Bigg Boss: ರಜತ್‌ ಫೇವರಿಸಂ ಆಟದ ವಿಡಿಯೋ ರಿಲೀಸ್ ಮಾಡಿದ ಕಿಚ್ಚ ಸುದೀಪ್: ಕಾರಣ ಇದೇ ನೋಡಿ

Bigg Boss Kannada Season 11: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್‌ ಬಾಸ್‌ ಶೋ ಕೂಡ ಒಂದಾಗಿದೆ. ಈ ಬಾರಿಯ ಸೀಸನ್ 11ರ ಫಿನಾಲೆಗೆ ಇನ್ನೂ ಕೇವಲ ಇಂದು ವಾರ ಅಷ್ಟೇ ಬಾಕಿಯಿದೆ. ಇನ್ನೂ ಹಿಂದಿನ ವಾರ ಯಾರೆಲ್ಲ ಹೇಗೆ ಆಟ ಆಡಿದರು ಹಾಗೂ ರಜತ್‌ ಅವರ ಉಸ್ತುವಾರಿ ಹೇಗಿತ್ತು ಎನ್ನುವ ಮಾಹಿತಿಯನ್ನು ವಿಡಿಯೋ ಸಮೇತ ಕಿಚ್ಚ ಸುದೀಪ್‌ ಅವರು ಬಹಿರಂಗಪಡಿಸಿದ್ದಾರೆ.

ಈಗಾಗಲೇ ಟಿಕೆಟ್ ಟು ಫಿನಾಲೆ ವಾರದಲ್ಲಿ ಹನುಮಂತು ಯಶಸ್ವಿಯಾಗಿ ಕ್ಯಾಪ್ಟನ್ ಆಗಿ ಟಿಕೆಟ್ ಪಡೆದುಕೊಂಡಿದ್ದಾರೆ. ಇದೇ ಮೊಟ್ಟ ಮೊದಲ ಬಾರಿ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟ ಸರ್ಧಿಗಳು ದೊಡ್ಮನೆಯಲ್ಲಿ ಸಖತ್‌ ಸೌಂಡ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹನುಮಂತು ಹಾಗೂ ರಜತ್‌ ವೈಲ್ಡ್‌ ಕಾರ್ಡ್‌ ಎಂಟ್ರಿಯಾದ ದಿನದಿಂದಲೂ ಬಿಗ್‌ ಬಾಸ್‌ ಮನೆಯಲ್ಲಿನ ಉಳಿದ ಸ್ಪರ್ಧಿಗಳ ಜೊತೆ ಟಫ್‌ ಕಾಂಪಿಟೇಶನ್‌ ಕೊಡುತ್ತಾ ಬಂದಿದ್ದಾರೆ.

Bigg Boss Kannada Kiccha Sudeep reveals video of Rajat s cheating game

ಕಳೆದ ವಾರ ಬಿಗ್‌ ಬಾಸ್‌ ಮನೆಯಲ್ಲಿ ರಜತ್‌ ನಾಯಕತ್ವ ಸ್ಥಾನ ಪಡೆದುಕೊಂಡಿದ್ದರು. ಇನ್ನು ಅವರು ಯಾವ ರೀತಿಯಾಗಿ ಉಸ್ತುವಾರಿ ನಿಭಾಯಿಸಿದ್ದಾರೆ ಎನ್ನುವುದನ್ನು ವಿಡಿಯೋ ಸಾಕ್ಷಿ ಸಮೇತ ಶನಿವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಸುದೀಪ್ ಅವರು ಬಟಾ ಬಯಲು ಮಾಡಿದ್ದಾರೆ. ಈ ವೇಳೆ ರಜತ್‌ ತಾನು ಉಸ್ತುವಾರಿಯಾಗಿ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಅಂತಾ ವಾದ ಮಾಡುತ್ತಾರೆ.

ಆಗ ಇದಕ್ಕೆ ಅಲ್ಲಿನ ಸ್ಪರ್ಧಿಗಳ ಮೂಲಕ ರಜತ್‌ ಮಾಡಿರುವ ತಪ್ಪುಗಳನ್ನು ಹೊರತೆಗೆಯುತ್ತಾರೆ. ಆಗಲೂ ತಪ್ಪುಗಳನ್ನು ಒಪ್ಪಿಕೊಳ್ಳದ ರಜತ್‌ಗೆ ಸುದೀಪ್‌ ಅವರು ವಿಡಿಯೋ ಸಾಕ್ಷಿ ಸಮೇತ ತೋರಿಸುವ ಮೂಲಕ ತಪ್ಪುಗಳನ್ನು ತಿದ್ದಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ, ಇನ್ನುಳಿದ ಸ್ಪರ್ಧಿಗಳು ಏನಲ್ಲಾ ತಪ್ಪುಗಳನ್ನು ಮಾಡಿದ್ದಾರೆ ಅಂತಲೂ ಹೇಳಿ ಅವರಿಗೆ ತಿದ್ದಿಕೊಳ್ಳುವಂತೆ ಸೂಚಿಸುತ್ತಾರೆ.

ಕಳೆದ ವಾರ ಬಿಗ್‌ ಬಾಸ್‌ ಮೆನಯಲ್ಲಿ ಟಾಸ್ಕ್‌ಗಳು ಒಂದಕ್ಕಿಂತ ಒಂದು ಕಠಿಣ ಆಗಿದ್ದವು. ಸ್ಪರ್ಧಿಗಳು ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಟಾಸ್ಕ್‌ಗಳನ್ನು ಜಿದ್ದಾಜಿದ್ದಿಗೆ ಬಿದ್ದು ಆಡಿದರು. ಈ ವೇಳೆ ಕ್ಯಾಪ್ಟನ್‌ ಆಗಿದ್ದ ರಜತ್ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದರು. ಆದರೆ, ಅವರ ಉಸ್ತುವಾರಿ ಪಕ್ಷಾತೀತ ಆಗಿರಲಿಲ್ಲ. ಯಾರೋ ಕೆಲವರ ಪರ ಅವರು ನಿಲುವುಗಳನ್ನು ಬದಲಾಯಿಸಿದಂತಿತ್ತು. ಇದೇ ವಿಚಾರಗಳನ್ನೇ ವಿಡಿಯೋ ಸಾಕ್ಷಿ ಸಮೇತ ಸುದೀಪ್‌ ಬಹಿರಂಗಪಡಿಸಿದರು.

ರಜತ್‌ ಉಸ್ತುವಾರಿ ಬಗ್ಗೆ ಮೊದಲಿಗೆ ಅಭಿಪ್ರಾಯವನ್ನು ಕೇಳಿದರು. ಆಗ ಗೌತಮಿ, ಉಗ್ರಂ ಮಂಜು, ಚೈತ್ರಾ, ಧನರಾಜ್ ಸೇರಿದಂತೆ ಹಲವರು ರಜತ್ ಅವರು ಪಕ್ಷಾತೀತವಾಗಿ ಉಸ್ತುವಾರಿ ಮಾಡಿಲ್ಲ. ಉದ್ದೇಶ ಪೂರ್ವಕವಾಗಿ ಕೆಲವರ ಪರವಾಗಿ ನಿರ್ವಹಸಿದರು. ಅವರ ತಂಡವನ್ನು ಗೆಲ್ಲಿಸಲು ಯತ್ನಿಸಿದರು ಎಂದು ಆರೋಪ ಮಾಡಿದರು. ಆದರೆ, ರಜತ್ ಈ ಆರೋಪಗಳನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಆಗಲೇ ಸುದೀಪ್ ಅವರು ವಿಡಿಯೋ ಸಾಕ್ಷಿಗಳನ್ನು ತೆರೆದಿಡ್ಡರು.

3 ವಿಡಿಯೋಗಳನ್ನು ಪ್ಲೇ ಮಾಡಿದ್ದು, ಈ ಎಲ್ಲದರಲ್ಲೂ ಕೂಡ ರಜತ್ ಮೋಸದಾಟ ಆಡಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲದೆ, ಭವ್ಯಾಗಾಗಿಯೇ ಅವರು ಈ ಮೋಸದಾಟ ಆಡಿದ್ದರು. ಇದನ್ನು ಟೀಕಿಸಿದ ಸುದೀಪ್, ಈ ವಿಡಿಯೋ ನೋಡಿದರೆ ಮಾತ್ರವಲ್ಲದೆ, ಈ ವಾರವೆಲ್ಲ ನೀವು ಆಡಿರುವ ರೀತಿ ನೋಡಿದರೆ ಒಂದು ಪ್ಯಾಟರ್ನ್ ಕಾಣುತ್ತಿದೆ. ಪ್ರತಿ ಬಾರಿ ನೀವು ಬಯಾಸ್ ಆದಾಗಲೂ ಅದರ ಲಾಭ ಸಿಕ್ಕಿರುವುದು ಭವ್ಯಾಗೆ. ಹಾಗಿದ್ದ ಮೇಲೆ ಇದನ್ನು ಪರ ಅನ್ನದೆ ಇನ್ನೇನೆಂದು ಕರೆಯಬೇಕು ರಜತ್ ಎಂದು ಸುದೀಪ್‌ ಪ್ರಶ್ನಿಸಿದರು.

ಆಗ ರಜತ್, ನೋಡಲಿಲ್ಲ, ನಿಯಮ ಗೊತ್ತಿರಲಿಲ್ಲ ಎಂದಯ ವಾದಿಸಲು ಯತ್ನಿಸುತ್ತಾರೆ. ಆಗಲೇ ಸುದೀಪ್, ಚೈತ್ರಾ ಇದೇ ಉತ್ತರ ಕೊಟ್ಟಾಗ ನೀವು ಹೇಗೆ ನಡೆದುಕೊಂಡಿದ್ದೀರಿ ನೆನಪಿದೆಯಾ ರಜತ್‌. ವಿರಾಮದ ಸಮಯದಲ್ಲೂ ಮನೆಯವರ ಮೇಲೆ ಸಹ ರಜತ್ ಕೋಪದಿಂದ ಚೀರಾಡಿದರು. ಬಳಿಕ ಕೊನೆಗೂ ಸುದೀಪ್ ಮುಂದೆ ತಪ್ಪೊಪ್ಪಿಕೊಂಡ ರಜತ್, ಇನ್ಮುಂದೆ ಈ ರೀತಿ ಆಗುವುದಿಲ್ಲ ಸರ್ ಎಂದು ಕ್ಷಮೆ ಕೇಳಿದರು. ಆಗ ಸುದೀಪ್‌ ಕೂಡ ಒಳ್ಳೆಯದು ಎಂದು ಹೇಳುತ್ತಾ ಸುಮ್ಮನಾಗಿಬಿಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+