ಗಿಲ್ಲಿಗೆ 99 ವೋಟ್, ಬಿಗ್‌ಬಾಸ್ ಕಪ್ ಗೆಲ್ಲಿಸಲು ಅಭಿಮಾನಿಗಳಿಂದ ರಣತಂತ್ರ ಶುರು! Bigg Boss Gilli

ಕನ್ನಡ ಬಿಗ್ ಬಾಸ್ ಸೀಸನ್ 12 ಫಿನಾಲೆಗೆ ಕ್ಷಣಗಣನೆ ಆರಂಭ ಆಗಿದ್ದು, ಗಿಲ್ಲಿ.. ಗಿಲ್ಲಿ.. ಗಿಲ್ಲಿ.. ಹೀಗೆ ಎಲ್ಲೆಲ್ಲೂ ಗಿಲ್ಲಿ ನಟ ಅಭಿಮಾನಿಗಳು ಜೈಕಾರ ಹಾಕ್ತಿದ್ದಾರೆ. ಗಿಲ್ಲಿ ಕರ್ನಾಟಕದ ಮೂಲೆ ಮೂಲೆಯಲ್ಲೂ ಭಾರಿ ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದು, ಅವರೆಲ್ಲಾ ಇದೀಗ ಗಿಲ್ಲಿಯ ಗೆಲುವಿಗೆ ಪಣತೊಟ್ಟು ನಿಂತಿದ್ದಾರೆ. ಹಗಲು & ರಾತ್ರಿ ಲೆಕ್ಕಿಸದೆ ಗಿಲ್ಲಿ ಅಭಿಮಾನಿಗಳು ಪ್ರಚಾರ ಮಾಡಿ ಕನ್ನಡ ನಾಡಿನ ಜನರಿಂದ ವೋಟ್ ಮಾಡಿಸುತ್ತಿದ್ದಾರೆ. ಈ ಸಮಯದಲ್ಲೆ ಗಿಲ್ಲಿಗೆ 99 ವೋಟ್, ಬಿಗ್‌ಬಾಸ್ ಕಪ್ ಗೆಲ್ಲಿಸಲು ಅಭಿಮಾನಿಗಳಿಂದ ರಣತಂತ್ರ ಶುರು!

ಗಿಲ್ಲಿ ನಟ ಗೆಲ್ಲಬೇಕು ಅಂತಾ ಕ್ಯಾಂಪೇನ್ ಶುರು ಮಾಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ಅಲ್ಲದೆ ಹಳ್ಳಿ, ಗಲ್ಲಿ & ಸಿಟಿ ಎಲ್ಲಾ ಕಡೆಯೂ ಈಗ ಗಿಲ್ಲಿ ಪರವಾಗಿ ಭರ್ಜರಿ ಪ್ರಚಾರ ನಡೆಯುತ್ತಿದೆ. ಈ ಸಮಯದಲ್ಲೇ ಗಿಲ್ಲಿ ಪರವಾಗಿ ಅತಿಹೆಚ್ಚು ಮತಗಳು ಕೂಡ ಬೀಳುತ್ತಿವೆ, ಇನ್ನೇನು ಕೆಲವೇ ನಿಮಿಷದ ಒಳಗೆ ವೋಟಿಂಗ್ ಕೂಡ ಮುಕ್ತಾಯ ಆಗಲಿದೆ. ಹೀಗಿದ್ದಾಗ ಕೊನೆಯ ಹಂತದಲ್ಲಿ ಭಾರಿ ದೊಡ್ಡದಾಗಿ ವೋಟ್ ಮಾಡುತ್ತಿರುವ ಗಿಲ್ಲಿ ಅಭಿಮಾನಿಗಳು 99 ವೋಟ್ ಪೂರ್ತಿ ಗಿಲ್ಲಿಗೆ ಹಾಕುತ್ತಿದ್ದಾರೆ. ಹಾಗಾದರೆ ಏನಿದು 99 ವೋಟ್ ರಣತಂತ್ರ? ಬಿಗ್‌ಬಾಸ್ ಕಪ್ ಗೆಲ್ಲೋದು ಗ್ಯಾರಂಟಿ ಗಿಲ್ಲಿ ನಟ ಅವರೇನಾ? ಮುಂದೆ ಓದಿ.

Bigg Boss Kannada Contestant Gilli Got This Much Of Vote Now

ಏನಿದು 99 ವೋಟ್ ರಣತಂತ್ರ?

ಕನ್ನಡ ಬಿಗ್ ಬಾಸ್ ಸೀಸನ್ 12 ಫಿನಾಲೆ ಶುರುವಾಗುವ ಮೊದಲು ವೋಟಿಂಗ್ ಕೂಡ ಕೊನೆಯಾಗಲಿದೆ. ಜಿಯೋ ಹಾಟ್‌ಸ್ಟಾರ್‌ ಆಪ್‌ ಮೂಲಕ ಒಬ್ಬರಿಗೆ, ಬಿಗ್‌ಬಾಸ್ ಸ್ಪರ್ಧಿಗೆ 99 ವೋಟ್‌ ಮಾಡಲು ಚಾನ್ಸ್ ಇದೆ. ಈ 99 ವೋಟ್‌ ಹಂಚಬಹುದು ಅಥವಾ ಒಬ್ಬ ಬಿಗ್‌ಬಾಸ್ ಸ್ಪರ್ಧಿಗೆ ಕೂಡ ಸಂಪೂರ್ಣವಾಗಿ ವೋಟ್ ಕೊಡಬಹುದು. ಹೀಗಿದ್ದಾಗ ಗಿಲ್ಲಿ ಅಭಿಮಾನಿಗಳು ರಣತಂತ್ರ ಹೂಡಿದ್ದು, ಗಿಲ್ಲಿ ಪರವಾಗಿ 99 ವೋಟ್‌ ಹಾಕಲು ಕ್ಯಾಂಪೇನ್ ಶುರು ಮಾಡಿದ್ದಾರೆ. ಗಿಲ್ಲಿಗೆ 99 ವೋಟ್, ಬಿಗ್‌ಬಾಸ್ ಕಪ್ ನಮ್ದೇ ಅಂತಾ ಸಂಭ್ರಮ ಪಡುತ್ತಿದ್ದಾರೆ. ಬಿಗ್‌ಬಾಸ್ ಫಿನಾಲೆ ಶುರುವಾಗುವ 6 ಗಂಟೆ ಮೊದಲು ವೋಟಿಂಗ್ ಕೊನೆಯಾಗಲಿದೆ. ಇದೇ ಕಾರಣಕ್ಕೆ ಅಂತಿಮ ಹಂತದಲ್ಲಿ ಭರ್ಜರಿಯಾಗಿ ಗಿಲ್ಲಿ ಪರವಾಗಿ 99 ವೋಟ್ ಮಾಡಲಾಗುತ್ತಿದ್ದು, ಎಲ್ಲೆಲ್ಲೂ ಗಿಲ್ಲಿ ಅಬ್ಬರ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+