Bigg Boss Kannada 12: ರಣರಂಗವಾದ ಬಿಗ್ ಬಾಸ್ ಮನೆ, "ಹೋಗೇ ಬಾರೇ" ಅಂತ ಕಿತ್ತಾಡಿಕೊಂಡ ಸ್ಪರ್ಧಿಗಳು
ಬಿಗ್ ಬಾಸ್ ಕನ್ನಡ ಸೀಸನ್-12 ಅದ್ಧೂರಿಯಾಗಿ ಶುರುವಾಗಿದೆ. ಸ್ಪರ್ಧಿಗಳಿಗೆ ಮನೆಯೊಳಗೆ ಕಾಲಿಟ್ಟ ಮೊದಲ ದಿನವೇ ಎದುರಾದ ಎಲಿಮಿನೇಷನ್ ಶಾಕ್‌ನಿಂದ ಹೊರಬಂದಿದ್ದಾರೆ. ಕರಾವಳಿ ಕನ್ನಡತಿ ರಕ್ಷಿತಾ ಶೆಟ್ಟಿ ಒಂದೇ ದಿನಕ್ಕೆ ಜರ್ನಿ ಮುಗಿಸಿದ ಬೆನ್ನಲ್ಲೇ ಇತ್ತ ಮನೆಯೊಳಗೆ ಭಾರೀ ಗಲಾಟೆ ಶುರುವಾಗಿದೆ. ಹೋಗೇ, ಬಾರೆ ಎಂದೆಲ್ಲ ಏಕವಚನದಲ್ಲಿ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ.
ಕಲರ್ಸ್ ವಾಹಿನಿ ಹಂಚಿಕೊಂಡಿರುವ ಇಂದಿನ ಬಿಗ್‌ಬಾಸ್ ಸಂಚಿಕೆಯ ಪ್ರೋಮೋದಲ್ಲಿ ಸ್ಪರ್ಧಿಗಳು ತಮಾಷೆ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಕೊನೆಗೆ ತಾರಕಕ್ಕೇರಿದ್ದಾರೆ. ಏಕವಚನದಲ್ಲಿ ಬೈಯುತ್ತಾ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದಾರೆ ಎನ್ನಲಾಗಿದೆ. ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ನಟಿ ಕಾವ್ಯ ಶೈವ ನಡುವೆ ಕಿರಿಕ್ ಶುರುವಾಗಿದೆ. ನಾವು ಏನಾದ್ರೂ ಹೇಳಿದಾಗ ಕಾವ್ಯ ಮತ್ತು ಗಿಲ್ಲಿ ನೀವಿಬ್ಬರೂ ತುಂಬಾ ಪರ್ಸನಲ್ ಆಗಿ ತೆಗೆದುಕೊಳ್ತಿದ್ದೀರ. ನೀವು ಗೌರವಯುತವಾಗಿ ನಡೆದುಕೊಂಡರೆ ಮಾತ್ರ ನಮಗೂ ಒಂದು ಗೌರವ ಎಂದು ಅಶ್ವಿನಿ ಗೌಡ ಎಚ್ಚರಿಕೆ ಕೊಟ್ಟಿದ್ದಾರೆ.

ಇದಕ್ಕೆ ಕೌಂಟರ್ ಕೊಟ್ಟಿರುವ ಗಿಲ್ಲಿ, ಗೌರವ ಇರೋದಕ್ಕೇನೆ ಈ ರೀತಿ ಮಾತನಾಡ್ತಿದ್ದೀನಿ. ಇಲ್ಲದಿದ್ರೆ ಹೋಗೇ ಬಾರೆ ಅಂತ ಮಾತನಾಡಿಸ್ತಿದ್ದೆ. ಇದರಿಂದ ಸಿಟ್ಟಾದ ಅಶ್ವಿನಿ ಗೌಡ ಏಕವಚನ ಎಲ್ಲ ನನ್ನತ್ರ ಬೇಡ ಎಂದು ಕೂಗಾಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಕಾವ್ಯ ಶೈವ ಸುಮ್ಮನೆ ಕಿರುಚಾಡಿದ್ರೆ ಯಾರೂ ಹೆದರಲ್ಲ ಎಂದು ಅಶ್ವಿನಿ ಅವರಿಗೆ ಹೇಳಿದ್ದಾರೆ. ಈ ಮೂವರ ನಡುವೆ ಗಲಾಟೆ ಜೋರಾಗಿದ್ದು, ಉಳಿದ ಸ್ಪರ್ಧಿಗಳೆಲ್ಲ ಕಕ್ಕಾಬಿಕ್ಕಿಯಾಗಿದ್ದಾರೆ.
ಗೌರವ ಕೊಟ್ಟಾಗ ಮಾತ್ರ ಗೌರವ, ಮರ್ಯಾದೆ ಕೊಟ್ಟು ಮರ್ಯಾದೆ ತಗೋಬೇಕು ಎಂದು ಅಶ್ವಿನಿ ಗೌಡ, ಗಿಲ್ಲಿ ಹಾಗೂ ಕಾವ್ಯ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇಂದಿನ ಸಂಚಿಕೆಯಲ್ಲಿ ಈ ಗಲಾಟೆ ಶುರುವಾಗಿದ್ದೇಕೆ ಎಂಬುದು ತಿಳಿಯಲಿದೆ. ಗಿಲ್ಲಿ ಹಾಗೂ ಕಾವ್ಯ ಜಂಟಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಆರಂಭದಲ್ಲೇ ಈ ಮೂವರು ಸ್ಪರ್ಧಿಗಳ ನಡುವೆ ಕಿರಿಕ್ ಜೋರಾಗಿದೆ.
ಮೂರನೇ ವಾರವೇ ಫಿನಾಲೆ
ಈ ಸೀಸನ್‌ನಲ್ಲಿ ಶಾಕ್ ಮೇಲೆ ಶಾಕ್ ಕೊಡುತ್ತಿರುವ ಬಿಗ್‌ಬಾಸ್, ಈ ಸಲ ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ ಎಂದು ಬಾಂಬ್ ಸಿಡಿಸಿದ್ದಾರೆ. ನಿಮ್ಮಲ್ಲಿ ಯಾರು ಯಾವಾಗ ಬೇಕಾದರೂ ಹೋಗಬಹುದು. ಒಬ್ಬೊಬ್ಬರಾಗಿ ಅಥವಾ ಗುಂಪು ಗುಂಪಾಗಿಯೂ ಹೋಗಬಹುದು ಎಂದು ಬಿಗ್‌ಬಾಸ್ ಸುಳಿವು ನೀಡಿದ್ದು, ಇದನ್ನು ಕೇಳಿ ಸ್ಪರ್ಧಿಗಳೆಲ್ಲ ತಲೆಮೇಲೆ ಕೈಇಟ್ಟುಕೊಂಡಿದ್ದಾರೆ. ಎಲಿಮಿನೇಷನ್ ಭಯದಿಂದ ಮುಕ್ತರಾಗಬೇಕು ಅಂದ್ರೆ ಒಂದೇ ದಾರಿ ಎಂದು ಬಿಗ್‌ಬಾಸ್ ಹೇಳಿದೆ.












Click it and Unblock the Notifications