Bigg Boss Kannada: ಕೊನೆಗೂ ಬಿಗ್‌ಬಾಸ್‌ ಮನೆಯಲ್ಲಿ ನಗು ಸದ್ದು: ನಾನು ಈ ಆಟಕ್ಕೆ ಇಲ್ಲ ಎಂದ ಐಶ್ವರ್ಯ ಸಿಂಧೋಗಿ

ಈ ಬಾರಿ ಬಿಗ್‌ ಬಾಸ್‌ ಕನ್ನಡ ಆರಂಭವಾದ ದಿನದಿಂದ ಬರೀ ಜಗಳ ಕಿತ್ತಾಟವೇ ಜಾಸ್ತಿ ಆಗಿದೆ. ಆಟ ಆರಂಭಿಸುತ್ತೇವೆ ಎನ್ನುತ್ತಿದ್ದ ಸ್ಪರ್ಧಿಗಳು ಇದೀಗ ಪದೇ ಪದೇ ಜಗಳ ನಡೆಸುತ್ತಿದ್ದಾರೆ. ಲಾಯರ್‌ ಜಗದೀಶ್‌ ಒಂದು ಕಡೆಯಾದರೆ ಉಳಿದ ಸ್ಪರ್ಧಿಗಳು ಮತ್ತೊಂದು ಕಡೆಯಾಗಿ ದಿನೇ ದಿನೇ ಜಗಳ ಮೀತಿ ಮೀರಿ ಆಡುತ್ತಿದ್ದಾರೆ. ಪ್ರೇಕ್ಷಕರೇ ಸಾಕು ಸಾಕು ಎನ್ನುವ ಮಟ್ಟಿಗೆ ಬಿಗ್‌ ಬಾಸ್‌ ಮನೆಯಲ್ಲಿ ಜಗಳ ನಡೆಯುತ್ತಿದ್ದು, ಮನೋರಂಜನೆ ಕಡಿಮೆಯಾಗುತ್ತಿದೆ.

ಈ ಜಗಳಗಳ ಮಧ್ಯ ಸ್ಪರ್ಧಿಗಳ ಜೊತೆ ಸದಾ ಜಗಳಕ್ಕಿಳಿಯುವ ಲಾಯರ್‌ ಜಗದೀಶ್‌ ಆಗಾಗ ತಮಾಷೆ ಮಾಡುತ್ತಾ ಸ್ಪರ್ಧಿಗಳ ತಲೆಗೆ ಹುಳ ಬಿಡುತ್ತಾರೆ. ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಲಾಯರ್‌ ಜಗದೀಶ್‌ ನಾನು ಪ್ರತಿಯೊಬ್ಬರ ತಲೆಯಲ್ಲಿ ಏನಿದೆ ಅಂತಾ ಟೆಸ್ಟ್ ಮಾಡಿ ಹುಳ ಬಿಡುತ್ತೇನೆ ಎಂದು ಧರ್ಮ ಕೀರ್ತಿರಾಜ್‌, ಧನರಾಜ್‌ ಆಚಾರ್ಯ ಬಳಿ ಹೇಳಿದ್ದಾರೆ. ಅಲ್ಲದೇ ನನ್ನ ತಮ್ಮ ತಮ್ಮ ಎಂದು ಧನರಾಜ್‌ ಆಚಾರ್ಯ ಅವರನ್ನು ಮುದ್ದಾಡಿದ್ದಾರೆ.

Bigg Boss Kannada Season 11 Lawyer Jagdish Has A Funny Talk With All The Contestants

ಇನ್ನು ಐಶ್ವರ್ಯ ಸಿಂಧೋಗಿ ನಿಮ್ಮ ಮಾಟ್ರಿಮೊನಿ ಹುಡುಕಿದ್ದಾರಂತೆ ಎಂದು ಹೇಳುತ್ತಿದ್ದಂತೆ ಲಾಯರ್‌ ಜಗದೀಶ್‌, ಧರ್ಮ ಕೀರ್ತಿರಾಜ್‌ ಕಡೆ ಸನ್ನೆ ಮಾಡಿದ್ದಾರೆ. ಈ ವೇಳೆ ಐಶ್ವರ್ಯ ಸಿಂಧೋಗಿ ನನ್ನ ದೇವರಾಣೆ, ನಾನು ಈ ಆಟಕ್ಕೆ ಇಲ್ಲ ಎಂದು ಮುಖ ಮುಚ್ಚಿಕೊಂಡಿದ್ದಾರೆ. ಈ ವೇಳೆ ಧರ್ಮ ಕೀರ್ತಿರಾಜ್‌, ಇವರಿಗೂ ಒಂದು ನೋಡಿ ಬಿಡಿ ಸರ್‌, ಒಂದೇ ಛತ್ರದಲ್ಲಿ ಮದುವೆಯಾಗಿ ಬಿಡೋಣ ಎಲ್ಲರೂ ಅಂದಿದ್ದಾರೆ.

ಈ ವೇಳೆ ಲಾಯರ್‌ ಜಗದೀಶ್‌ ಆ ಹಸೆಮಣೆಯಲ್ಲಿರುವವರು, ಈ ಮಣೆಗೆ ಎಕ್ಸೇಂಚ್‌ ಆದರೆ ನಾನೇನು ಮಾಡೋದು ಅಂತಾ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಜಗದೀಶ್‌ ಮಾತು ಕೇಳುತ್ತಿದ್ದಂತೆ ಐಶ್ವರ್ಯ ಸಿಂಧೋಗಿ, ಧರ್ಮ ಕೀರ್ತಿರಾಜ್‌ ಬಿದ್ದು ಬಿದ್ದು ನಕ್ಕಿದ್ದಾರೆ.

Bigg Boss Kannada Season 11 Lawyer Jagdish Has A Funny Talk With All The Contestants

ಇನ್ನು ಧನರಾಜ್‌ ಆಚಾರ್ಯ ಬೇಕು ಬೇಕಂತಲೇ ಲಾಯರ್‌ ಜಗದೀಶ್‌ ಅವರನ್ನು ಕರೆದು ನೀವು ಗೋಲ್ಡ್‌ ಸುರೇಶ್‌ ಅವರ ಬಗ್ಗೆ ಏನು ಮಾತನಾಡಿಲ್ಲವಂತೆ ಹೌದಾ ಎಂದಿದ್ದಾರೆ. ಹೋ ಹೌದಾ ಎಂದು ಲಾಯರ್‌ ಜಗದೀಶ್‌ ಕುರ್ಚಿ ತೆಗೆದುಕೊಂಡು ಬರುವ ಅಂತರದಲ್ಲಿ ಗೋಲ್ಡ್‌ ಸುರೇಶ್‌, ಯಾಕೋ ಕರಿತೀಯಾ ತಲೆಗೆ ಶೂಟ್‌ ಹಾಕುತ್ತಾನೆ ಎಂದು ಹೇಳಿ ಧನರಾಜ್‌ ಆಚಾರ್ಯ ಇದ್ದ ಜಾಗದಿಂದ ಓಡಿ ಹೋಗಿದ್ದಾರೆ.

ಈ ವೇಳೆ ಲಾಯರ್‌ ಜಗದೀಶ್‌, ಬಾ ಗುರು ನಾವೇ ಪ್ರಚಾರದಲ್ಲಿರುವುದು. ಎಲ್ಲಾ ಟಿವಿ ಚಾನೆಲ್‌ನಲ್ಲಿಯೂ ನಾವೇ ಇರುವುದು ಅರ್ಥ ಮಾಡಿಕೋ ಎಂದು ಗೋಲ್ಡ್‌ ಸುರೇಶ್‌ ಅವರನ್ನು ಕಾಡುತ್ತಾ ಡಾನ್ಸ್‌ ಮಾಡುತ್ತಾ ಎಂಜಾಯ್‌ ಮಾಡಿದ್ದಾರೆ. ಕಳೆದೊಂದು ವಾರದಿಂದ ಬರೀ ಜಗಳ ಹೊಡೆದಾಟ, ಬೈದಾಟ, ಅಳು ಪ್ರೋಮೋಗಳನ್ನೇ ನೋಡಿದ್ದ ಪ್ರೇಕ್ಷಕರಿಗೆ ಈ ಪ್ರೋಮೋ ಸಖತ್‌ ಮಜಾ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+