Bigg Boss: ಮೊದಲ ದಿನವೇ ರೂಲ್ಸ್‌ ಬ್ರೇಕ್ ಮಾಡಿದ ಚೈತ್ರಾ ಕುಂದಾಪುರ ವಿರುದ್ಧ ಉಗ್ರಂ ಉಗ್ರ

ಬಿಗ್‌ಬಾಸ್‌ ಕನ್ನಡ ಸೀಸನ್ 11 ಆರಂಭವಾದ ಮರುದಿನವೇ ದೊಡ್ಮನೆಯಲ್ಲಿ ಸ್ಪರ್ಧಿಗಳ ಕೂಗು ಜೋರಾಗಿದೆ. ಮೆನ ಪ್ರವೇಶಿಸಿದ ಮೊದಲನೇ ದಿನವೇ ಚೈತ್ರಾ ಕುಂದಾಪುರ ಮೇಲೆ ಸಹ ಸ್ಪರ್ಧಿಗಳು ಕಿಡಿ ಕಾರಿದ್ದಾರೆ. ಮನೆಯ ನಿಯಮವನ್ನು ಮೀರಿದಿದ್ದಾರೆ ಎನ್ನುವ ಕಾರಣಕ್ಕೆ ಮನೆಯ ಇತರ ಸ್ಪರ್ಧಿಗಳು ಚೈತ್ರಾ ಜೊತೆಗೆ ಜಗಳವಾಡಿದ್ದಾರೆ. ಹಣ್ಣು ಕಚ್ಚಿ ನರಕದ ಮನೆಯೊಳಗೆ ಎಸೆದರು ಎಂಬ ಕಾರಣಕ್ಕೆ ಉಗ್ರಂ ಮಂಜು ಚೈತ್ರಾ ಕುಂದಾಪುರ ವಿರುದ್ಧ ಕೋಪಗೊಂಡರು.

ಹೌದು.. ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಸ್ವರ್ಗ ಹಾಗೂ ನರಕದ ಬಾಗಿಲು ತೆರೆದುಕೊಂಡಿದೆ. ಒಟ್ಟು 17 ಜನ ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ. ಈ ಸ್ಪರ್ಧಿಗಳ ಪೈಕಿ 7 ಜನ ನರಕದ ಮನೆಗೆ ಹೋದರೆ ಇನ್ನುಳಿದ ಜನ ಸ್ವರ್ಗದ ಮನೆಗೆ ಹೋಗಿದ್ದಾರೆ. ಸ್ವರ್ಗದಲ್ಲಿರುವ ಸ್ಪರ್ಧಿಗಳು ನರಕದಲ್ಲಿರುವ ಸ್ಪರ್ಧಿಗಳಿಗೆ ಮನೆ ಕೆಲಸದ ಜವಬ್ದಾರಿಗಳನ್ನು ನೀಡುತ್ತಾರೆ. ಅದನ್ನು ನರಕದಲ್ಲಿರುವ ಸ್ಪರ್ಧಿಗಳು ಚಾಚೂತಪ್ಪದೆ ಪಾಲಿಸಬೇಕು. ಇದು ಮೊದಲನೇ ದಿನದ ಟಾಸ್ಕ್‌ ಆಗಿದೆ.

Bigg Boss Kannada Season 11 Chaitra Kundapura broke the rules on the first day - what happened

ಮನೆಯನ್ನು ತೊಳೆಯೋದು ಗುಡಿಸೋದು ಹೀಗೆ ಕೆಲ ಕೆಲಸಗಳನ್ನು ನರಕದ ಸ್ವರ್ಧಿಗಳು ಮಾಡಬೇಕು. ಈ ಆಟದಲ್ಲಿ ಸ್ವರ್ಗದಲ್ಲಿರುವ ಉಗ್ರಂ ಮಂಜು ನರಕದ ನಿವಾಸಿ ಚೈತ್ರಾಗೆ ಕೆಲಸವೊಂದನ್ನು ಹೇಳಿದ್ದರು. ಹಣ್ಣನ್ನು ವಾಷ್ ಮಾಡಿ ಕಟ್ ಮಾಡಿಕೊಡಲು ಉಗ್ರಂ ಚೈತ್ರಾಗೆ ಹೇಳಿದ್ದರು. ಆದರೆ ಚೈತ್ರಾ ಉಗ್ರಂ ಮಾತನ್ನು ಕೇಳಿಲ್ಲ. ಅಲ್ಲಿದ್ದ ಹಣ್ಣನ್ನು ಕಚ್ಚಿ ನರಕದ ಮನೆಯೊಳಗೆ ಎಸೆದಿದ್ದಾರೆ. ಈ ವೇಳೆ ಚೈತ್ರಾ ವಿರುದ್ಧ ಎಲ್ಲಾ ಸ್ವರ್ಗದ ಸ್ಪರ್ಧಿಗಳು ತಿರುಗಿ ಬಿದ್ದಿದ್ದಾರೆ.

ಆದರೆ ರೂಲ್ಸ್‌ ಬ್ರೇಕ್ ಮಾಡಿದ ಚೈತ್ರಾ ಮನೆಯ ಸ್ಪರ್ಧಿಗಳೊಂದಿಗೆ ಜಗಳವಾಡಿದ್ದಾರೆ. ತಾನು ಮಾಡಿದ್ದೇ ಸರಿ ಎಂದು ವಾದಿಸಿದ್ದಾರೆ. ಉಗ್ರಂ ನಾನು ಹಣ್ಣನ್ನು ಕಟ್ ಮಾಡಿಕೊಡಲು ಹೇಳಿದ್ದೆ ತಿನ್ನಲು ಹೇಳಿಲ್ಲ ಅಂತ ಚೈತ್ರಾ ಜೊತೆಗೆ ಜಗಳ ಶುರುವಾಗಿದೆ. ಇದೇ ವೇಳೆ ಮನೆಯ ಇತರ ಸ್ಪರ್ಧಿಯಾದ ಯಮುನಾ ಕೂಡ ಚೈತ್ರಾಗೆ ನಿಯಮದ ಬಗ್ಗೆ ವಿವರಿಸಿದ್ದಾರೆ.

Bigg Boss Kannada Season 11 Chaitra Kundapura broke the rules on the first day - what happened

ಈ ವೇಳೆ ಚೈತ್ರಾ ಯಾರ ಮಾತಿಗೂ ಬೆಲೆ ಕೊಡದೆ ನಾನು ಮಾತನಾಡಬಾರದು ಅಂತ ಯಾವ ರೂಲ್ಸ್‌ ಬುಕ್‌ನಲ್ಲೂ ಇಲ್ಲ ಅಂತ ತಿರುಗೇಟು ಕೊಟ್ಟು ತಾವು ಹಣ್ಣು ತಿಂದೇ ತಿನ್ನುತ್ತೇನೆ ಎಂದು ಸವಾಲು ಹಾಕಿದ್ದಾರೆ. ಹೀಗೆ ಬಿಗ್ ಬಾಸ್‌ ಆರಂಭವಾದ ಮೊದಲನೇ ದಿನವೇ ಕಿಚ್ಚು ಹೊತ್ತುಕೊಂಡಿದೆ.

ಸ್ವರ್ಗ ಹಾಗೂ ನರಕದ ಮನೆಗೆ ಹೋದ ಸ್ಪರ್ಧಿಗಳು

ಬಿಗ್‌ಬಾಸ್‌ ಮನೆಗೆ ಮೊದಲ ಸ್ಪರ್ಧಿಯಾಗಿ 'ಗೀತಾ' ಸೀರಿಯಲ್ ಖ್ಯಾತಿಯ ಭವ್ಯಾ ಗೌಡ ಸ್ವರ್ಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಎರಡನೇ ಸ್ಪರ್ಧಿಯಾಗಿ ನಟಿ ಯಮುನಾ ಶ್ರೀನಿಧಿ (ಸ್ವರ್ಗಕ್ಕೆ), ಕಾಮಿಡಿ ವೀಡಿಯೋಗಳಿಂದ ಫೇಮಸ್ ಆದ ಧನರಾಜ್ ಅಚಾರ್(ಸ್ವರ್ಗಕ್ಕೆ), ನಾಲ್ಕನೇ ಸ್ಪರ್ಧಿಯಾಗಿ 'ಸತ್ಯ' ಸೀರಿಯಲ್‌ನ ನಟಿ ಗೌತಮಿ ಜಾದವ್ (ಸ್ವರ್ಗಕ್ಕೆ), ಐದನೇ ಸ್ಪರ್ಧಿಯಾಗಿ ನಟಿ ಅನುಷಾ ರೈ (ಸ್ವರ್ಗಕ್ಕೆ), ಆರನೇ ಸ್ಪರ್ಧಿಯಾಗಿ ನಟ ಕೀರ್ತಿರಾಜ್ (ಸ್ವರ್ಗಕ್ಕೆ), 7ನೇ ಸ್ಪರ್ಧಿಯಾಗಿ ವಕೀಲ ಜಗದೀಶ್ (ಸ್ವರ್ಗಕ್ಕೆ), 8ನೇ ಸ್ಪರ್ಧಿಯಾಗಿ ಕಿರುತೆರೆ ನಟ ಶಶಿರ್ ಶಾಸ್ತ್ರಿ (ನರಕಕ್ಕೆ), 9ನೇ ಸ್ಪರ್ಧಿಯಾಗಿ ನಟನೆ ಹಾಗೂ ಜಿಮ್ ಟ್ರೈನರ್ (ನರಕಕ್ಕೆ) ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ.

ಇನ್ನೂ 10ನೇ ಸ್ಪರ್ಧಿಯಾದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ 'ರಾಜಿ' ಪಾತ್ರದ ಜನಪ್ರಿಯತೆ ಪಡೆದ ನಟಿ ಹಂಸ ಪ್ರತಾಪ್ (ಸ್ವರ್ಗಕ್ಕೆ), 11ನೇ ಸ್ಪರ್ಧಿಯಾದ ಗಿಚ್ಚಿ ಗಿಲಿಗಿಲಿಯ ರನ್ನರ್ ಅಪ್ ತುಕಾಲಿ ಮಾನಸ (ನರಕಕ್ಕೆ), 12ನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ (ನರಕಕ್ಕೆ), 13ನೇ ಸ್ಪರ್ಧಿಯಾದ ನಟಿ ಐಶ್ವರ್ಯ ಸಿಂಧೋಗಿ (ಸ್ವರ್ಗಕ್ಕೆ), 14ನೇ ಸ್ಪರ್ಧಿಯಾಗಿ ರಾಜಕಾರಣಿ ಚೂತ್ರಾ ಕುಂದಾಪುರ, 15ನೇ ಸ್ಪರ್ಧಿಯಾಗಿ ನಟ ಉಗ್ರಂ ಮಂಜು (ಸ್ವರ್ಗಕ್ಕೆ), 16ನೇ ಸ್ಪರ್ಧಿಯಾಗಿ 'ಪಾರು' ಸೀರಿಯಲ್ ನಟಿ ಮೋಕ್ಷಿತಾ ಪೈ (ಸ್ವರ್ಗಕ್ಕೆ), ಕೊನೆಯ 17ನೇ ಸ್ಪರ್ಧಿಯಾಗಿ ಧಾರಾವಾಹಿ ನಟ ರಂಜಿತ್ ಕುಮಾರ್ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+