Bigg Boss 12: ಅಚ್ಚರಿಯ ಥೀಮ್‌ನಲ್ಲಿ ಈ ಬಾರಿಯ ಬಿಗ್‌ಬಾಸ್ ಮನೆ ವಿನ್ಯಾಸ; ವಿಡಿಯೋ ರಿಲೀಸ್
Bigg Boss Kannada Season 12: ಇಡೀ ಕರ್ನಾಟಕ ಕಾದು ಕುಳಿತಿರುವ ಬಿಗ್‌ಬಾಸ್ ಕನ್ನಡ ಸೀಸನ್-12 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಸಂಜೆ ಆರು ಗಂಟೆಗೆ ಈ ಬಿಗ್‌ಬಾಸ್ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಸೀಸನ್‌ನ ಸ್ಪರ್ಧಿಗಳು ಯಾರೆಲ್ಲ ಎನ್ನುವ ಕುತೂಹಲಕ್ಕೆ ಭಾನುವಾರ ತೆರೆ ಬೀಳಲಿದೆ. ಈ ಹಿಂದೆ ಕಿಚ್ಚ ಸುದೀಪ್ ಹೇಳಿರುವಂತೆ ಈ ಸೀಸನ್ ಪ್ರತಿ ಸೀಸನ್‌ನಂತೆ ಇರೋದಿಲ್ಲ, ಆ ಭ್ರಮೆ ಬೇಡ ಎಂದಿದ್ದರು. ಅದರಂತೆ ಬಿಗ್‌ಬಾಸ್ ಮನೆಯ ವಿಚಾರದಲ್ಲೂ ಈ ಬಾರಿ ಹೊಸ ಹೆಜ್ಜೆ ಇಡಲಾಗಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಬಿಗ್‌ಬಾಸ್‌ನ ಮನೆ ಹೇಗಿರುತ್ತೆ ಎಂದು ಕಲರ್ಸ್ ವಾಹಿನಿ ಪ್ರೋಮೋ ಮೂಲಕ ರಿವೀಲ್ ಮಾಡಿದೆ. ಇದರ ವಿಶೇಷತೆ ಏನು ಎಂದು ಕಿಚ್ಚ ಸುದೀಪ್ ವಿವರಿಸಿದ್ದಾರೆ.
ಹೌದು, ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕಾಗಿ ಈ ಭಾರಿಯೂ ಅದ್ಧೂರಿಯಾದ ಮನೆ ನಿರ್ಮಾಣವಾಗಿದೆ. ಪ್ರತಿ ಬಾರಿಯೂ ಒಂದೊಂದು ಥೀಮ್‌ನಲ್ಲಿ ಬಿಗ್‌ಬಾಸ್ ಮನೆ ವಿನ್ಯಾಸ ಮಾಡಲಾಗುತ್ತಿತ್ತು. ಈ ಬಾರಿಯ ಮನೆ ಕೂಡ ವಿಭಿನ್ನವಾಗಿದೆ. ಮಾಡ್ರನ್ ಬದಲಿಗೆ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಥೀಮ್‌ನಲ್ಲಿ ದೊಡ್ಮನೆ ನಿರ್ಮಿಸಲಾಗಿದೆ. ಕರುನಾಡನ್ನು ಬಿಂಬಿಸುವ ಬಿಗ್‌ಬಾಸ್ ಅರಮನೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಧಿಪತಿ ಎಂದು ಪ್ರೋಮೋ ಹಂಚಿಕೊಂಡಿದೆ.

ಕರ್ನಾಟಕದ ಶ್ರೀಮಂತಿಕೆ ಒಂದೇ ಕಡೆ
"ಶ್ರೀಮಂತವಾಗಿರುವ ನಮ್ಮ ಕರ್ನಾಟಕವನ್ನು ಒಂದೇ ಜಾಗದಲ್ಲಿ ಚಿತ್ರಿಸಿದರೆ ನೋಡಲು ಹೇಗಿರುತ್ತೆ ಅಂತ ನೀವ್ಯಾರಾದರೂ ನೋಡಬೇಕು ಅಂತಿದ್ರೆ, ಹೀಗಿರುತ್ತೆ ಎಂದು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಹೇಳಿದ್ದಾರೆ. ಒಂದು ಅರಮನೆಯನ್ನ ಉಳಿಸಿಕೊಳ್ಳೋಕೆ ಎಷ್ಟೋ ಯುದ್ಧಗಳು ನಡೆದು ಹೋಗಿವೆ. ಈ ಅರಮನೆಯಲ್ಲಿ ತಮ್ಮನ್ನ ತಾವು ಉಳಿಸಿಕೊಳ್ಳೋಕೆ ಬಹಳ ಯುದ್ಧಗಳು ನಡೆಯುತ್ತೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ ಒಂದು ವಾರ ಆಯ್ತು. ನಮ್ಮ ಬಿಗ್‌ಬಾಸ್ ಮನೆಯ ಅಸಲಿ ಹಬ್ಬ ಇವಾಗ ಶುರು" ಎಂದು ಸುದೀಪ್ ವರ್ಣಿಸಿದ್ದಾರೆ.
ಕಲೆ ಮತ್ತು ಸಂಸ್ಕೃತಿಯ ತವರು ಎಂದು ಕರೆಸಿಕೊಂಡಿರುವ ಕರ್ನಾಟಕ ವೈಭವವನ್ನ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಅನಾವರಣಗೊಳಿಸಲಾಗಿದೆ. ವಿಶ್ವವಿಖ್ಯಾತ ಮೈಸೂರು ಅರಮನೆಯ ಸೆಟ್ ಬಿಗ್‌ಬಾಸ್‌ನಲ್ಲಿದೆ. ದಸರಾ ಮಹೋತ್ಸವ, ಅಂಬಾರಿ ಹೊತ್ತ ಆನೆ, ವಿಗ್ರಹಗಳು, ಭರತನಾಟ್ಯ, ಹಂಪಿಯ ಕಲ್ಲಿನ ರಥ ಸೇರಿದಂತೆ ಕರ್ನಾಟಕದ ಇತಿಹಾಸವನ್ನು ಬಿಗ್‌ಬಾಸ್ ಮನೆಯಲ್ಲಿ ಮರುನಿರ್ಮಿಸಲಾಗಿದೆ.
ಈ ಬಾರಿ ಬಿಗ್‌ಬಾಸ್ ಲೋಗೋದಲ್ಲಿಯೂ ಕನ್ನಡದ ಸಂಖ್ಯೆಗಳನ್ನು ಬಳಸಲಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಕನ್ನಡ, ಕರ್ನಾಟಕವೇ ಪ್ರಧಾನವಾಗಿದೆ. ಈ ಹಿಂದೆ ಇದೇ ವಿಚಾರವಾಗಿ ಸುದೀಪ್ ಬೇಸರ ಹೊರಹಾಕಿದ್ದರು. ಬೇರೆ ಭಾಷೆಯ ಬಿಗ್‌ಬಾಸ್‌ಗೆ ಸಿಗುವ ಪ್ರಾಮುಖ್ಯತೆ ನಮ್ಮ ಕನ್ನಡಕ್ಕೂ ಸಿಗಬೇಕು ಎಂದು ಧ್ವನಿ ಎತ್ತಿದ್ದರು. ಅದರಂತೆ ಈ ಬಿಗ್‌ಬಾಸ್ ಕನ್ನಡಮಯ ಹಾಗೂ ಐತಿಹಾಸಿಕ ಕರ್ನಾಟಕದ ಬೀಡು ಥೀಮ್‌ನಲ್ಲಿ ವಿನ್ಯಾಸ ಮಾಡಲಾಗಿದೆ. ಬಿಗ್‌ಬಾಸ್ ಮನೆ ಕಂಡು ಜನ ಫುಲ್ ಫಿದಾ ಆಗಿದ್ದಾರೆ.












Click it and Unblock the Notifications