Bigg Boss Kannada 13: ಕಣ್ಣೀರಿಟ್ಟ ಮಂಜುಗೆ ಕಿಚ್ಚ ಸುದೀಪ್ ಸಾಂತ್ವನ; 10 ವರ್ಷಗಳ ಕನಸಿನ ಬಗ್ಗೆ ಹೇಳಿದ್ದೇನು?

Bigg Boss Kannada 13: ಬಿಗ್‌ಬಾಸ್ ಕನ್ನಡ ಮನೆಯ ಮೂಲ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬಿಗ್‌ಬಾಸ್ ಮನೆಯಿಂದ ಮಾಡ್ರನ್ ಮಹಾಕವಿ ಮಂಜುನಾಥ್ ಅವರನ್ನು ನೇರವಾಗಿ ಎಲಿಮಿನೇಟ್ ಮಾಡಲಾಗಿದೆ. ಮಾಡಿದ ತಪ್ಪಿಗೆ ಮಂಜುನಾಥ್ ಬಿಕ್ಕಳಿಸಿದ್ದರೆ, ಕಿಚ್ಚ ಸುದೀಪ್ ಅವರು ಮಂಜು ಅವರಿಗೆ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ಅಲ್ಲದೆ ನಾನು ತಪ್ಪು ಮಾಡಿಕೊಂಡು ಬಿಟ್ಟೆ ಅಂತ ಮಂಜುನಾಥ್‌ ಅವರು ಹೇಳಿದ್ದಾರೆ.

ಬಿಗ್‌ಬಾಸ್ ಮನೆಯಿಂದ ಹೊರ ಬಂದಿರುವ ಮಂಜುನಾಥ್ ಅವರು, ಕಣ್ಣೀರು ಹಾಕುತ್ತಲ್ಲೇ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ. ಏನಕ್ಕೆ ಅಳ್ತಾ ಇರೋದು ಅಂತ ಮಂಜು ಅವರಿಗೆ ಕಿಚ್ಚ ಸುದೀಪ್ ಅವರು ಕೇಳಿದ್ದಾರೆ. ತಪ್ಪು ಮಾಡ್ಕೊಂಡು ಬಿಟ್ಟೆ ಅಂತ ಮಂಜು ಹೇಳಿದ್ದಾರೆ, ಇದಕ್ಕೆ ಕಿಚ್ಚ ಸುದೀಪ್ ಅವರು ತಪ್ಪು ಆಗೋಯ್ತು ಬಿಡಿ ಈಗ ಅಂತ ಸಾಂತ್ವನ ಹೇಳಿದ್ದಾರೆ. ತಿದ್ದಿಕೊಳ್ಳಿ, ನಿಮಗೆ ಒಳ್ಳೆಯ ಟ್ಯಾಲೆಂಟ್‌ ಇದೆ. ಹೌದೋ ಇಲ್ವೊ ಅಂತ ಕೇಳಿದ್ದಾರೆ.

Bigg Boss Kannada 13 Kichcha Sudeep Consoles Tearful Manju After Elimination What He Said His 10-Year Dream

ಮಂಜು ಅವರೇ ಬಿಗ್‌ಬಾಸ್‌ಗೆ ಬರುವುದು ಎಷ್ಟು ವರ್ಷಗಳ ಕನಸು ಅಂತ ಸುದೀಪ್ ಅವರು ಕೇಳಿದ್ದಾರೆ. ಬಿಗ್‌ಬಾಸ್‌ಗೆ ಬರುವುದು 10 ವರ್ಷಗಳ ಕನಸು ಅಂತ ಮಂಜು ಅವರು ಹೇಳಿದ್ದಾರೆ. ಸುದೀರ್ಘ ಹತ್ತು ವರ್ಷಗಳ ಕನಸನ್ನು ಈ ರೀತಿ ಹಾಳು ಮಾಡಿಕೊಳ್ಳಬೇಕಿತ್ತಾ ಮಂಜು ಅವರೇ ನೀವೇ ಹೇಳಿ ಅಂತ ಸುದೀಪ್ ಅವರು ಕೇಳಿದ್ದಾರೆ.

ನಾನು ಎಷ್ಟು ತಿದ್ದುವುದಕ್ಕೆ ಪ್ರಯತ್ನಿಸಿದೆ. ಇದಕ್ಕೆ ಮಂಜು ಅವರು ತುಂಬಾ ಅವಕಾಶ ಕೊಟ್ಟಿದ್ದೀರಿ.. ನಾನು ಜೀವನದಲ್ಲಿ ಹೆಚ್ಚು ನಂಬುವುದು, ನಗು - ಕಣ್ಣೀರು. ನೆನ್ನೆ ನಿಮ್ಮ ಕಣ್ಣಿನಲ್ಲೂ ಕಣ್ಣೀರು ನೋಡಿದೆ. ನಾನೂ ಸಹ ಒಂದು ಮೂಲ ಕಾರಣ ಅಂತ ಅನ್ಸಿದ್ರೆ ತುಂಬಾ ಬೇಜಾರಾಯ್ತು ಸರ್ ಅಂತ ಮಂಜು ಅವರು ಹೇಳಿದ್ದಾರೆ.

ನಿಮ್ಮನ್ನೆಲ್ಲ ನೋಡುವುದು ನಮ್ಮ ಕನಸು.... ನನ್ನ ಕನಸು ಕಣ್ಣಲ್ಲಿ ನೀರಾಕಿಸಿಬಿಟ್ಟೆ ಸರ್‌ ನಾನು ಅಂತ ಮಂಜು ಅವರು ಹೇಳಿದ್ದಾರೆ. ಕನಸ್ಯಾಕೆ ಬನ್ರಿ ಇಲ್ಲಿ ಅಂತ ಕಿಚ್ಚ ಸುದೀಪ್ ಅವರು ಮಂಜು ಅವರನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದಾರೆ. ಆರಾಮಗಿರಿ ಅಂತ ಹೇಳಿದ್ದಾರೆ.

Bigg Boss Kannada 13: ಮಂಜು ಔಟ್ ನೆಟ್ಟಿಗರು ಹೇಳಿದ್ದೇನು ?

ಮಂಜು ಬಿಗ್‌ಬಾಸ್ ಮನೆಯಿಂದ ಹೊರ ಬಂದಿರುವುದಕ್ಕೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ತಿಳುವಳಿಕೆ ಮೊದಲೇ ಇರಬೇಕಿತ್ತು, ಮನೆ ಒಳಗೆ ಸುಮಾರು ಜನ ಮುಖವಾಡ ಹಾಕಿ ಬದುಕುತ್ತಿದ್ದಾರೆ. ಒಂದೊಂದೆ ಮುಖವಾಡ ಕಳಚಿ. ಯಶಸ್ ,ಗಗನ್,ಕಾವ್ಯ, ಪ್ರಶಾಂತ್ ಅವರದ್ದು ಪಕ್ಕಾ Safe Game ಅಂತ ನೆಟ್ಟಿಗರು ಹೇಳಿದ್ದಾರೆ. ಮಂಜು ಅವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು ಅಂತಲೂ ಕೆಲವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+