Bigg Boss Kannada: ಹೇಗಿದೆ ಕನ್ನಡ ಬಿಗ್‌ಬಾಸ್ ಟಿಆರ್‌ಪಿ ?
ಬಿಗ್‌ಬಾಸ್ ಕನ್ನಡ ಸೀಸನ್ 11ರ ಟಿಆರ್‌ಪಿ ಸ್ವಲ್ಪ ಕಡಿಮೆಯಾಗಿದೆ. ಇತ್ತೀಚೆಗೆ ಬಿಗ್‌ಬಾಸ್ ಕನ್ನಡದಲ್ಲಿ ಹಲವು ಬದಲಾವಣೆಗಳು ಆಗಿವೆ. ಈ ಶೋನ ಇಬ್ಬರು ಪ್ರಮುಖ ಸ್ಪರ್ಧಿಗಳು ಶೋನಿಂದ ಹೊರಗೆ ಬಂದಿದ್ದಾರೆ. ಬಿಗ್ ಬಾಸ್ ನಲ್ಲಿ ಲಾಯರ್ ಜಗದೀಶ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು. ಆದರೆ, ರಂಜಿತ್ ಜೊತೆ ಜಗಳ ಮಾಡಿಕೊಂಡು ಹೊರ ಬಂದಿದ್ದಾರೆ. ಆದರೆ, ಟಿಆರ್‌ಪಿ ಏರಿಳಿತಕ್ಕೆ ಇದು ಕಾರಣವಲ್ಲ ಎನ್ನಲಾಗಿದೆ.
ಬಿಗ್‌ಬಾಸ್ ಸೀಸನ್ 11 ಜಾಸ್ತಿ ಫೇಮಸ್ ಆಗಿದ್ದು, ಈ ಬಾರಿ ಲಾಯರ್ ಜಗದೀಶ್ ಅವರಿಂದಲೇ ಎನ್ನುವಂತಿತ್ತು. ಪ್ರಾರಂಭದಲ್ಲಿ ಅವರ ಕಾಮಿಡಿ ಟೈಮಿಂಗ್, ಗಲಾಟೆ ಹಾಗೂ ಫನ್ ಮೂಮೆಂಟ್ಸ್‌ಗೆ ಜನ ಫಿದಾ ಆಗಿದ್ರು. ಆದರೆ, ಯಾವಾಗ ಜಗದೀಶ್ ಮತ್ತು ರಂಜಿತ್ ನಡುವೆ ಜಗಳ ನಡೆದು ಅವರು ಹೊರಗೆ ಬಂದ್ರೋ ಆಗಲೇ ಲಾಯರ್ ಜಗದೀಶ್ ಅವರ ಅಭಿಮಾನಿಗಳು ಬಿಗ್‌ಬಾಸ್‌ಗೆ ಅವರನ್ನ ಮತ್ತೆ ಕರೆಸಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ರು. ಆದರೆ, ಶೋ ಮಸ್ಟ್ ಗೋಆನ್ ಎನ್ನುವಂತೆ ಬಿಗ್‌ಬಾಸ್ ಶೋ ಸರಾಗವಾಗಿಯೇ ಹೋಗ್ತಿದೆ.

ಬಿಗ್‌ಬಾಸ್‌ನ ಟಿಆರ್‌ಪಿ ಕಡಿಮೆ ಆಗಿರೋದಕ್ಕೆ ಲಾಯರ್ ಜಗದೀಶ್ ಅವರ ಅಭಿಮಾನಿಗಳು ಬಿಗ್‌ಬಾಸ್ ನೋಡೋದನ್ನು ಬಿಟ್ಟಿದ್ದೇ ಕಾರಣನಾ ಅಂತ ಈಗ ಪ್ರಶ್ನೆ ಶುರುವಾಗಿದೆ. ಆದರೆ, ನಿಜವಾದ ಕಾರಣ ಅದಲ್ಲ. ಬಿಗ್‌ಬಾಸ್‌ನಲ್ಲಿ ಗಲಾಟೆಯಾಗಿ ಹೊರಗೆ ಹೋಗುವಾಗಲೂ ಲಾಯರ್ ಜಗದೀಶ್ ಅವರು, ಬಿಗ್‌ಬಾಸ್ ನಾನು ಮಾಡಿದ್ದು ತಪ್ಪಾಗಿದೆ. ಸಾಧ್ಯವಾದರೆ ಇನ್ನೊಂದು ಚಾನ್ಸ್ ಕೊಡಿ ಅಂತ ರಿಕ್ವೆಸ್ಟ್ ಮಾಡಿದ್ರು. ಆದರೆ, ನಟ ಹಾಗೂ ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ ಅವರು ಬಿಗ್‌ಬಾಸ್‌ಗೆ ಮತ್ತೆ ಬರಲು ಸಾಧ್ಯವಿಲ್ಲ. ಅದು ಮುಗಿದ ಅಧ್ಯಯ ಅಂತ ಹೇಳಿದ್ರು. ಆಗಲೇ ಲಾಯರ್ ಜಗದೀಶ್ ಅವರ ಅಭಿಮಾನಿಗಳು ನಾವು ನೋಡಲ್ಲ ಬಿಡಿ ಈ ಬಿಗ್‌ಬಾಸ್ ಅಂದಿದ್ರು.
ಎಷ್ಟು ಕಡಿಮೆ ಆಗಿದೆ ಬಿಗ್‌ಬಾಸ್ ಟಿಆರ್‌ಪಿ
ಈ ಬಾರಿಯ ಬಿಗ್‌ಬಾಸ್ ಕನ್ನಡ 11ನೇ ಸೀಸನ್ ಪ್ರಾರಂಭದಲ್ಲೇ ಭರ್ಜರಿ ಪಿಕ್ ಆಗಿ ಟಿಆರ್‌ಪಿ ಗಳಿಸಿತ್ತು. ಫಸ್ಟ್ ಡೇ 9+ ಟಿಆರ್‌ಪಿ ಬರುವ ಮೂಲ ಫಸ್ಟ್ ಪ್ಲೇಸ್‌ನಲ್ಲಿತ್ತು. ಆದರೆ, ಇದೀಗ ಟಿಆರ್‌ಪಿ ಗ್ರಾಫ್ ಕೆಳಗೆ ಇಳಿತಿದೆ. ಇದಕ್ಕೆ ಲಾಯರ್ ಜಗದೀಶ್ ಅವರು ಬಿಗ್‌ಬಾಸ್ ಬಿಟ್ಟಿರೋದೇ ಕಾರಣ ಅಂತಿದ್ದಾರೆ. ಆದರೆ, ಅವರು ಇದ್ದಾಗಲೂ ಬಿಗ್‌ಬಾಸ್ ಟಿಆರ್‌ಪಿಯಲ್ಲಿ ವ್ಯತ್ಯಾಸಗಳು ಆಗಿವೆ. ಶನಿವಾರ 7.3 ಟಿಆರ್‌ಪಿ ಹಾಗೂ ಭಾನುವಾರ 6.9 ಟಿಆರ್‌ಪಿ ಬಂದಿದೆ. ವಾರದ ದಿನಗಳ ಟಿಆರ್‌ಪಿಯೂ ಜಾಸ್ತಿ ಏನೂ ಆಗಿಲ್ಲ ಎನ್ನಲಾಗಿದೆ. ಈ ಬಾರಿ ಬರೀ ಜಗಳನೇ ಜಾಸ್ತಿ ಆಗಿದೆ.
ಬರೀ ಜಗಳ ಯಾರ್ ನೋಡ್ತಾರೆ: ಈ ಬಾರಿ ಬಿಗ್‌ಬಾಸ್ ಸೀಸನ್‌ನಲ್ಲಿ ಬರೀ ಜಗಳನೇ ಜಾಸ್ತಿ ಇದೆ. ಕಾಮಿಡಿ ಇಲ್ಲ, ಫನ್ ಇಲ್ಲ ಈ ರೀತಿ ಬರೀ ಜಗಳನ ಯಾರು ನೋಡ್ತಾರೆ ಗುರು ಅಂತಿದ್ದಾರೆ ಬಿಗ್‌ಬಾಸ್‌ನ ಕೆಲವು ವೀಕ್ಷಕರು. ಸೋಷಿಯಲ್ ಮೀಡಿಯಾದಲ್ಲೂ ಲಾಯರ್ ಜಗದೀಶ್ ಅವರು ಇದ್ದಿದ್ರೆ ಎಂಟರ್‌ಟೆನ್ಮೆಂಟ್ ಇರ್ತಿತ್ತು ಅಂದಿದ್ದಾರೆ.












Click it and Unblock the Notifications