Get Updates
Get notified of breaking news, exclusive insights, and must-see stories!

Bigg Boss: ಜೈಲು ಸೇರಿದ ರಜತ್‌ ಬಾಸ್‌ ಇವ್ರೇ ನೋಡಿ.!

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ಅವಾಚ್ಯ ಶಬ್ಧಗಳ ಆರೋಪದ ಮೇಲೆ ಜೈಲಿಗೆ ಹೋದ ಬಳಿಕ ರಜತ್‌ ತನ್ನ ಬಾಸ್‌ ಯಾರೆಂದು ಬಹಿರಂಗಪಡಿಸಿದ್ದಾರೆ. ಅಲ್ಲದೆ, ಕೋಪದಲ್ಲಿಯೇ ಮಾತನಾಡುತ್ತಾ ತಮ್ಮ ಬಾಸ್‌ ಹೇಳುವ ಯಾವೆಲ್ಲ ನಿಯಮಗಳನ್ನು ಫಲೋ ಮಾಡುತ್ತೇನೆ ಅಂತಲೂ ಹೇಳಿದ್ದಾರೆ. ಹಾಗಾದರೆ, ಅವರು ಏನು ಹೇಳಿದ್ದಾರೆ ಹಾಗೂ ಆ ಬಾಸ್‌ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಈಗಾಗಲೇ ಅವಾಚ್ಯ ಶಬ್ಧಗಳನ್ನು ಬಳಿಸಿದ ಹಿನ್ನೆಲೆ ಲಾಯರ್ ಜಗದೀಶ್‌ ಅವರನ್ನು ಕನ್ನಡದ ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿತ್ತು. ಇದರ ಬೆನ್ನಲ್ಲೇ ಜಗದೀಶರ್‌ ಅವರ ಮೇಳೆ ಕೈ ಮಾಡಿದ್ದಾರೆ ಎಂಬ ಕಾರಣಕ್ಕೆ ಹೊರಹಾಕಲಾಗಿತ್ತು. ಇನ್ನು ಇದೀಗ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ರಜತ್‌ ಜೈಲು ಸೇರಿದ್ದಾರೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.

Bigg Boss Kannada Rajat Says I Am Boss Fan After Going to Jail

ಬಿಗ್‌ ಬಾಸ್‌ ಮನೆಯಲ್ಲಿ ಗೇಮ್‌ ಆಡಿಸುವಾಗ ಗೋಲ್ಡ್‌ ಸುರೇಶ್‌ ಮತ್ತು ರಜತ್‌ ನಡುವೆ ವಾಗ್ವಾದ ನಡೆಯುತ್ತದೆ. ಈ ವೇಳೆ ಗುಗ್ಗು ನನ ಮಗನ್‌ ಥರಾ, ಸೆಡೆ ರೀತಿ ಆಡ್ತಿಯಲ್ಲೋ, ಸುಮ್ನೆ ಹ..ಕೊಂಡು ಕುಳಿತುಕೊಳ್ಳೋ ಎಂದು ಸುರೇಶ್‌ಗೆ ಬಯ್ಯುತ್ತಾರೆ. ಆಗ ರೊಚ್ಚಿಗೆದ್ದ ಸುರೇಶ್‌ ಮಗನೇ ಅನ್ನೋಕೆ ಇವನೇನು ನಮ್ಮಪ್ಪನಾ ಬಿಗ್‌ ಬಾಸ್‌ ಎನ್ನುತ್ತಾ ಚೀರಾಡುತ್ತಾರೆ.

ಬಳಿಕ ಕಳಪೆ, ಉತ್ತಮ ಕೊಡುವಾಗ ಬಹುತೇಕರು ಮೋಕ್ಷಿತಾಗೆ ಉತ್ತಮ ಕೊಟ್ಟರೆ, ರಜತ್‌ಗೆ ಕಳಪೆ ನೀಡಿ ಬಿಗ್‌ ಬಾಸ್‌ ಮನೆಯೊಳಗಿನ ಜೈಲಿಗೆ ಕಳುಹಿಸುತ್ತಾರೆ. ಅಷ್ಟಕ್ಕೂ ಸುಮ್ಮನಿರದ ರಜತ್‌ ಜೈಲಿನೊಳಗೆ ಶಿಶಿರ್‌, ಐಶ್ವರ್ಯ ವಿರುದ್ಧ ಕೆಂಡಕಾರುತ್ತಾರೆ. ಬರೀ ಹುಡುಗಿಯರ ಜೊತೆ ಕೈ ಕೈ ಹಿಡಿದುಕೊಂಡು ಓಡಾಡೋದಲ್ಲ. ಇದನ್ನು ಬಿಗ್‌ ಬಾಸ್‌ ಸಹಿಸುವುದಿಲ್ಲ ಎಂದು ರಜತ್‌ ಹೇಳುತ್ತಾರೆ.

ಸುಮ್ಮನಿರು ಅಂತಾ ಕ್ಯಾಪ್ಟನ್‌ ಉಗ್ರಂ ಮಂಜು ಹೇಳಿದರೂ ಕೂಡ ರಜತ್‌ ಸುಮ್ಮನಿರು ಗುರು, ಸೆಡೆ ನನ್ನ ಮಕ್ಕಳ ರೀತಿ ಆಡುತ್ತಾರೆ ಎಂದು ಶಿಶಿರ್ ವಿಚಾರವನ್ನು ತೆಗೆಯುತ್ತಾರೆ. ಬಳಿಕ ತನ್ನ ಗುರು ಹೇಳಿದ ರೀತಿ ಪಾಲಿಸುತ್ತೇನೆ ಎಂದು ಹೇಳುತ್ತಾರೆ. ಹೀಗೆ ಗುರು ಅಂತಾ ಹೇಳಿದ್ದು ಬೇರೆ ಯಾರಿಗೂ ಅಲ್ಲ, ಚೈತ್ರಾ ಕುಂದಾಪುರ ಅವರೇ ನನ್ನ ಗುರು. ಅವರನ್ನು ನನ್ನ ಬಳಿ ಕರೆಸಿ, ಆಗ ಸಮಾಧಾನವಾಗುತ್ತದೆ ಎಂದು ಹೇಳಿದರು.

ಬಳಿಕ ರಜತ್‌ ಆಸೆಯಂತೆ ಅವರ ಗುರುಗಳಾದ ಚೈತ್ರಾ ಕುಂದಾಪುರ ಅವರನ್ನು ಜೈಲಿನ ಬಳಿ ಕರೆಸುತ್ತಾರೆ. ಆಗ ರಜತ್ ನಮ್ಮ ಗುರು ಬರುವಾಗ ಜೋರಾಗಿ ಶಿಳ್ಳೆ ಹೊಡೆಯಬೇಕೆಂದು ಎಲ್ಲಾರಿಗೂ ಹೇಳುತ್ತಾರೆ. ಅದರಂತೆಯೇ ಚೈತ್ರಾ ಬರುತ್ತಿದ್ದಂತೆಯೇ ಹನುಮಂತು ಜೋರಾಗಿ ಶಿಳ್ಳೆ ಹೊಡೆದು ಅವರನ್ನು ಸ್ವಾಗತಿಸುತ್ತಾರೆ. ಬಳಿಕ ರಜತ್‌ ನನ್ನ ಶಿಶ್ಯ ಎಂದು ಚೈತ್ರಾ ಕುಂದಾಪುರ ಅವರು ನಗುತ್ತಲೇ ಹೇಳುತ್ತಾ ಗಮನ ಸೆಳೆಯುತ್ತಾರೆ.

ಗೋಲ್ಡ್‌ ಸುರೇಶ್‌ಗೆ ಕೆಟ್ಟ ಪದಗಳಿಂದ ಬೈದ ವಿಚಾರವಾಗಿ ವಾದರ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ರಜತ್ ಅವರಿಗೆ ಕ್ಲಾಸ್‌ ತೆಗೆದುಕೊಂಡು ವಾರ್ನ್‌ ಮಾಡುತ್ತಾರೆ. ಕನ್ನಡದಲ್ಲಿ ಮಾತನಾಡುವುದಕ್ಕೆ ತುಂಬಾ ಇದೆ. ನಿಮ್ಮೆಲ್ಲರಿಗೂ ಕೆಲವು ತೂಕಗಳಿವೆ ಸರ್.. ಬುಡ ಎಲ್ಲಿಂದ ಆರಂಭವಾಯಿತು ಎಂದರೆ ನನಗೆ ಕೋಪ ಬಂದಾಗೆಲ್ಲ ಇಂತಹದ್ದ ನನ್ನ ಬಾಯಿಂದ ಬರೋದು ಅಂತಾ ಹೇಳುತ್ತೀರಲ್ಲ. ನೀವು ಅದನ್ನೇ ವಾಪಾಸ್‌ ರಿಪೀಟ್‌ ಮಾಡಿ ನನ್ನ ಮುಂದೆ ಎಂದು ಸುದೀಪ್‌ ಕೇಳುತ್ತಾರೆ. ಆಗ ರಜ್‌ ಈಗ ಅದನ್ನೆಲ್ಲ ಹೇಳೋಕೆ ಆಗುವುದಿಲ್ಲ ಸರ್.. ಮತ್ತೊಮ್ಮೆ ಇಂತಹ ತಪ್ಪನ್ನ ಮಾಡುವುದಿಲ್ಲ ಕ್ಷಮಿಸಿ ಸರ್ ಎಂದು ಹೇಳುತ್ತಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಸುದೀಪ್‌ ಮತ್ತೊಮ್ಮೆ ಇಂತಹ ತಪ್ಪು ಮಾಡಿದರೆ ಬಾಗಿಲು ನಿಮಗಾಗಿ ಕಾದಿರುತ್ತದೆ ಎಂದು ಬಾಗಿಲ ಕಡೆ ಕೈ ತೋರಿಸುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+