Chaithra Kundapura: ಎಲಿಮಿನೇಷನ್ ಶಾಕ್: ಬಿಗ್ ಬಾಸ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ
ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನು ಕೇವಲ ಮೂರು ವಾರಗಳಷ್ಟೇ ಪ್ರಸಾರಗೊಳ್ಳಲಿದೆ. ಈಗಾಗಲೇ ಗ್ರ್ಯಾಂಡ್ ಫಿನಾಲೆ ದಿನಾಂಕ ಕೂಡ ನಿಗದಿಯಾಗಿದ್ದು, ಜನವರಿ 26 ಭಾನುವಾರ ಗಣರಾಜೋತ್ಸವದ ದಿನ ನಡೆಯಲಿದೆ. ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಈ ಸೀಜನ್‌ನಲ್ಲಿ ಕಾಲಿಟ್ಟ 20 ಜನರ ಪೈಕಿ ಇದೀಗ ಕೇವಲ ಒಂಬತ್ತು ಜನ ಉಳಿದುಕೊಂಡಿದ್ದು, ವಿನ್ನರ್ ಯಾರಾಗಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ.
ಈ ವಾರ ಟಿಕೆಟ್ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ಬಿಗ್ ಬಾಸ್ ಮನೆಯಲ್ಲಿ ಜೋರಾಗಿದ್ದು, ಇರುವ ಒಂಬತ್ತು ಜನರ ಪೈಕಿ ಒಬ್ಬರು ಈ ವಾರವೇ ಫಿನಾಲೆಗೆ ಹೋಗುವುದು ಖಚಿತವಾಗಿದೆ. ಹೀಗಾಗಿ ಬಿಗ್ ಬಾಸ್ ಮನೆಯೊಳಗೆ ಟಾಸ್ಕ್ ಕಾವು ಹೆಚ್ಚಾಗಿದ್ದು, ಆಟದ ಜೊತೆಗೆ ಹೊಡೆದಾಟ ಬಡಿದಾಟಗಳು ಕೂಡ ಜೋರಾಗಿ ನಡೆಯುತ್ತಿದೆ. ಏನೇ ಆಗಲಿ ಫಿನಾಲೆಗೆ ಟಿಕೆಟ್ ಪಡೆಯಲೇಬೇಕು ಎನ್ನುವ ಹಠಕ್ಕೆ ಸ್ಪರ್ಧಿಗಳು ಬಿದ್ದಿದ್ದಾರೆ.

ಇನ್ನು ಈ ವಾರ ಗೌತಮಿ, ಉಗ್ರಂ ಮಂಜು ಹಾಗೂ ಹನುಮಂತ ಈ ವಾರದ ನಾಮಿನೇಷನ್‌ನಿಂದ ಪಾರಾಗಿದ್ದು, ತ್ರಿವಿಕ್ರಮ್, ಮೋಕ್ಷಿತಾ, ಭವ್ಯ ಗೌಡ, ಧನರಾಜ್ ಹಾಗೂ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ಈ ವಾರ ಮನೆಯಿಂದ ಒಬ್ಬರು ಅಥವಾ ಇಬ್ಬರು ಹೊರ ಹೋಗುವುದು ಖಚಿತವಾಗಿದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಫಿನಾಲೆ ಟಿಕೆಟ್ ಪಡೆದು ನಾಮಿನೇಷನ್‌ನಿಂದ ಪಾರಾಗಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಚೈತ್ರಾ ಕುಂದಾಪುರ ಆಟವಾಡುವ ಅವಕಾಶವನ್ನು ಕಿತ್ತುಕೊಂಡಿದ್ದಾರೆ.
ನಿಮ್ಮ ಪೈಕಿ ಒಬ್ಬರನ್ನು ಟಿಕೆಟ್ ಟು ಫಿನಾಲೆ ಓಟದಿಂದ ಹೊರಗಿಡಬೇಕು ಎಂದು ಬಿಗ್ ಬಾಸ್ ಆದೇಶಿಸಿದಾಗ, ಮನೆಯ ಇತರ ಸದಸ್ಯರು ಚೈತ್ರಾ ಕುಂದಾಪುರ ಹೆಸರನ್ನು ಹೆಚ್ಚಾಗಿ ತೆಗೆದುಕೊಂಡಿದ್ದು, ವಾದ ಹಾಗೂ ಅವರು ತಪ್ಪು ತಿದ್ದಿಕೊಳ್ಳುವುದಿಲ್ಲ ಎನ್ನುವ ಕಾರಣವನ್ನು ನೀಡಿದ್ದಾರೆ.

ಇದರಿಂದ ಬೇಸರಗೊಂಡ ಚೈತ್ರಾ, ಒಬ್ಬರನ್ನು ಟಾರ್ಗೆಟ್ ಮಾಡುವುದನ್ನು ಇವರೆಲ್ಲಾ ಸುಲಭವಾಗಿ ಪ್ಲ್ಯಾನ್ ಮಾಡುತ್ತಾರೆ. ಈ ನೂರು ದಿನಗಳು ಈ ಮನೆಯಲ್ಲಿ ನಡೆದಿದ್ದು ಇದೇ. ಆಟ ಆಡಲು ಅವಕಾಶನೇ ಕೊಡುತ್ತಿರಲಿಲ್ಲ. ಇದೇ ರೀತಿ ಟಾರ್ಗೆಟ್ ಮಾಡಿ ಆಟದಿಂದ ಹೊರಗಿರುವುದು. ಆಡಲು ಈಗಿನ್ನೂ ಬರುತ್ತಿದೆ. ಅಷ್ಟರಲ್ಲಿ ಅಡ್ಡಗಾಲು ಹಾಕಿದ್ರಲ್ಲಾ ಎಂದು ಚೈತ್ರಾ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದ್ಯ ಟಿಕೆಟ್ ಟು ಫಿನಾಲೆ ಓಟದಿಂದ ಚೈತ್ರಾ ಹೊರಗುಳಿದ ಕಾರಣ ಎಲಿಮಿನೇಷನ್ ಬಿಸಿ ತಟ್ಟುವುದು ಪಕ್ಕಾ ಆಗಿದೆ.












Click it and Unblock the Notifications