Sonu Srinivas Gowda: ಸೋನು ಮದುವೆ ಫಿಕ್ಸ್: ವಿಡಿಯೋ ಕೊನೆಯಲ್ಲಿ ಫುಲ್ ಟ್ವಿಸ್ಟ್
ಕನ್ನಡ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಸೀಸನ್ 1ರ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಬಂಧನ, ಜೈಲು ಅಂತಾ ಕಹಿ ವಿಚಾರಕ್ಕೆ ಸುದ್ದಿಯಲ್ಲಿದ್ದ ಸೋನು ಗೌಡ ಇದೀಗ ಸಂತೋಷದ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ವಿವ್ ಇರುವ ಸೋನು ಶ್ರೀನಿವಾಸ್ ಗೌಡ ಗುಡ್‌ನ್ಯೂಸ್‌ವೊಂದನ್ನು ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ಒಟಿಟಿ ಸೀಸನ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರಂತೆ. ಈ ಬಗ್ಗೆ ಸ್ವತಃ ಸೋನು ಶ್ರೀನಿವಾಸ್ ಗೌಡ ತಮ್ಮ ಯ್ಯೂಟೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ. ನನ್ನ ಮದುವೆ ಫಿಕ್ಸ್ ಆಯ್ತು ಅಂತಾ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿರುವ ಸೋನು ಶ್ರೀನಿವಾಸ್ ಗೌಡ, ಚಿಕ್ಕಪೇಟೆ ಶಾಪಿಂಗ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಹೀಗಾಗಿ ಸೋನು ಗೌಡ ಮದುವೆ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಚಿಕ್ಕಪೇಟೆಯಲ್ಲಿ ದೊಡ್ಡ ಮಟ್ಟದಲ್ಲಿ ಶಾಪಿಂಗ್ ಮಾಡಿರುವ ವಿಡಿಯೋವನ್ನು ನೋಡಿದ ಬಹುತೇಕರು ಸದ್ಯದಲ್ಲೇ ಸೋನು ಗೌಡ ಮದುವೆ ಎನ್ನುವುದನ್ನು ನಂಬಿದ್ದಾರೆ. ಆದರೆ ಅದೇ ವಿಡಿಯೋ ಕೊನೆಯಲ್ಲಿ ಟ್ವಿಸ್ ಕಟ್ಟಿರುವ ಸೋನು, ಗೃಹ ಪ್ರವೇಶಕ್ಕೆ ಇಷ್ಟೆಲ್ಲಾ ಶಾಪಿಂಗ್ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಆದರೆ ಇದರ ಜೊತೆಗೆ ಸೋನು ಶ್ರೀನಿವಾಸ್ ಗೌಡ ನನ್ನ ಮದುವೆ ಫಿಕ್ಸ್ ಆಯ್ತು ಅಂತಾ ಕೂಡ ಹೇಳಿರುವುದು ಅವರ ಫಾಲೋವರ್ಸ್‌ಗಳ ಕುತೂಹಲ ಹೆಚ್ಚಿಸಿದೆ. ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಹೇಳುತ್ತೇನೆ ಎಂದಿರುವ ಸೋನು ಶ್ರೀನಿವಾಸ್ ಗೌಡ ಹುಡುಗ ಯಾರು, ಯಾವಾಗ ಮದುವೆ ಎನ್ನುವ ಯಾವ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. ಬಹುಶಃ ಮುಂದಿನ ವಿಡಿಯೋಗಳಲ್ಲೇ ಸೋನು ತಮ್ಮ ಮದುವೆ ಹಾಗೂ ಹುಡುಗ ವಿಚಾರವನ್ನು ಹೇಳಿಕೊಳ್ಳುವ ಸಾಧ್ಯತೆ ಇದೆ.

ಸಹಾಯ ಮಾಡಲು ಹೋಗಿ ಜೈಲು ಸೇರಿದ ಸೋನು ಶ್ರೀನಿವಾಸ್ ಗೌಡ ಬಂಧನ
ಬಿಗ್ಬಾಸ್ ಒಟಿಟಿ ಸೀಸನ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಕಳೆದ ಕೆಲವು ತಿಂಗಳ ಹಿಂದೆ ಭಾರೀ ಸುದ್ದಿಯಲ್ಲಿದ್ದರು. ರಾಯಚೂರು ಮೂಲದ ಬಾಲಕಿಯನ್ನು ಸೋನು ಶ್ರೀನಿವಾಸ್ ಗೌಡ ದತ್ತು ಪಡೆದುಕೊಂಡಿದ್ದರು. ಈ ವಿಚಾರವನ್ನು ಸೋನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.
ಯಾವುದೇ ದಾಖಲೆ ಇಲ್ಲದೇ ಕಾನೂನು ಬಾಹಿರವಾಗಿ ಬಾಲಕಿಯನ್ನು ದತ್ತು ಪಡೆದ ಆರೋಪದ ಮೇಲೆ ಮಕ್ಕಳ ಕಲ್ಯಾಣ ಸಮಿತಿಯು ದೂರು ದಾಖಲಾಗಿ ಪೊಲೀಸರು ಸೋನು ಗೌಡ ಅವರನ್ನು ಬಂಧಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ 11 ದಿನಗಳ ಕಾಲ ವಿಚಾರಣಾಧೀನ ಕೈದಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಬಳಿಕ ಜಾಮೀನು ಪಡೆದು ಹೊರಬಂದಿದ್ದರು.












Click it and Unblock the Notifications