ ಹೇಳಲಾಗಿತ್ತು. ಆದರೆ ಸುದೀಪ್‌ ಅವರೇ ದಿಢೀರನೆ ಬಿಗ್‌ಬಾಸ್‌ ದಿನಾಂಕ ಅನೌನ್ಸ್‌ ಮಾಡಿದ್ದಾರೆ.

ಕಿರುತೆರೆಗೆ ಬರ್ತಿದ್ದೀನಿ, ಆಶೀರ್ವದಿಸಿ

ಮೈಸೂರಿನಲ್ಲಿ ಮಾತನಾಡಿರುವ ಸುದೀಪ್‌, 'ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ, ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ, ಎಲ್ಲರೂ ಆಶೀರ್ವಾದ ಮಾಡಿ' ಎಂದಿದ್ದಾರೆ. ಹಾಗಾಗಿ ಬಿಗ್​​ಬಾಸ್ ಸೀಸನ್-12 ಸೆಪ್ಟೆಂಬರ್ 28ಕ್ಕೆ ಪ್ರಾರಂಭವಾಗುವುದು ಫಿಕ್ಸ್‌ ಆಗಿದೆ. ಈ ಬಾರಿಯೂ ಸುದೀಪ್ ಅವರೇ ಬಿಗ್​​ಬಾಸ್ ನಡೆಸಿಕೊಡಲಿದ್ದಾರೆ. ಹಾಗಾಗಿ ದಿನಾಂಕವನ್ನೂ ಅವರೇ ಅಧಿಕೃತವಾಗಿ ಘೋಷಣೆ ಮಾಡಿರುವುದು ಬಿಗ್‌ಬಾಸ್‌ ಅಭಿಮಾನಿಗಳ ಸಂತೋಷವನ್ನು ದುಪ್ಪಟ್ಟು ಮಾಡಿದೆ.

ಬಿಗ್‌ಬಾಸ್‌ ಹೊಣೆ ಹೊತ್ತ ಕಿಚ್ಚ

ಇಲ್ಲಿವರೆಗೆ ಕಿಚ್ಚ ಸುದೀಪ್‌ ಅವರೇ ಬಿಗ್‌ಬಾಸ್‌ ಹಲವು ಸೀಸನ್‌ಗಳನ್ನು ನಿರೂಪಣೆ ಮಾಡಿದ್ದರು. ಬಿಗ್‌ಬಾಸ್‌ ಅಂದ್ರೆ ಸುದೀಪ್‌ ಎಂಬ ಜನಪ್ರಿಯತೆಯೂ ಪಡೆದಿದ್ದರು. ಆದರೆ ಕಳೆದ ಸೀಸನ್‌ನಲ್ಲೇ ಸುದೀಪ್‌ ಬಿಗ್‌ಬಾಸ್‌ಗೆ ಗುಡ್‌ಬೈ ಹೇಳಿದ್ದರು. ಮುಂದಿನ ಸೀಸನ್‌ನಿಂದ ನಾನು ಬಿಗ್‌ಬಾಸ್‌ ನಿರೂಪಣೆ ಮಾಡಲ್ಲ ಎಂದು ಘೋಷಿಸಿದ್ದರು. ಕೆಲ ಅಸಮಾಧಾನಗಳಿಂದ ಸುದೀಪ್‌ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಲಾಗಿತ್ತು. ಇನ್ನು ಸುದೀಪ್‌ ಇಲ್ಲದ ಬಿಗ್‌ಬಾಸ್‌ ನೋಡಲ್ಲ ಎಂದು ಪ್ರೇಕ್ಷಕರು ಕೂಡ ಬೇಸರ ಹಂಚಿಕೊಂಡಿದ್ದರು.

ಆದರೆ ಬಿಗ್‌ಬಾಸ್‌ ಆಯೋಜಕರು ಮತ್ತೆ ಸುದೀಪ್‌ ಅವರನ್ನು ಮನವೊಲಿಸಿ ಮತ್ತೆ ನಿರೂಪಣೆಗೆ ಒಪ್ಪಿಸಿದೆ. ಸುದೀಪ್‌ ಅವರ ಬೇಡಿಕೆಗಳನ್ನು ಬಿಗ್‌ಬಾಸ್‌ ಆಯೋಜಕರು ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಮುಂದಿನ ಹಲವು ಸೀಸನ್‌ಗಳವರೆಗೆ ಸುದೀಪ್‌ ಅವರೇ ಬಿಗ್‌ಬಾಸ್‌ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರೆ. ಇನ್ನು ಬಿಗ್‌ಬಾಸ್‌ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಎಲ್ಲರೂ ಕಾತರದಿಂದ ಕಾದಿದ್ದಾರೆ. ಈ ಬಾರಿಯ ಸ್ಪರ್ಧಿಗಳು ಯಾರು ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+