Bigg Boss Kannada: ಬಿಗ್‌ಬಾಸ್‌ನಲ್ಲಿ ಪ್ರೇಯಸಿ ಹೆಸರು ಹೇಳಿದ್ರಾ ಹನುಮಂತ ?!
ನಾ ಒಲ್ಲೆಪಾ ನಾಚಿಕೆ ಆಗ್ತೈತಿ ಅಂತಲೇ ಮಾತು ಪ್ರಾರಂಭಿಸುವ ಹನುಮಂತ ಅವರು ನಾಚಿಕೊಳ್ಳುತ್ತಲ್ಲೇ ಅವರ ಬಾಳ ಸಂಗಾತಿಯ ಬಗ್ಗೆ ಮಾತನಾಡಿದ್ದಾರೆ. ಹನುಮಂತ ಅವರು ಕರುನಾಡ ಮಟ್ಟಿಗೆ ಮನೆ ಮಗನಂತೆಯೇ ಫೇಮಸ್. ಅವರ ಮುಗ್ದತೆಯನ್ನು ಕರ್ನಾಟಕವೇ ಮೆಚ್ಚಿಕೊಂಡಿದೆ. ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಹನುಮಂತ ಅವರು ಹೆಚ್ಚು ಚರ್ಚೆಗೆ ಒಳಗಾಗಿದ್ದು ಇದೆ. ಈ ಸೀಸನ್‌ನಲ್ಲಿ ಅವರನ್ನು ಬಿಗ್‌ಬಾಸ್‌ನ ಒಳಗೆ ಹಾಗೂ ಹೊರಗೆ ಸಹ ವಿಮರ್ಶೆ ಮಾಡಿದ್ದಾರೆ. ಅದಿರಲಿ, ಈಗ ಅವರು ಇಂಟ್ರಸ್ಟಿಂಗ್ ಮ್ಯಾಟರ್‌ವೊಂದನ್ನು ಹಂಚಿಕೊಂಡಿದ್ದಾರೆ.
ಈ ಬಾರಿಯ ಬಿಗ್‌ಬಾಸ್ ಕನ್ನಡ ರೋಚಕವಾಗಿದೆ. ಹನುಮಂತ ಬರುವ ವರೆಗೂ ಲೈಟ್ ಕಾಮಿಡಿ ಇತ್ತು. ಈಗ ಕಾಮಿಡಿ ಹೈಪ್‌ನಲ್ಲಿದೆ. ಲಾಯರ್ ಜಗದೀಶ್ ಅವರು ಬಿಗ್‌ಬಾಸ್ ಮನೆಯಿಂದ ಹೊರ ನಡೆದ ಮೇಲೆ ಬಿಗ್‌ಬಾಸ್ ಡಲ್ ಆಗ್ತಿರುವಂತೆ ಕಾಣ್ತಿತ್ತು. ಆದರೆ, ಯಾವಾಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹನುಮಂತ ಅವರು ಬಂದರೋ ಅಲ್ಲಿಂದಲೇ ಜನ ಕಾಂಬೋ ಮನರಂಜನೆಗೆ ಫಿದಾ ಆಗಿದ್ದಾರೆ.

ಇದೀಗ ಬಗ್‌ಬಾಸ್ ಸೀಸನ್‌ನಲ್ಲಿ ಅವರು ಅವರ ಪ್ರೇಯಸಿಯ ಹೆಸರನ್ನು ರಿವೀಲ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಈಚೆಗೆ ಹನುಮಂತ ಅವರು ಕಿಚ್ಚನ ಚಪ್ಪಾಳೆಗೂ ಪಾತ್ರರಾಗಿದ್ದರು. ಈಗ ಅವರ ಪ್ರೇಯಸಿಯ ಹೆಸರನ್ನು ಪರೋಕ್ಷವಾಗಿ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್‌ನಲ್ಲಿ ಸ್ಪರ್ಧಿಗಳು ಪರಸ್ಪರ ಮಾತನಾಡುವುದು, ಕಾಲೆಳೆಯುವ ಸಂದರ್ಭದಲ್ಲಿ ಕೆಲವು ವಿಷಯಗಳು ರಿವೀಲ್ ಆಗ್ತಿರುತ್ತೆ. ಈಗ ಹನುಮಂತ ಅವರು ಗರ್ಲ್‌ಫ್ರೆಂಡ್ ಬಗ್ಗೆಯೂ ಇದೇ ತರ ಡಿಸ್ಕಷನ್ ಆಗಿದ್ದು, ಅವರು ಹೆಸರು ಹೇಳಿದ್ದಾರೆ. ಬಿಗ್‌ಬಾಸ್‌ನಲ್ಲಿ ಗೌತಮಿ ಮತ್ತು ಹನುಮಂತ ಅವರು ಮಾತನಾಡುವಾಗ ಹನುಮಂತ ಅವರ ಲವ್ ಸ್ಟೋರಿ ಹೇಳಿ ಅಂತ ಕೇಳಿದ್ದಾರೆ.
ಮುಂದುವರಿದು ನಿಮ್ಮ ಹುಡುಗಿ ಹೆಸರು ಹೇಳ್ರಿ ಅಂತ ಕೇಳಿದ್ದಾರೆ. ಅಲ್ಲದೇ ಅವರಿಗಾಗಿ ಒಂದು ಹಾಡು ಹೇಳ್ರಿ ಅಂತ ಪೋರ್ಸ್ ಮಾಡಿದ್ದಾರೆ. ಆಗ ಪ್ರೇಯಸಿಯ ಬಗ್ಗೆ ಹಾಡು ಹೇಳಬೇಕು ಅಂತ ಎಲ್ಲಾ ಒತ್ತಾಯ ಮಾಡ್ದಾಗ ಹನುಮಂತ ಅವರು ಹಾಡೊಂದನ್ನ ಹೇಳಿದ್ದಾರೆ. ಇದರಲ್ಲಿ ಪವಿತ್ರಾ ಎನ್ನುವ ಹೆಸರನ್ನು ಪದೇ ಪದೇ ಹೇಳಿದ್ದಾರೆ. ಹೀಗಾಗಿ, ಪವಿತ್ರಾ ಎನ್ನುವವರೇ (ಎನ್ನುವ ಹೆಸರಿನವರು) ಹನುಮಂತ ಅವರ ಹುಡುಗಿ (ಪ್ರೇಯಸಿ) ಅಂತ ಎಲ್ಲಾ ಅಂದಾಜು ಮಾಡಿದ್ದಾರೆ. ಆದರೆ, ಹನುಮಂತ ಅವರು ನೇರವಾಗಿ ಯಾರ ಹೆಸರನ್ನೂ ಹೇಳಿಲ್ಲ.
ಹನುಮಂತ ಮದ್ವೆ ಯವಾಗ: ಇನ್ನು ಹನುಮಂತ ಅವರ ಮದ್ವೆಯಾವಾಗ ಅನ್ನೋದು ಸಹ ಬಿಗ್‌ಬಾಸ್‌ನಲ್ಲಿ ಚರ್ಚೆಯಾಗಿದೆ. ಅದಕ್ಕೆ ಹನುಮಂತ ಅವರು ನಾಚಿಕೊಂಡೇ ಮಾತಾಡಿದ್ದಾರೆ. ಹನುಮಂತ ಅವರು ನಾನು ಇಲ್ಲಿಂದ ಹೋದ ಮೇಲೆ (ಬಿಗ್‌ಬಾಸ್ ಕನ್ನಡ ಸೀಸನ್ 11) ಮದ್ವೆ ಆಗ್ತಿನಿ ಅಂತ ಹೇಳಿದ್ದಾರೆ.
ಬಿಗ್‌ಬಾಸ್‌ನಲ್ಲಿ ಹನುಮಂತ ಅವರ ಕಾಮಿಡಿ ಟೈಮಿಂಗ್ ಹಾಗೂ ಹಾಸ್ಯ ಪ್ರಜ್ಞೆಗೆ ಜನ ಫಿದಾ ಆಗಿದ್ದಾರೆ. ಹನುಮಂತ ಅವರೊಂದಿಗೆ ಸೇರಿ ಧನ್‌ರಾಜ್ ಅವರು ಸಹ ಪಂಚಿಂಗ್ ಡೈಲಾಗ್‌ಗಳನ್ನು ಹೇಳಿ ಜನರನ್ನು ರಂಜಿಸುತ್ತಿದ್ದಾರೆ.












Click it and Unblock the Notifications