ಶೋ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಗ್‌ಬಾಸ್ ಕೆಂಡಾಮಂಡಲ: ದೊಡ್ಮನೆಯಿಂದ ಇಬ್ಬರು ಔಟ್
ಪ್ರೇಕ್ಷಕರ ಬಹುನಿರೀಕ್ಷೆಯಿಂದ ಆರಂಭವಾದ ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮ ಆರಂಭದಲ್ಲೇ ಮಹತ್ವದ ತಿರುವು ಪಡೆದುಕೊಂಡಿದೆ. ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಸ್ಪರ್ಧಿಗಳ ವರ್ತನೆ ಆರಂಭದಲ್ಲೇ ಊಹೆಗೂ ಮೀರಿ ಮಿತಿ ಮೀರಿದ್ದು, ಶೋ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಗ್ ಬಾಸ್ ಕೆಂಡಾಮಂಡಲರಾಗಿದ್ದಾರೆ. ಬಿಗ್ ಬಾಸ್ ಕೋಪದ ಪರಿಣಾಮ ನೇರವಾಗಿ ಇಬ್ಬರು ಸ್ಪರ್ಧಿಗಳ ಮೇಲೆ ಬಿದ್ದಿರುವ ಮಾಹಿತಿ ಲಭ್ಯವಾಗಿದೆ.
ಕನ್ನಡ ಬಿಗ್ ಬಾಸ್ ಮನೆಯಲ್ಲಿ ಕೈ-ಕೈ ಮಿಲಾಯಿಸಿ ಹೊಡೆದಾಡಿಕೊಂಡ ಆರೋಪದ ಮೇಲೆ ಬಿಗ್‌ಬಾಸ್ ಮನೆಯಿಂದ ಲಾಯರ್ ಜಗದೀಶ್ ಹಾಗೂ ನಟ ರಂಜಿತ್ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಇಬ್ಬರೂ ಸ್ಪರ್ಧಿಗಳು ನೇರವಾಗಿ ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮದಲ್ಲಿ ಲಾಯರ್ ಜಗದೀಶ್ ವರ್ತನೆ ಮಿತಿ ಮೀರಿದೆ ಎನ್ನಲಾಗುತ್ತಿದ್ದು, ಅಶ್ಲೀಲ ಪದಗಳನ್ನು ಬಳಸುವುದು, ಜಗಳವಾಡುವುದು ಮಾಡಿ ಬೇಕಂತಲೇ ಎಲ್ಲರನ್ನೂ ಕೆರಳಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಗಲಾಟೆಗಳೇ ತಾರಕಕ್ಕೇರಿದ್ದು, ಸದ್ಯ ಸಹಿಸಲಾಗದೇ ಇಬ್ಬರು ಸ್ಪರ್ಧಿಗಳನ್ನು ನೇರವಾಗಿ ಮನೆಯಿಂದ ಆಚೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಬಿಗ್ ಬಾಸ್ ಕನ್ನಡ ತಂಡದಿಂದ ನಿರೀಕ್ಷಿಸಲಾಗಿದೆ.
ಇನ್ನು ಬಿಗ್‌ಬಾಸ್ ಕನ್ನಡ ಇತಿಹಾಸದಲ್ಲಿ ಜಗಳ ಆಡಿ ಹೊಡೆದಾಡಿಕೊಂಡು ಸ್ಪರ್ಧಿಗಳು ಹೊರಬಿದ್ದ ಎರಡನೇ ಪ್ರಕರಣ ಇದಾಗಿದ್ದು, ಈ ಹಿಂದೆ ಹುಚ್ಚ ವೆಂಕಟ್ ಸ್ಪರ್ಧಿ ಮೇಲೆ ಕೈ ಮಾಡಿ ಬಿಗ್‌ಬಾಸ್ ಮನೆಯಿಂದ ಔಟ್ ಆಗಿದ್ದರು.












Click it and Unblock the Notifications