ಶಿಶಿರ್‌ಗೆ ಮುತ್ತಿಟ್ಟ ಐಶ್ವರ್ಯ: ಹೊಸ ಫೋಟೋಶೂಟ್ ಹಿಂದಿನ ಸೀಕ್ರೆಟ್ ಏನು?
ಬಿಗ್ ಬಾಸ್ ಮನೆಯಲ್ಲಿ ಆರಂಭವಾಗುವ ಸ್ನೇಹ ಕೆಲವೊಬ್ಬರಿಗೆ ಗಾಢವಾಗಿದ್ದರೆ, ಇನ್ನೂ ಕೆಲವೊಬ್ಬರು ಮನೆಯಿಂದ ಆಚೆ ಬರುತ್ತಿದ್ದಂತೆ ಮರೆತು ಬಿಡುತ್ತಾರೆ. ಆದರೆ ಬಿಗ್ ಬಾಸ್ ಕನ್ನಡ ಸೀಜನ್ 11ರ ಸ್ಪರ್ಧಿಗಳಾದ ನಟ ಶಿಶಿರ್ ಶಾಸ್ತ್ರಿ, ನಟಿ ಐಶ್ವರ್ಯ ಸಿಂಧೋಗಿ ಹಾಗೂ ಎಲ್ಲರ ಮೆಚ್ಚಿನ ಪಾರು ಖ್ಯಾತಿಯ ಮೋಕ್ಷಿತಾ ಪೈ ಸ್ನೇಹ ಮಾತ್ರ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಮತ್ತಷ್ಟು ಗಟ್ಟಿಯಾಗಿದೆ.
ಬಿಗ್ ಬಾಸ್ ಮನೆಯೊಳಗಿದ್ದಾಗಲೂ ಈ ಮೂವರು ಉತ್ತಮ ಸ್ನೇಹಿತರಾಗಿದ್ದು, ಒಬ್ಬರ ಪರವಾಗಿ ಒಬ್ಬರು ಸದಾ ನಿಲ್ಲುತ್ತಿದ್ದರು. ಮನೆಯಿಂದ ಹೊರ ಬಂದ ಬಳಿಕ ಈ ಮೂವರೇ ಎಲ್ಲಾ ಕಡೆಗಳಲ್ಲಿಯೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು, ಮೂವರು ವಿವಿಧ ದೇವಾಲಯಗಳಿಗೆ ಜೊತೆಯಾಗಿ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅವರ ಅಭಿಮಾನಿಗಳು ನಿಮ್ಮ ಮೂರು ಜನರ ಸ್ನೇಹ ಮತ್ತಷ್ಟು ಗಟ್ಟಿಯಾಗಲಿ ಎಂದು ಹಾರೈಸಿದ್ದಾರೆ.

ಈ ಮೂವರ ಪೈಕಿ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯ ಸಿಂಧೋಗಿ ಮೇಲೆ ಎಲ್ಲರ ಕಣ್ಣು. ನೋಡಲು ಸಖತ್ ಕ್ಯೂಟ್ ಆಗಿ ಕಾಣುವ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿದ್ದಾಗಲೂ ಪ್ರೇಕ್ಷಕರಲ್ಲಿ ಒಂದು ಕುತೂಹಲ ಹುಟ್ಟುಹಾಕಿತ್ತು. ಇಬ್ಬರ ಮಧ್ಯೆ ಪ್ರೀತಿ ಇರಬಹುದು ಎಂದು ಅನೇಕರು ಊಹಿಸಿದ್ದರು ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ನಮ್ಮದು ಅಪ್ಪಟ ಸ್ನೇಹ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಇಬ್ಬರು ಹೆಚ್ಚಾಗಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಈ ಮಧ್ಯೆ ಶಿಶಿರ್-ಐಶ್ವರ್ಯ ಜೋಡಿ ಹೋಳಿ ಹಬ್ಬದ ಪ್ರಯುಕ್ತ ಹೊಸ ರೀಲ್ಸ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಶಿಶಿರ್ ಕೆನ್ನೆಗೆ ಐಶ್ವರ್ಯ ಮುತ್ತು ಕೊಟ್ಟಿದ್ದಾರೆ. 'ವಸಂತ ಮಾಸವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಹೋಳಿ ಹಬ್ಬವು ನಿಮ್ಮೆಲ್ಲರ ಬದುಕಲ್ಲೂ ಪ್ರೀತಿ, ಸ್ನೇಹ, ಹರುಷದ ಬಣ್ಣಗಳು ಸದಾ ಹೊನಲಾಗಿಸಲಿ. ಹೋಳಿ ಹಬ್ಬದ ಶುಭಾಶಯಗಳು' ಎಂದು ಕ್ಯಾಪ್ಷನ್ ನೀಡಿ ಶಿಶಿರ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹೋಳಿ ಹಬ್ಬದ ದಿನವೇ ಮಿಂಚಿದ ಶಿಶಿರ್-ಐಶ್ವರ್ಯಗೆ ಜನ ಸಿಕ್ಕಾಪಟ್ಟೆ ಪ್ರೀತಿ ತೋರಿಸಿದ್ದಾರೆ.

ಇನ್ನು ಈ ಹಿಂದೆ ಐಶ್ವರ್ಯ ಬಗ್ಗೆ ಮಾತನಾಡಿದ್ದ ಶಿಶಿರ್, 'ನಮ್ಮಿಬ್ಬರ ಮಧ್ಯೆ ಲವ್ ಅಥವಾ ಪ್ರೀತಿ ಎನ್ನುವುದು ಖಂಡಿತಾ ಇಲ್ಲ. ಅಲ್ಲಿ ಲವ್ ಅಥವಾ ಕ್ರಶ್ ಎನ್ನುವುದು ಖಂಡಿತಾ ಇರಲಿಲ್ಲ. ಅಲ್ಲಿ ಇದ್ದಿದ್ದು ಒಂದು ಪರಿಶುದ್ಧವಾದ ಸ್ನೇಹ. ಈ ಸ್ನೇಹದಲ್ಲಿ ಪ್ರೀತಿಯಾಗಿದೆ, ಕ್ರಶ್ ಆಗಿದೆ ಖಂಡಿತಾ ಇಲ್ಲ. ಒಂದು ಪರಿಶುದ್ಧವಾದ ಸ್ನೇಹ ನನ್ನ ಮತ್ತು ಅವರ ಕಡೆಯಿಂದ ಇದೆ. ಐಶ್ವರ್ಯ ಎಲ್ಲರೂ ಅಂದುಕೊಂಡಂತೆ ಇಲ್ಲ. ಮಾನಸಿಕವಾಗಿ ಅವರು ತುಂಬಾ ಗಟ್ಟಿಯಾಗಿದ್ದಾರೆ. ಯಾಕೆಂದರೆ ಹೊರಗಡೆ ತುಂಬಾ ನೋವುಗಳನ್ನು ಎದುರಿಸಿ ಹೋಗಿರುವ ವ್ಯಕ್ತಿ. ಒಂಟಿಯಾಗಿ ನಿಂತುಕೊಂಡು ಎಷ್ಟೋ ಸಂದರ್ಭಗಳನ್ನು ಎದುರಿಸಿದ್ದಾಳೆ' ಎಂದಿದ್ದರು.












Click it and Unblock the Notifications