Bigg Boss Contestants: ಹೊರಬಿತ್ತು ಬಿಗ್‌ಬಾಸ್‌ ಸ್ಪರ್ಧಿಗಳ ಹೊಸ ಲಿಸ್ಟ್‌, ಯಾರೆಲ್ಲ ಇದ್ದಾರೆ?

ಕನ್ನಡ ಬಿಗ್‌ಬಾಸ್‌ ಸೀನಸ್‌-12 (Bigg Boss Kannada season 12) ಇದೇ ಸೆಪ್ಟೆಂಬರ್‌ 28ರಿಂದ ರಿಲೀಸ್‌ ಆಗಲಿದೆ. ಇತ್ತೀಚೆಗಷ್ಟೇ ಪ್ರೋಮೋ ಹಂಚಿಕೊಂಡಿರುವ ಕಲರ್ಸ್‌ ವಾಹಿನಿಯು, ನಿರೂಪಕ ಕಿಚ್ಚ ಸುದೀಪ್‌ ಅವರ ಲುಕ್‌ ರಿವೀಲ್‌ ಮಾಡಿದೆ. ಹಾಗಾಗಿ ಬಿಗ್‌ಬಾಸ್‌ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಮತ್ತೊಂದೆಡೆ ಸ್ಪರ್ಧಿಗಳು ಯಾರಾಗ್ತಾರೆ ಎಂದೆಲ್ಲ ಚರ್ಚೆಗಳು ಶುರುವಾಗಿದೆ. ಕಳೆದ ತಿಂಗಳುಗಳಲ್ಲೇ ಇವರು ಬಿಗ್‌ಬಾಸ್‌ಗೆ ಹೋಗುವುದು ಪಕ್ಕಾ ಎಂದು ಕೆಲ ಸಂಭಾವ್ಯರ ಹೆಸರುಗಳು ಹೊರಬಿದ್ದಿತ್ತು. ಈಗ ಬಿಗ್‌ಬಾಸ್‌ ಶುರುವಾಗುವ ದಿನಾಂಕ ಘೋಷಣೆ ಕೂಡ ಆಗಿದ್ದು, ಇವರೇ ಈ ಸೀಸನ್‌ನ ಸ್ಪರ್ಧಿಗಳು ಎಂದು ಹೊಸಬರ ಹೆಸರುಗಳು ಮುನ್ನೆಲೆಗೆ ಬಂದಿದೆ. ಆ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

* ಮಡೆನೂರು ಮನು: ಕನ್ನಡ ಬಿಗ್‌ಬಾಸ್‌ ಸೀನಸ್‌-12ರ ಸ್ಪರ್ಧಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮನು ಇತ್ತೀಚೆಗೆ ವಿವಾದಗಳಿಂದ ಸುದ್ದಿಯಾಗಿದ್ದರು. ನಟಿಯ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ, ಸ್ಯಾಂಡಲ್‌ವುಡ್‌ ನಟರ ಸಾವಿನ ಆಡಿಯೋ ವೈರಲ್‌ ಸಂಚಲನ ಸೃಷ್ಟಿಸಿತ್ತು. ಹೀಗಾಗಿ ಇವರು ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಿದ್ದಾರಂತೆ.

Bigg Boss Kannada Season 12 Contestants List 2025 Full Rumored Lineup

* ಸಾಗರ್ ಬಿಳಿಗೌಡ: ಸತ್ಯ ಧಾರಾವಾಹಿ ಖ್ಯಾತಿಯ ಕಿರುತೆರೆ ನಟ ಸಾಗರ್‌ ಬಿಳಿಗೌಡ ಕೂಡ ಈ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಿರುತೆರೆಯಲ್ಲಿ ಸಾಗರ್‌ ಅವರ ಹವಾ ಇದ್ದು, ಬಿಗ್‌ಬಾಸ್‌ ಮನೆಗೆ ಪ್ರವೇಶ ಪಡೆಯಲಿದ್ದಾರೆ ಎನ್ನಲಾಗಿದೆ.

* ಶ್ರೇಯಾಂಕಾ ಪಾಟೀಲ್: ಮಹಿಳಾ ಕ್ರಿಕೆಟ್‌ ಆಟಗಾರ್ತಿ ಹಾಗೂ ಆರ್‌ಸಿಬಿ ಟೀಂನಲ್ಲಿ ಮಿಂಚಿದ್ದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಕ್ರೀಡಾ ವಿಭಾಗದಿಂದ ಬಿಗ್‌ಬಾಸ್‌ಗೆ ಎಂಟ್ರಿ ಕೊಡಲಿದ್ದಾರಂತೆ. ಶ್ರೇಯಾಂಕಾ ಅವರಿಗೆ ರಾಜ್ಯದಾದ್ಯಂತ ದೊಡ್ಡ ಅಭಿಮಾನಿ ಬಳಗವೇ ಇದೆ.

* ಮಿಂಚು: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ಮಿಂಚು ಕೂಡ ಈ ಸೀಸನ್‌ನ ಸ್ಪರ್ಧಿಯಾಗುವ ಸಾಧ್ಯತೆ ಇದೆ. ಮಡೆನೂರು ಮನು ಕೇಸ್‌ನಲ್ಲಿ ಮಿಂಚು ಹೆಸರು ಕೇಳಿಬಂದಿತ್ತು. ಇತ್ತೀಚೆಗೆ ಕೇಸ್‌ ವಾಪಸ್‌ ಪಡೆದು, ಇತ್ಯರ್ಥ ಮಾಡಿಕೊಂಡಿದ್ದರು. ಹಾಗಾಗಿ ಇವರೂ ಕೂಡ ದೊಡ್ಮನೆಗೆ ಎಂಟ್ರಿ ಕೊಡಬಹುದು ಎನ್ನುತ್ತಿದ್ದಾರೆ.

Bigg Boss Kannada Season 12 Contestants List 2025 Full Rumored Lineup

* ಸ್ಮಿತಾ ರಂಗನಾಥ್: ಕನ್ನಡ ಸುದ್ದಿ ನಿರೂಪಕಿಯಾಗಿ ಜನಪ್ರಿಯತೆ ಪಡೆದಿರುವ ಸ್ಮಿತಾ ರಂಗನಾಥ್‌ ಅವರೂ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಸೀಸನ್‌ಗಳಲ್ಲಿ ಮಾಧ್ಯಮ ಕ್ಷೇತ್ರದಿಂದಲೂ ಸ್ಪರ್ಧಿಗಳು ಬಂದಿದ್ದರು. ಹಾಗಾಗಿ ಈ ಬಾರಿ ಸ್ಮಿತಾ ಅವರಿಗೆ ಅವಕಾಶ ಒಲಿದಿದೆಯಂತೆ.

* ಶ್ವೇತಾ ಪ್ರಸಾದ್: ರಾಧಾ ರಮಣ ಸೀರಿಯಲ್‌ ಹಾಗೂ ಕಾಟೇರ ಸಿನಿಮಾ ಖ್ಯಾತಿಯ ಶ್ವೇತಾ ಪ್ರಸಾದ್‌ ಕೂಡ ಈ ಸೀಸನ್‌ನಲ್ಲಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಶ್ವೇತಾ ಅವರಿಗೆ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳಿದ್ದು, ಈ ಕಾರಣದಿಂದ ಬಿಗ್‌ಬಾಸ್‌ಗೆ ಹೋಗಲಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ಕಲರ್ಸ್‌ ವಾಹಿನಿ ಸ್ಪರ್ಧಿಗಳ ಹೆಸರನ್ನ ರಿವೀಲ್‌ ಮಾಡಿಲ್ಲ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಅನೇಕರ ಹೆಸರುಗಳು ಮುನ್ನೆಲೆಗೆ ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+