Hanumantha Lamani Winner: ಬಿಗ್‌ಬಾಸ್‌ ಕನ್ನಡ ಸೀಸನ್ 11ರ ವಿಜೇತ ಉತ್ತರ ಕರ್ನಾಟಕದ ಹುಲಿ ಹನುಮಂತ

ಬಿಗ್‌ಬಾಸ್‌ ಕನ್ನಡ ಸೀಸನ್ 11ರಲ್ಲಿ ಗಾಯಕ ಹನುಮಂತ ಲಮಾಣಿ ಅವರು ವಿಜೇತರಾಗಿದ್ದಾರೆ. ಇದರೊಂದಿಗೆ ಕರ್ನಾಟಕದ ಕೋಟಿ ಕೋಟಿ ಜನರ ಆಸೆ ಈಡೇರಿದೆ. 52389318 ಮತಗಳನ್ನು ಪಡೆದು ಹನುಮಂತ ಗೆದ್ದು ಬೀಗಿದ್ದಾರೆ. ಕುರಿಗಾಯಿ ಹನುಮಂತ ಗೆಲ್ಲಬೇಕು ಎನ್ನುವುದು ಕನ್ನಡಿಗರ ಮನದಾಳದ ಮಾತಾಗಿತ್ತು. ಕೊನೆಗೂ ಹನುಮಂತನಿಗೆ ಜಯ ಸಿಕ್ಕಿದೆ.

ಹೌದು.... ಕಿಚ್ಚ ಸುದೀಪ್ ಅವರು ಹನುಮಂತ ಈ ಬಾರಿ ವಿಜೇತ ಎಂದು ವೇದಿಕೆ ಮೇಲೆ ಘೋಷಣೆ ಮಾಡಿದರು. ಈ ಫಲಿತಾಂಶ ಎಲ್ಲರ ನಿರೀಕ್ಷೆಯ ಫಲಿತಾಂಶವಾಗಿದೆ. ಇನ್ನೂ ತ್ರಿವಿಕ್ರಮ್ ಅವರು ಬಿಗ್‌ಬಾಸ್‌ ಕನ್ನಡ ಸೀಸನ್ 11ರ ರನ್ನರ್ ಅಪ್ ಆಗಿದ್ದಾರೆ. ತ್ರಿವಿಕ್ರಮ್ ಹಾಗೂ ಹನುಮಂತನ ಕೈ ಹಿಡಿದ ಕಿಚ್ಚಾ ಸುದೀಪ್ ಅವರು ಕೊನೆಯ ಕ್ಷಣದಲ್ಲಿ ಹನುಮಂತನ ಕೈ ಮೇಲೆತ್ತುವ ಮೂಲಕ ಹನುಮಂತನಿಗೆ ಅಭಿನಂದನೆ ತಿಳಿಸಿದ್ದಾರೆ. ಹನುಮಂತನ ಕೈಗೆ ಟ್ರೋಫಿ ನೀಡಿದ್ದಾರೆ.

Bigg boss kannada season 11 winner is hanumantha lamani

ಹನುಮಂತನ ಮನದಾಳದ ಮಾತು

ಹನುಮಂತ ವಿಜೇತರಾಗುತ್ತಿದ್ದಂತೆ ಬಾನಂಗಳದಲ್ಲಿ ಪಟಾಕಿ ಸದ್ದು ಕೇಳಿ ಬಂದಿದೆ. ಅಲ್ಲದೆ ಈ ಕಾರ್ಯಕ್ರಮವನ್ನು ವೀಕ್ಷಿಸಿದ ಪೋಷಕರ ಕಂಗಳಲ್ಲಿ ಆನಂದ ಬಾಷ್ಪ ಹರಿದಿದೆ. ಈ ವೇಳೆ ವೇದಿಕೆ ಮೇಲೆ ಮಾತನಾಡಿದ ಹನುಮಂತ ಲಮಾಣಿ ಅವರು, 'ಬಿಗ್‌ಬಾಸ್‌ ಮನೆಯಲ್ಲಿ ನನ್ನನ್ನು ಇಲ್ಲಿವರೆಗೆ ಕಾಪಾಡಿಕೊಂಡು ಬಂದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ನನಗೆ ಮತ ಹಾಕಿದವರಿಗೆಲ್ಲಾ ತುಂಬು ಹೃದಯದಿಂದ ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದರು.

'ಬಿಗ್‌ಬಾಸ್‌ ಮನೆ ಹೇಗಿರುತ್ತೆ? ಇಲ್ಲಿ ಇರೋದು ಹೇಗೆ? ಆಡೋದು ಹೇಗೆ ಎಂದು ಭಯ ಆಗಿತ್ತು. ನಾನು ಮೂರು ದಿನ ಬಿಗ್‌ಬಾಸ್ ಮನೆಯಲ್ಲಿ ಉಳಿಯೋದು ಕಷ್ಟ ಎಂದು ಅನಿಸಿತ್ತು. ಹೀಗಿರುವಾಗ ನನ್ನನ್ನು ಹತ್ತತ್ರ ನೂರು ದಿನ ಈ ಮನೆಯಲ್ಲಿ ಕಾಪಾಡಿದಿರಿ. ನನಗೆ ಮತ ನೀಡಿದ ಪ್ರತಿಯೊಬ್ಬರಿಗೂ ತುಂಬು ಹೃದಯದಿಂದ ಧನ್ಯವಾದಗಳು' ಎಂದು ಹನುಮಂತ ಮನದಾಳದ ಮಾತುಗಳನ್ನು ಹೇಳಿದ್ದಾರೆ.

ಇನ್ನೂ ಹನುಮಂತ ವಿನ್ ಆಗಿದ್ದು ಕನ್ನಡಿಗರಿಗೆ ಖುಷಿ ತಂದಿದೆ. ಬಿಗ್‌ಬಾಸ್‌ ಮನೆಯಲ್ಲಿ ಹನುಮಂತ ವಿಜೇತ ಎಂದು ಘೋಷಣೆ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯದಲ್ಲಿ ಹನುಮಂತನಿಗೆ ಅಭಿನಂದನೆಗಳನ್ನು ತಿಳಿಸಲು ಜನ ಶುರು ಮಾಡಿದ್ದಾರೆ. ಹನುಮಂತನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಹನುಮಂತನನ್ನು ಬಿಗಿದಪ್ಪಿದ ಕಿಚ್ಚ ಸುದೀಪ್

ಬಿಗ್‌ಬಾಸ್‌ ಇತಿಹಾಸದಲ್ಲಿ ಒಬ್ಬ ವೈಲ್ಡ್‌ ಕಾರ್ಡ್ ಸ್ಪರ್ಧಿ ವಿಜೇತರಗಾಗಿದ್ದು ಇದೇ ಮೊದಲು. ಹನುಮಂತ ಬಿಗ್‌ಬಾಸ್‌ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಸ್ಪರ್ಧಿ. ಅವರು ವೇದಿಕೆಗೆ ಬರಲಿಲ್ಲ. ಕಿಚ್ಚ ಸುದೀಪ್ ಅವರೊಂದಿಗೆ ನೇರವಾಗಿ ಮಾತನಾಡಲಿಲ್ಲ. ನೇರವಾಗಿ ಮನೆಗೆ ಹೋಗಿದ್ದ ಹನುಮಂತ ಕಿಚ್ಚ ಸುದೀಪ್ ಅವರನ್ನು ಹತ್ತಿರದಿಂದ ನೋಡುತ್ತಿರುವುದು ಇದೇ ಮೊದಲು.

ಹೀಗಾಗಿ ಕಿಚ್ಚ ಸುದೀಪ್ ಅವರು ಪ್ರೀತಿಯ ಅಪ್ಪುಗೆಯಿಂದ ಹನುಮಂತನನ್ನು ಸ್ವಾಗತಿಸಿ ಟ್ರೋಫಿ ನೀಡಿ ಶುಭ ಕೋರಿದ್ದಾರೆ. ಇದರಿಂದ ಹನುಮಂತ ತುಂಬಾ ಖುಷಿ ಪಟ್ಟಿದ್ದಾರೆ. ಇದು ನಿಜವಾಗಲು ಸರಳ ಸಜ್ಜನ ಬಡ ಮಕ್ಕಳಿಗೆ ಆದ ಜಯ. ಕರ್ನಾಟಕದಲ್ಲಿ ಬಡ ಮಕ್ಕಳನ್ನು ಗೌರವಿಸುವ ಒಳ್ಳೆತನವನ್ನು ಬೆಂಬಲಿಸುವ ಜನ ಇನ್ನೂ ಇದ್ದಾರೆ ಅನ್ನೋದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+