Gauthami Jadav: ಮಿಡ್ ವೀಕ್ ಎಲಿಮಿನೇಷನ್: ಗೌತಮಿ ಜಾದವ್ ಆಟಕ್ಕೆ ಫುಲ್ ಸ್ಟಾಪ್?
ಬಿಗ್ ಬಾಸ್ ಕನ್ನಡ ಸೀಜನ್ 11 ಈಗ ಅಂತಿಮ ದಿನಗಳ ಲೆಕ್ಕಾಚಾರದಲ್ಲಿದ್ದು, ಸ್ಪರ್ಧಿಗಳು ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದಾರೆ. ಕಳೆದ ವಾರ ಟಿಕೆಟ್ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ನಡೆಸಿದ್ದ ಸ್ಪರ್ಧಿಗಳು ಈ ವಾರ ನಾಮಿನೇಷನ್‌ನಿಂದ ಪಾರಾಗಲು ಹೋರಾಡುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಕನ್ನಡ ಸೀಜನ್ 11ರಲ್ಲಿ ಒಂದೇ ವಾರದಲ್ಲಿ ಎರಡು ಎಲಿಮಿನೇಷನ್‌ಗಳು ನಡೆಯಲಿದೆ. ವಾರದ ಮಧ್ಯವೇ ಎಲಿಮಿನೇಷನ್ ನಡೆಯಲಿದ್ದು, ವೀಕೆಂಡ್ ಸಂಚಿಕೆಗೂ ಮುನ್ನ ಒಬ್ಬರು ಮನೆಗೆ ಹೋಗುವಂತೂ ಗ್ಯಾರಂಟಿಯಾಗಿದೆ.
ಈ ವಾರ ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತ ಅವರನ್ನು ಬಿಟ್ಟು ಉಳಿದ ಎಲ್ಲಾ ಸ್ಪರ್ಧಿಗಳು ಅಂದರೆ ಗೌತಮಿ ಜಾದವ್, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಭವ್ಯ ಗೌಡ, ಧನರಾಜ್ ಆಚಾರ್ ಹಾಗೂ ರಜತ್ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಈ ಬಾರಿ ಉಳಿದುಕೊಳ್ಳಲು ಸ್ಪರ್ಧಿಗಳು ಅಖಾಡಕ್ಕಿಳಿದು ಹೋರಾಡಲೇ ಬೇಕಾಗಿದೆ.

ನಾಮಿನೇಷನ್‌ನಿಂದ ಪಾರಾಗಲು ಬಿಗ್ ಬಾಸ್ ಸ್ಪರ್ಧಿಗಳಿಗೆ ಅವಕಾಶ ನೀಡಿದ್ದು, ಕಾಲ ಕಾಲಕ್ಕೆ ಟಾಸ್ಕ್ ನೀಡಿ ಅತಿ ಹೆಚ್ಚು ಅಂಕವನ್ನು ಗಳಿಸಿದವರು ನಾಮಿನೇಷನ್‌ನಿಂದ ಪಾರಾಗಲಿದ್ದಾರೆ ಎಂದು ಈಗಾಗಲೇ ತಿಳಿಸಿದ್ದಾರೆ. ಈ ಮಧ್ಯೆ ವಾಹಿನಿ ವಾಟ್ಸಾಪ್ ಚಾನೆಲ್ನಲ್ಲಿ ವೋಟಿಂಗ್ ಪೋಲ್ ಹಾಕಿದ್ದು, ಇದರಲ್ಲಿ ಈ ವಾರ ಯಾರ ಆಟಕ್ಕೆ ಫುಲ್ ಸ್ಟಾಪ್ ಸಿಗುತ್ತದೆ? ಎಂದು ನಾಮಿನೇಟ್ ಆದ ಸ್ಪರ್ಧಿಗಳ ಹೆಸರುಗಳನ್ನು ನೀಡಲಾಗಿದೆ. ಇದರಲ್ಲಿ ಓರ್ವ ಸ್ಪರ್ಧಿಗೆ ಅತಿ ಹೆಚ್ಚು ಪೋಲ್ ವೋಟ್ ಬಿದ್ದಿದೆ.
ಸದ್ಯ ಮಾಹಿತಿ ಪ್ರಕಾರ ಈ ವಾರದ ಮಧ್ಯೆ ಬಿಗ್ ಬಾಸ್ ಮನೆಯಿಂದ ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾದವ್ ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆ. ಕಳೆದ ವಾರ ಟಾಸ್ಕ್ ಗೆದ್ದು ನಾಮಿನೇಷನ್‌ನಿಂದ ಬಚಾವ್ ಆಗುದ್ದ ಗೌತಮಿ, ಈ ವಾರ ವಿಕೇಂಡ್‌ಗೂ ಮುನ್ನವೇ ಮನೆಯಿಂದ ಹೊರ ಹೋಗುವ ಸಾಧ್ಯತೆ ಇದೆ. ಆಟಕ್ಕೆ ಫುಲ್ ಸ್ಟಾಪ್ ಹಾಕುವ ಪೋಲ್‌ನಲ್ಲಿ ಗೌತಮಿ ಜಾದವ್‌ಗೆ ಅತಿ ಹೆಚ್ಚು ಮಂದಿ ವೋಟ್ ಹಾಕಿದ್ದಾರೆ. ಇದು ಕೇವಲ ಪೋಲ್ ವೋಟಿಂಗ್ ಮಾಹಿತಿಯಾಗಿದ್ದು, ವಾರದ ಮಧ್ಯೆಯೇ ಬಿಗ್ ಬಾಸ್ ಮನೆಯಿಂದ ಯಾರು ಹೊರಹೋಗುತ್ತಾರೆ ಎನ್ನುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಪ್ರೇಕ್ಷಕರ ಈ ಕಾತುರಕ್ಕೆ ಇನ್ನೆರಡು ದಿನದಲ್ಲಿ ಉತ್ತರ ಸಿಗಲಿದೆ.












Click it and Unblock the Notifications