ಗಿಲ್ಲಿ ನಟ ಬಿಗ್‌ಬಾಸ್ ಗೆಲ್ಲಬೇಕು ಅಂತಾ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಭಿಯಾನ ಶುರು! Gilli Nata
ಬಿಗ್‌ಬಾಸ್ ಕನ್ನಡ ಸೀಸನ್ 12 ಇನ್ನೇನು ಫೈನಲ್ ಹಂತಕ್ಕೆ ಬಂದಿದ್ದು, ಬಿಗ್‌ಬಾಸ್ ಗೆಲ್ಲುವ ಅದೃಷ್ಟ ಯಾರಿಗಿದೆ? ಎಂಬ ಚರ್ಚೆ ಎಲ್ಲೆಲ್ಲೂ ನಡೆಯುತ್ತಿದೆ. ಅದರಲ್ಲೂ ಈ ಬಾರಿಯ ಬಿಗ್‌ಬಾಸ್ ಮನೆಯ ತುಂಬಾ ಬರೀ ಗಿಲ್ಲಿ.. ಗಿಲ್ಲಿ.. ಗಿಲ್ಲಿ... ಎಂಬ ಸೌಂಡ್ ಹೆಚ್ಚಾಗಿದೆ. ಹೀಗಿದ್ದಾಗ ಗಿಲ್ಲಿ ನಟ ಗೆದ್ದು, ಬಿಗ್‌ಬಾಸ್ ಕನ್ನಡ ಸೀಸನ್ 12 ಕಪ್ ಎತ್ತಬೇಕು ಎಂಬುದು ಕೋಟಿ ಕೋಟಿ ಅಭಿಮಾನಿಗಳ ಆಸೆಯೂ ಆಗಿದೆ. ಇಷ್ಟೆಲ್ಲದರ ನಡುವೆ ಗಿಲ್ಲಿ ನಟ ಬಿಗ್‌ಬಾಸ್ ಗೆಲ್ಲಬೇಕು ಅಂತಾ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಅಭಿಯಾನ ಶುರುವಾಗಿದೆ.
ಮಂಡ್ಯ ಮೂಲದ ಗಿಲ್ಲಿ ನಟ ಆರಂಭದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಖ್ಯಾತಿ ಪಡೆದಿದ್ದರು, ಅವರ ಶಾರ್ಟ್ ಫಿಲ್ಮ್ ಕೋಟಿ ಕೋಟಿ ವೀಕ್ಷಣೆ ಪಡೆದು ಗಿಲ್ಲಿ ನಟನ ನಟನೆಗೆ ಕನ್ನಡಿಗರೆಲ್ಲಾ ಫಿದಾ ಆಗಿದ್ದರು. ಗಿಲ್ಲಿ ಪರವಾಗಿ ದೊಡ್ಡ ಮಟ್ಟದಲ್ಲಿ ಹವಾ ಎದ್ದಿದ್ದ ಕಾರಣಕ್ಕೆ ಹಲವು ರಿಯಾಲಿಟಿ ಶೋ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಿತ್ತು. ಹೀಗಿದ್ದಾಗ ಗಿಲ್ಲಿ ನಟ ಹೊಸ ಇತಿಹಾಸ ಬರೆಯಲು ಬಿಗ್‌ಬಾಸ್ ಕನ್ನಡ ಸೀಸನ್ 12 ಮನೆಗೆ ಎಂಟ್ರಿ ಕೊಟ್ಟಿದ್ದೂ ಆಗಿದೆ. ಈಗಾಗಲೇ ಗಿಲ್ಲಿ ನಟ ಗೆಲ್ಲೋದು ಗ್ಯಾರಂಟಿ ಅಂತಾ ಎಲ್ಲರೂ ಅಂತಿದ್ದಾರೆ. ಇದೇ ಸಮಯದಲ್ಲಿ ಗಿಲ್ಲಿ ಪರವಾಗಿ ವೋಟಿಂಗ್ ಅಭಿಯಾನ ಜೋರಾಗಿದೆ.

ಗಿಲ್ಲಿ ನಟ ಕಪ್ ಗೆಲ್ಲೋದು ಗ್ಯಾರಂಟಿ?
ಹೌದು, ಬಿಗ್‌ಬಾಸ್ ಕನ್ನಡ ಸೀಸನ್ 12 ನೋಡಿದ್ರೆ ಗಿಲ್ಲಿ ಪರವಾಗಿ ಈಗಿರುವ ಹವಾದಿಂದ ಬಹುತೇಕ ಗಿಲ್ಲಿ ನಟ ಗೆಲ್ಲುತ್ತಾರೆ ಅನ್ನೋದು ಅಭಿಮಾನಿಗಳ ಮಾತಾಗಿದೆ. ಕನ್ನಡ ನಾಡಿನ ಜನರು ಬೆಂಬಲ ಕೊಟ್ಟು, ಗಿಲ್ಲಿ ನಟ ಗೆದ್ದು ಬೀಗುವಂತೆ ಮಾಡುತ್ತಾರೆ ಎಂದು ಕಾಯುತ್ತಿದ್ದಾರೆ ಕೋಟಿ ಕೋಟಿ ಫ್ಯಾನ್ಸ್. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾ ಮೂಲಕವೂ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಗುತ್ತಾ ಇದ್ದು, ಕೊನೆಯ ಹಂತದಲ್ಲಿ ಭಾರಿ ವೋಟಿಂಗ್ ಮಾಡಿಸಲು ಮುಂದಾಗಿದ್ದಾರೆ ಫ್ಯಾನ್ಸ್. ಈ ಸಂಬಂಧ ಈಗ ವಿಡಿಯೋಗಳು ಕೂಡ ಫುಲ್ ವೈರಲ್ ಆಗುತ್ತಿವೆ.
ಬಡವರ ಮನೆ ಹುಡುಗ ಗಿಲ್ಲಿ
ಗಿಲ್ಲಿ ನಟ ಬಡವರ ಮನೆಯ ಹುಡುಗ ಅನ್ನೋ ವಿಚಾರವು ಕೂಡ ಈ ಬಾರಿ ದೊಡ್ಡ ಸೌಂಡ್ ಮಾಡಿ, ಗಿಲ್ಲಿ ಗೆಲ್ಲಬೇಕು ಎಂಬ ಕೂಗು ಹೆಚ್ಚಾಗುತ್ತಿದೆ. ಅದರಲ್ಲೂ ಗಿಲ್ಲಿ ಪರವಾಗಿ ಬ್ಯಾನರ್ ಹಾಕುವುದು & ಆ ಮೂಲಕ ಬೆಂಬಲ ವ್ಯಕ್ತಪಡಿಸುವ ಘಟನೆಗಳು, ಹಲವು ಹಳ್ಳಿಗಳಲ್ಲಿ ವರದಿಯಾಗಿ ಈ ರೀತಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ಕೂಡ ಗಿಲ್ಲಿಯನ್ನೇ ಟಾರ್ಗೆಟ್ ಮಾಡಿ ಆಡುತ್ತಿದ್ದಾರೆ ಎಂಬುದು ಗಿಲ್ಲಿ ಅಭಿಮಾನಿಗಳ ವಾದ. ಈ ಮೂಲಕ, ಬಿಗ್‌ಬಾಸ್ ಕನ್ನಡ ಸೀಸನ್ 12 ಅಂತಿಮ ಹಂತಕ್ಕೆ ಬರುತ್ತಿರುವ ಸಮಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ.












Click it and Unblock the Notifications