Bigg Boss Kannada: ಬಿಗ್‌ ಬಾಸ್‌ ಕನ್ನಡ 12ಕ್ಕೆ ಸ್ಪರ್ಧಿಗಳು ಇವರಾದ್ರೆ ಹೇಗೆ? ಇಲ್ಲಿದೆ ನೋಡಿ ಲಿಸ್ಟ್

ಬಿಗ್ ಬಾಸ್ ಕನ್ನಡ ಸೀಸನ್ 12 ರ ನಿರೂಪಕರಾಗಿ ಈ ಬಾರೀ ಯಾರು ನಡೆಸಿಕೊಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಬಿಗ್‌ ಬಾಸ್‌ ಕನ್ನಡ 11 ಸೀಸನ್ ಕೊನೆಯ ಹಂತದಲ್ಲಿ ‌ಕಿಚ್ಚ ಸುದೀಪ್‌ ಅವರು ಬಿಗ್‌ ಬಾಸ್‌ಗೆ ವಿದಾಯ ಹೇಳಿದ್ದರು. ಈಗಾಗಲೇ ಬಿಗ್‌ ಬಾಸ್‌ ಕನ್ನಡ 11 ಸೀಸನ್‌ ಮುಗಿರು ಐದು ತಿಂಗಳು ಕಳೆದಿದ್ದು, ಇದೀಗ ಬಿಗ್‌ ಬಾಸ್‌ ತಂಡ 12 ಸೀಸನ್‌ ಗೆ ಸಿದ್ದತೆಯನ್ನ ಮಾಡಿಕೊಳ್ಳುತ್ತಿದೆ. ಇತ್ತ ಬಿಗ್‌ ಬಾಸ್‌ ಕನ್ನಡ 12 ಸೀಸನ್‌ ಹೋಸ್ಟ್‌ ಆಗಿ ಕಿಚ್ಚ ಸುದೀಪ್‌ ಅವರೇ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದ್ದು, ಇದೀಗ ಸ್ಪರ್ಧಿಗಳು ಯಾರ್ಯಾರು ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

ಈಗಾಗಲೇ ಬಿಗ್‌ ಬಾಸ್‌ ಕನ್ನಡ 12ರ ಸೀಸನ್‌ ಕುರಿತು ತೆರೆಮರೆಯಲ್ಲಿ ಸಿದ್ದತೆ ಜೋರಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಬಿಗ್‌ ಬಾಸ್‌ ಹೊಸ ಸೀಸನ್‌ ಸ್ಪರ್ಥಿಗಳ ಕುರಿತು ಟಾಕ್‌ ಶುರುವಾಗಿದೆ. ಇನ್ನೂ ಸೋಶಿಯಲ್‌ ಮೀಡಿಯಾದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಕ್ಕೆ ಸಂಭಾವ್ಯ ಸ್ಪರ್ಥಿಗಳ ಪಟ್ಟಿ ಹರಿದಾಡುತ್ತಿದೆ.

Bigg Boss Kannada Season 12 Contestants List

ಯೂಟ್ಯೂಬರ್‌ ಸಮೀರ್‌

ಹೆಚ್ಚು ಸುದ್ದಿಯಲ್ಲಿರುವ ಯೂಟ್ಯೂಬರ್‌ ಸಮೀರ್‌, ತಮ್ಮ ಕಂಟೆಂಟ್‌ಗಳಿಂದ ಹೆಚ್ಚು ಜನಮನವನ್ನು ಗೆದ್ದಿದ್ದಾರೆ. ಸಮೀರ್‌ ಅವರು ಬಿಗ್‌ ಬಾಸ್‌ ಮನೆಗೆ ಬಂದರೆ ಹೇಗೆ ಎನ್ನುವ ಬಗ್ಗೆ ವೀಕ್ಷಕರು ಚರ್ಚೆ ಮಾಡುತ್ತಿದ್ದಾರೆ. ಸೌಜನ್ಯ ಕೇಸ್‌ ಸಂಬಂಧಿಸಿದಂತೆ ಇತ್ತೀಚೆಗೆ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿತ್ತು. ಹೀಗಾಗಿ ಸಮೀರ್‌ ಅವರು ಬಿಗ್‌ ಬಾಸ್‌ ಮನೆಗೆ ಬಂದ್ರೆ ಹೇಗೆ ಎಂಬ ಚರ್ಚೆ ನಡೆಯುತ್ತಿದೆ.

ರೀಲ್ಸ್‌ ರೇಷ್ಮಾ, ನವೀನ್‌ ಕುಮಾರ್‌

ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಕೊಂಡಿರುವ ರೇಷ್ಮಾ ಅವರು ಬಿಗ್‌ ಬಾಸ್‌ ಮನೆಗ ಬಂದರೇ ಹೇಗಿರುತ್ತದೆ ಎಂದು ವೀಕ್ಷಕರು ಮಾತನಾಡುತ್ತಿದ್ದಾರೆ. ರೇಷ್ಮಾ ಜೊತೆಗೆ ನವೀನ್‌ ಅವರು ಹಲವು ಕನ್ನಡ ಸಾಂಗ್‌ ಗಳಿಗೆ ರೀಲ್ಸ್‌ ಮಾಡುತ್ತಾ, ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಾರೆ. ಇದೀಗ ಇವರಿಬ್ಬರು ಬಿಗ್‌ ಬಾಸ್‌ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ.

ದಿವ್ಯಾ ವಂಸತ, ದಿವ್ಯಾ ಗೌಡ

ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಹೆಚ್ಚು ಜನಪ್ರಿಯತೆಯನ್ನ ಪಡೆದಿರುವ ದಿವ್ಯಾ ವಸಂತ ಅವರು ಹೆಸರು ಕೂಡ ಬಿಗ್‌ ಬಾಸ್‌ ಸ್ಪರ್ಧಿಗಳ ಲಿಸ್ಟ್‌ನಲ್ಲಿದ್ದಾರೆ. ಇನ್ನೂ ಕಳೆದ ಸೀಸನ್‌ ನಲ್ಲಿ ಭವ್ಯಾ ಗೌಡ ಅವರು ಬಿಗ್‌ ಬಾಸ್‌ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಯಾಗಿದ್ದರು. ಇದೀಗ 12 ರ ಸೀಸನ್‌ ನಲ್ಲಿ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರು ಬಿಗ್‌ ಬಾಸ್‌ ಮನೆಗೆ ಬರಬೇಕು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದು, ದಿವ್ಯಾ ಗೌಡ ಅವರು ಬಿಗ್‌ ಬಾಸ್‌ ಮನೆ ಎಂಟ್ರಿಯಾಗುವ ಸಾಧ್ಯತೆ ಇದೆ.

ಆನಂದ್‌ ಗುರೂಜಿ, ರಂಜಿತ್‌

ಖ್ಯಾತ ಜ್ಯೋತಿಷಿ ಆನಂದ್‌ ಗುರೂಜಿ ಅವರು ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಆನಂದ್‌ ಗೂರುಜಿ ಅವರು ದೊಡ್ಮನೆ ಬಂದರೆ ಹೇಗೆ ಎಂದು ವೀಕ್ಷಕರು ಚರ್ಚೆ ನಡೆಸುತ್ತಿದ್ದಾರೆ. ಇನ್ನೂ ಕಳೆದ ಸೀಸನ್‌ ನಲ್ಲಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟದ್ದ ರಂಜಿತ್‌ ಅವರು ಅನಿರೀಕ್ಷಿಯ ಘಟನೆಯಿಂದಾಗಿ ಬಿಗ್‌ ಬಾಸ್‌ ಶೋನಿಂದ ಹೊರಗೆ ಬಂದಿದ್ದರು. ಲಾಯರ್‌ ಜಗದೀಶ್‌ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಕಾರಣ ಬಿಗ್‌ ಬಾಸ್‌ ಮನೆಯ ನಿಯಮದಲ್ಲಿ ರಂಜಿತ್‌ ಅವರನ್ನ ಬಿಗ್‌ ಬಾಸ್‌ ಶೋನಿಂದ ಹೊರ ಕಳುಹಿಸಲಾಗಿತ್ತು. ಇದೀಗ 12 ಸೀಸನ್‌ ಗೆ ರಂಜಿತ್‌ ಅವರು ಎಂಟ್ರಿಯಾಗಲಿದ್ದಾರೆ ಎನ್ನಲಾಗಿದೆ.

ಮಡೆನೂರು ಮನು-ಮಿಂಚು

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅವರು ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಮಡೆನೂರು ಮನು ಅವರ ವಿರುದ್ಧ ಸಹನಟಿಯ ಮೇಲೆ ಅತ್ಯಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದಾರೆ. ಅಲ್ಲದೇ ಕನ್ನಡದ ಸ್ಟಾರ್‌ ನಟದ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದ ಆಡಿಯೋ ವೈರಲ್‌ ಆಗಿತ್ತು. ಮಡೆನೂರು ಮನು ಹಾಗೂ ಮಿಂಚು ಕನ್ನಡದ ಕಾಮಿಡಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಕೆಲ ವಿಚಾರದಲ್ಲಿ ಇಬ್ಬರು ಸುದ್ದಿಯಲ್ಲಿದ್ರು. ಇದೀಗ ಇವರಿಬ್ಬರು ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾಗುತ್ತಾರಾ ಎಂಬುದನ್ನ ಕಾದುನೋಡ್ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+