Drone Prathap: ಆಟೋ ಓಡಿಸಿದ ಡ್ರೋನ್ ಪ್ರತಾಪ್: ನಮ್ಮನೆ ದೇವ್ರು ನೀವು ಎಂದ ಅಭಿಮಾನಿ
ಬಿಗ್ ಬಾಸ್ ಕನ್ನಡ ಸೀಜನ್ 10 ಮುಗಿದು ಎರಡು ವಾರ ಕಳೆಯುತ್ತಾ ಬಂದರೂ, ಈ ಬಾರಿ ಸ್ಥರ್ಧಿಗಳ ಹವಾ ಮಾತ್ರ ಕಡಿಮೆಯಾಗುತ್ತಿಲ್ಲ. ಜನರು ಕೂಡ ಬಿಗ್ ಬಾಸ್ ಸ್ಪರ್ಧಿಗಳ ಗುಂಗಿನಿಂದ ಹೊರ ಬಂದಿಲ್ಲ. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸ್ಪರ್ಧಿಗಳಿಗೆ ಅಭಿಮಾನ ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಸಖತ್ ಹೈಪ್ ಕ್ರಿಯೆಟ್ ಮಾಡಿದ್ದು, ಕಳೆದರೆಡು ವಾರದಿಂದ ನಿರಂತವಾಗಿ ಸುದ್ದಿಯಲ್ಲಿದ್ದಾರೆ.
ಈ ಬಾರಿಯ ಬಿಗ್ ಬಾಸ್ ಮನೆಯ ನಿಜವಾದ ಅವಕಾಶವನ್ನು ಬಳಸಿಕೊಂಡವರು ಯಾರು ಎಂದು ಪ್ರಶ್ನಿಸಿದರೆ, ಎಲ್ಲರ ಬಾಯಲ್ಲೂ ಬರುವ ಏಕೈಕ ಉತ್ತರ ಅದು ಡ್ರೋನ್ ಪ್ರತಾಪ್. ಹಲವರ ಅಸಮಾಧಾನದ ನಡುವೆ ಬಿಗ್ ಬಾಸ್ ಮನೆಗೆ ಹೋಗಿದ್ದ ಡ್ರೋನ್ ಪ್ರತಾಪ್, ಮನೆಯಿಂದ ಹೊರ ಬರುವಾಗ ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದರು. ಅದರ ಫಲ ಶ್ರುತಿ ಡ್ರೋನ್ ಪ್ರತಾಪ್ ಬಿಗ್ ಬಾಸ್ ಕನ್ನಡ ಸೀಜನ್ 10 ರ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

ಈ ಬಾರಿಯ ಬಿಗ್ ಬಾಸ್ ಡ್ರೋನ್ ಪ್ರತಾಪ್ ಗೆಲ್ಲಬೇಕು ಎಂದು ಎರಡು ಕೋಟಿಗೂ ಅಧಿಕ ಜನ ವೋಟ್ ಮಾಡಿದ್ದರು. ಪ್ರತಾಪ್ ರನ್ನರ್ ಅಪ್ ಆದರೂ ಕೂಡ ಜನರ ಪ್ರೀತಿ ಮತ್ತಷ್ಟು ಹೆಚ್ಚಾಗಿದ್ದು, ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರಿಸುತ್ತಿದ್ದಾರೆ. ಡ್ರೋನ್ ಪ್ರತಾಪ್ ಮನೆಗೆ ಪ್ರತಿ ನಿತ್ಯ ಅಭಿಮಾನಿಗಳು ಭೇಟಿ ನೀಡುತ್ತಿದ್ದು, ಅವರ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.
ಇದೀಗ ಅಭಿಮಾನಿಯ ಡ್ರೋನ್ ಪ್ರತಾಪ್ ಅಭಿಮಾನಿಯೊಬ್ಬರ ಆಸೆಯಂತೆ ಆಟೋ ಚಾಲಕನಾಗಿದ್ದಾರೆ. ಅಭಿಮಾನಿಯ ಆಟೋ ಓಡಿಸಿದ ಡ್ರೋನ್ ಪ್ರತಾಪ್ ಎಲ್ಲಾ ಆಟೋ ಚಾಲಕರಿಗೂ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸಿದ್ದಾರೆ. ಡ್ರೋನ್ ಪ್ರತಾಪ್ ಆಟೋ ಓಡಿಸಿದ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ನೀವು ಸಕಲ ಕಲಾ ವಲ್ಲಭ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡ್ರೋನ್ ಪ್ರತಾಪ್ ವಿಡಿಯೋಗೆ ಅಭಿಮಾನಿಯೊಬ್ಬರು ನಮ್ಮನೆ ದೇವ್ರು ಬಾಸ್ ನೀವು ಎಂದು ಕಮೆಂಟ್ ಮಾಡಿದ್ದು, ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ, ಜೈ ಪ್ರತಾಪ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಈ ಹಿಂದೆ ಡ್ರೋನ್ ಪ್ರತಾಪ್ ತಮ್ಮ ಊರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ನೆಟ್ಕಲ್ ಗ್ರಾಮದ ಮನೆಯಲ್ಲಿ ತಂದೆ ಜೊತೆ ಸೇರಿ ರಾಗಿ ಮುದ್ದೆ ತಯಾರಿಸಿದ್ದರು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.












Click it and Unblock the Notifications