ಬಣ್ಣದ ಲೋಕದ ಮಾರ್ಡನ್ ರೈತನಿಗೆ ಕೃಷಿ ಸಚಿವರ ಸಾಥ್!
ಬಿಗ್ ಬಾಸ್ ಖ್ಯಾತಿಯ ಶಶಿ ಇಂದು ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ 'ಮೆಹಬೂಬ' ಸಿನಿಮಾ ತಂಡ ಆಚರಿಸಿದೆ. ಈ ಕಾರ್ಯಕ್ರಮಕ್ಕೆ ಖುದ್ದು ಕೃಷಿ ಸಚಿವರೇ ಸಾಥ್ ನೀಡಿದ್ದರು. ಹಾಗೆ ಮೆಹಬೂಬ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಪೋಸ್ಟರ್ ಬಿಡುಗಡೆ ಮಾಡಿ ಇಡೀ ಸಿನಿಮಾ ತಂಡಕ್ಕೆ ಶುಭ ಕೋರಿದ್ದಾರೆ.
ಸಚಿವ ಚಲುವನಾರಾಯಣಸ್ವಾಮಿ ಮಾತನಾಡಿ, ಮೆಹಬೂಬಾ ಸಿನಿಮಾಗೆ ಶಶಿ ಪ್ರೊಡ್ಯೂಸರ್ ಕಂ ಹೀರೋ. ಲಾಭ & ನಷ್ಟ ಹಾಗೂ ಹೆಸರು ಅವ್ರದ್ದೆ ರಾಜ್ಯದ ಜನ ಆಶೀರ್ವಾದ ಮಾಡ್ತಾರೆ ಅನ್ನೋ ನಂಬಿಕೆ ಇದೆ. ನಾಯಕಿ ನನ್ನ ಗೆಳೆಯನ ಮಗಳು ಹೀಗಾಗಿ ಇಬ್ಬರಿಗೆ ಸಿನಿಮಾ ಸಕ್ಸಸ್ ತರಲಿ. ಇತ್ತೀಚೆಗೆ ಅನೇಕ ಸಿನಿಮಾ ಸಕ್ಸಸ್ ಆಗಿವೆ. ಜನ ಯಾವ ರೀತಿ ಸಿನಿಮಾ ಇಷ್ಟಪಡುತ್ತಾರೆ ಅಥವಾ ಇಷ್ಟಪಡಲ್ಲ ಅಂತಾ ಊಹೆ ಮಾಡಲು ಆಗಲ್ಲ. ನಿಮ್ಮೆಲ್ಲರ ಸಹಕಾರ ಇಡೀ ತಂಡದ ಮೇಲೆ ಇರಲಿ ಎಂದರು.

ಸಿನಿಮಾ ರಿಲೀಸ್ ಆಗೋದು ಯಾವಾಗ?
ನಟ ಶಶಿ ಮಾತನಾಡಿ, ಮೆಹಬೂಬ ನನಗೆ ಎಮೋಷನಲ್ ಜರ್ನಿ ಒಂದು ವಿಷಯ ಪ್ರೇಕ್ಷಕರಿಗೆ ತಲುಪಬೇಕು ಎನ್ನುವುದು ನಮ್ಮ ಸಿನಿಮಾ ಅಜೆಂಡಾ. 200 ಸಿನಿಮಾ ಬಂದರು ಕೂಡ ಹೆಸರು ಮಾಡೋದು 10 ರಿಂದ 15 ಸಿನಿಮಾಗಳು. ಆ 10ರಿಂದ 15 ಸಿನಿಮಾದಲ್ಲಿ ನಮ್ಮೊಂದು ಒಂದು ಆಗಲಿ ಅನ್ನೋದು ನಮ್ಮ ಕನಸಾಗಿದೆ. ಖುಷಿ ತಂದುಕೊಟ್ಟ ಸಿನಿಮಾ ಮೆಹಬೂಬಾ ಶೂಟಿಂಗ್ ಕಂಪ್ಲೀಟ್ ಆಗಿದೆ. ಆ ಖುಷಿ ವಿಚಾರ ಹಂಚಿಕೊಳ್ಳಲು ನಿಮ್ಮ ಮುಂದೆ ಬಂದಿದ್ದೇವೆ. ಫೆಬ್ರವರಿ ವೇಳೆಗೆ ನಿಮ್ಮ ಮುಂದೆ ಸಿನಿಮಾ ತರುವ ಪ್ರಯತ್ನ ಮಾಡುತ್ತಿದ್ದೇವೆ ಅಂತಾ ತಿಳಿಸಿದರು.
ಚಿತ್ರದಲ್ಲಿ ಒಟ್ಟು ಎಷ್ಟು ಹಾಡು?
ನಿರ್ದೇಶಕ ಅನೂಪ್ ಆಂಟೊನಿ, ಮೆಹಬೂಬ ನನ್ನ 2ನೇ ಸಿನಿಮಾ. ಈಗ ಪೂರ್ತಿ ಶೂಟಿಂಗ್ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಫೆಬ್ರವರಿಗೆ ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದ್ದೇವೆ. ಅದ್ಭುತ ಲವ್ ಸ್ಟೋರಿ ಶಶಿ ಅವರು ಲಾಂಚ್ ಆಗ್ತಿದ್ದಾರೆ. ನಾಯಕಿ ನಟನೆ ಕೂಡ ಅದ್ಭುತವಾಗಿದೆ ಎಂದರು. ಒಟ್ಟು ಚಿತ್ರದಲ್ಲಿ 5 ಹಾಡು ಇವೆ ಎಂದು ತಿಳಿಸಿದರು.

ಈ ಸಿನಿಮಾ ಕಥೆ ಏನು?
ಮಾರ್ಡನ್ ರೈತ ಎಂದು ಖ್ಯಾತಿ ಪಡೆದಿರುವ ಶಶಿ ಮೆಹಬೂಬ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ನಿರ್ಮಾಪಕನಾಗಿ ಕೂಡ ಜವಾಬ್ದಾರಿಯ ಹೊತ್ತುಕೊಂಡಿದ್ದಾರೆ. ಕೇರಳದಲ್ಲಿ ನಡೆದ ನೈಜ ಘಟನೆ ಆಧರಿಸಿ ಚಿತ್ರ ಸಿದ್ಧವಾಗ್ತಿದೆ. ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ.
ಇನ್ನು ರಾಜಧಾನಿ ಬೆಂಗಳೂರಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ ಇರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗು ರಘು ಶಾಸ್ತ್ರಿ ರಚಿಸಿದ್ದಾರೆ. ಸಂಭಾಷಣೆ ಕೂಡ ರಘು ಶಾಸ್ತ್ರಿ ಅವರೇ ಬರೆದಿದ್ದಾರೆ. ಇದರ ಜೊತೆಗೆ, ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಮತ್ತು ಕಲೈ ನೃತ್ಯ ನಿರ್ದೇಶನ ಈ ಸಿನಿಮಾಗೆ ಇದೆ.












Click it and Unblock the Notifications