ಕುಡುಕರ ರಾಜ ಮಂಜಣ್ಣನ ಹುಡುಕಿಕೊಂಡು ಬಿಗ್‌ಬಾಸ್ ಮನೆಗೆ ಓಡೋಡಿ ಬಂದ ಬಾಟಲ್‌ಗಳು! Bigg Boss Kannada

'ಬಿಗ್‌ಬಾಸ್ ಕನ್ನಡ' ಕನ್ನಡಿಗರ ಹೆಮ್ಮೆಯ ಕಾರ್ಯಕ್ರಮ, 'ಬಿಗ್‌ಬಾಸ್ ಕನ್ನಡ' ಹಿಂದಿಯ ಬಿಗ್‌ಬಾಸ್ ಕಾರ್ಯಕ್ರಮದಷ್ಟೇ ಫೇಮಸ್ ಆಗಿದೆ. ಅದ್ರಲ್ಲೂ ಈ ಬಾರಿಯ 'ಬಿಗ್‌ಬಾಸ್ ಕನ್ನಡ' ಇಡೀ ದೇಶದಲ್ಲೇ ಗಮನ ಸೆಳೆಯುತ್ತಿದೆ. ಇದೀಗ 'ಬಿಗ್‌ಬಾಸ್ ಕನ್ನಡ' ಮನೆಯ ರಾಜನಾಗಿ, ಉಗ್ರಂ ಮಂಜು ಮೆರೆಯುತ್ತಿದ್ದಾರೆ. ಇಂತಹ ಸಮಯದಲ್ಲೇ, ಕುಡುಕರ ರಾಜ ಮಂಜಣ್ಣನ ಹುಡುಕಿಕೊಂಡು ಬಿಗ್‌ಬಾಸ್ ಮನೆಗೆ ಓಡೋಡಿ ಬಂದ ಬ್ರಾಂದಿ, ರಮ್ ಬಾಟಲ್‌ಗಳು....

'ಬಿಗ್‌ಬಾಸ್ ಕನ್ನಡ' ಮನೆಯಲ್ಲಿ ಈಗ ಭಾರಿ ದೊಡ್ಡ ಬದಲಾವಣೆ ಮಾಡಲಾಗಿದ್ದು, ಈಗ 'ಬಿಗ್‌ಬಾಸ್ ಕನ್ನಡ' ಸಾಮ್ರಾಜ್ಯಕ್ಕೆ ಉಗ್ರಂ ಮಂಜು ಅವರನ್ನೇ ರಾಜನಾಗಿ ಆಯ್ಕೆ ಮಾಡಿದ್ದು ಗಮನ ಸೆಳೆಯುತ್ತಿದೆ. 'ಬಿಗ್‌ಬಾಸ್ ಕನ್ನಡ' ಈ ಮೂಲಕ ದೇಶಾದ್ಯಂತ ಮತ್ತೆ ಗಮನವನ್ನು ಕೂಡ ಸೆಳೆಯುತ್ತಿದೆ. ಇಂತಹ ಸಮಯದಲ್ಲೇ 'ಬಿಗ್‌ಬಾಸ್ ಕನ್ನಡ' ಸಾಮ್ರಾಜ್ಯದ ದೊರೆಯಾಗಿ ಮೆರೆಯುತ್ತಿರುವ ಉಗ್ರಂ ಮಂಜು ಅವರನ್ನ ಹುಡುಕಿಕೊಂಡು ಎಣ್ಣೆ ಬಾಟಲ್‌ಗಳೇ ಎಂಟ್ರಿನ ಕೊಟ್ಟುಬಿಟ್ಟಿವೆ!

Bigg Boss Kannada Contestant Manju Got A Biggest Surprise In House

ಉಗ್ರಂ ಮಂಜುಗಾಗಿ ಎಣ್ಣೆ ಬಾಟಲ್‌ಗಳ ಹುಡುಕಾಟ!

ಮನುಷ್ಯ ತಾನಾಗಿ ತಾನೇ ಎಣ್ಣೆ ಬಾಟಲ್ ಹುಡುಕಿಕೊಂಡು ಹೋಗಿ, ಬಾರ್ & ಪಬ್‌ಗಳ ಒಳಗೆ ಕೂತು ಕುಡಿಯುವುದು ಮಾಮೂಲಿ. ಆದರೆ 'ಬಿಗ್‌ಬಾಸ್ ಕನ್ನಡ' ಸಾಮ್ರಾಜ್ಯಕ್ಕೆ ಖದ್ದು ಎಣ್ಣೆ ಬಾಟಲ್‌ಗಳೇ ಬಂದಿದ್ದು, ಉಗ್ರಂ ಮಂಜು ಅವರನ್ನ ಭೇಟಿ ಮಾಡಿವೆ.

ಅಲ್ಲದೆ ಇದೇ ವೇಳೆ ಉಗ್ರಂ ಮಂಜು ಆರೋಗ್ಯ ವಿಚಾರಿಸಿ, ನೀನು ಗೆದ್ದು ಬಾ ಅಂತಾ ಕೂಡ ಹಾರೈಸಿವೆ ಎಣ್ಣೆ ಬಾಟಲ್‌ಗಳು. ಅಷ್ಟಕ್ಕೂ ಈ ಸ್ಪೆಷಲ್ ವಿಡಿಯೋ ಅಭಿಮಾನಿಗಳು ಎಡಿಟ್ ಮಾಡಿದ್ದು, ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಕೂಡ ಇದೇ ವಿಡಿಯೋ ಪ್ಲೇ ಮಾಡಲಾಗಿದೆ.

ಮಂಜು ಅವರಿಗೂ ಬಾಟಲ್‌ಗೂ ಸಂಬಂಧ!

ಹೀಗೆ ಉಗ್ರಂ ಮಂಜುಗಾಗಿ ಎಣ್ಣೆ ಬಾಟಲ್‌ಗಳ ಹುಡುಕಾಟದ ವಿಡಿಯೋ ನೋಡಿದ ಜನರು ಕೂಡ ಬಿದ್ದು ಬಿದ್ದು ಮನಸ್ಸು ತುಂಬಿ ನಕ್ಕಿದ್ದಾರೆ. ಅಲ್ಲದೆ ಉಗ್ರಂ ಮಂಜು ಅವರಿಗೆ ಮತ್ತು ಎಣ್ಣೆ ಬಾಟಲ್‌ಗಳಿಗೆ ಅದೆಷ್ಟು ಆಳವಾದ ಸಂಬಂಧ ಇತ್ತು? ಅನ್ನೋದು ಮತ್ತೊಮ್ಮೆ ಈಗ ಇಡೀ ಜಗತ್ತಿಗೆ ಗೊತ್ತಾದಂತೆ ಆಗಿದೆ.

ಉಗ್ರಂ ಮಂಜು ಈಗ ರಾಜ!

ಹೌದು, ಉಗ್ರಂ ಮಂಜುಗಾಗಿ 'ಬಿಗ್‌ಬಾಸ್ ಕನ್ನಡ' ಮನೆಯಲ್ಲಿ ಹೊಸ ಸ್ಥಾನಮಾನ ನೀಡಿದ್ದು ಮನೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. 'ಬಿಗ್‌ಬಾಸ್ ಕನ್ನಡ' ಮನೆಯಲ್ಲಿ ರಾಜನಿಗೆ ಹಾಗೂ ಇತರ ಸ್ಪರ್ಧಿಗಳಿಗೂ ಕಿರಿಕ್ ಬಲು ಜೋರಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸ್ಪರ್ಧೆಯಲ್ಲಿ ಏನಾಗಲಿದೆ? ಎಣ್ಣೆ ಬಾಟಲ್ ಹಾರೈಕೆ ಮಾಡಿದಂತೆ ಉಗ್ರಂ ಮಂಜು ಬಿಗ್‌ಬಾಸ್ ಟೈಟಲ್ ಗೆಲ್ಲುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+