Bigg Boss Kannada 13: ಬಿಗ್‌ಬಾಸ್ ಮನೆ ಒಳಗೆ ರಕ್ಷಿತಾ ಶೆಟ್ಟಿ ಎಂಟ್ರಿ; ಸ್ಪರ್ಧಿಯೋ, ಅತಿಥಿನಾ ನೆಟ್ಟಿಗರು ಏನಂದ್ರು
ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿ ಕೊಟ್ಟಿದ್ದು, ಹೊಸ ಟಾಸ್ಕ್ ಕೊಡಲಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ ಟಾಸ್ಕ್ ಕೊಡಲಾಗಿದೆ. ಸೌಂದರ್ಯ ಶೆಟ್ಟಿ ಅವರ ವರ ಅನ್ವೇಷಣೆ ನಡೆಯುತ್ತಿದೆ. ಸೌಂದರ್ಯ ಶೆಟ್ಟಿ ಡಾನ್‌ಗೆ ವರ ಹುಡುಕುವ ಅನ್ವೇಷಣೆ ಜೋರಾಗಿದ್ದು, ರಕ್ಷಿತಾ ಶೆಟ್ಟಿ ಅವರನ್ನು ಸೌಂದರ್ಯ ಶೆಟ್ಟಿ ಅವರ ತಂಗಿ ಎನ್ನುವಂತೆ ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಪರಿಚಯಿಸಲಾಗಿದೆ. ಆದರೆ, ರಕ್ಷಿತಾ ಅವರು ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಅತಿಥಿಯಾಗಿ ಬಂದಿದ್ದಾರೋ ಅಥವಾ ಸ್ಪರ್ಧಿಯಾಗಿ ಮುಂದವರಿಯಲಿದ್ದಾರೆಯೇ ಎನ್ನುವ ಕುತೂಹಲ ಮೂಡಿದೆ.
ಶೆಟ್ಟಿ ಡಾನ್ ಫ್ಯಾಮಿಲಿಯಲ್ಲಿ ನಿಮಗೆ ಸ್ವಾಗತ ಎಂದು ರಕ್ಷಿತಾ ಶೆಟ್ಟಿ ಅವರನ್ನು ಪರಿಚಯಿಸಲಾಗಿದೆ. ಪ್ರಶಾಂತಿ ಅವರು ಎಂಬಿಎ ಓದುವುದಕ್ಕೆ ಮಲೇಷ್ಯಾಗೆ ಹೋಗಿದ್ದರು. ಆಗ ಅವರಿಗೆ ಒಂದು ಲವ್ ಇತ್ತು. ಆ ಪ್ರೇಮದ ಪರಿಣಾಮವೇ ರಕ್ಷಿತಾ ಶೆಟ್ಟಿಯಾಗಿ ಬೆಳೆದು ನಿಂತು ಇಲ್ಲಿಗೆ ಬಂದಿದ್ದಾರೆ. ಈಗ ಈ ಕುಟುಂಬ ಪರಿಪೂರ್ಣವಾಗಿದೆ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಮಾತಾಡು ಮಗಳೇ ಅಂತ ಪ್ರಶಾಂತಿ (ಪ್ರಶಾಂತ್) ಹೇಳಿದ್ರೆ ರಕ್ಷಿತಾ ಅವರು ತುಂಬಾ ಚೇಂಜ್ ಆಗಿದ್ದೀರಿ ಅಮ್ಮ ಅಂತ ಹೇಳಿದ್ದಾರೆ.

ಗಗನ್ ಚಿನ್ನಪ್ಪ Vs ಯಶಸ್ ಕೃಷ್ಣ
ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಗಗನ್ ಚಿನ್ನಪ್ಪ Vs ಯಶಸ್ ಕೃಷ್ಣ ನಡುವೆ ಟಾಕ್‌ಫೈಟ್ ನಡೆದಿದೆ. ಯಶಸ್‌ಗೆ ಗಗನ್ ಚಿನ್ನಪ್ಪ ಅವರು ಮುಚ್ಕೊಂಡು ಕೂತ್ಕೋ ಅಂತ ಹೇಳಿದ್ದರು, ಇದಕ್ಕೆ ಯಶಸ್ ಈಗ ತಿರುಗೇಟು ಕೊಟ್ಟಿದ್ದಾರೆ. ನೀನು ಮುಚ್ಕೊಂಡು ಕೂತ್ಕೋ ಅಂತ ಹೇಳಿದ ತಕ್ಷಣ ಕೂತುಕೊಳ್ಳುವ ಶಿಷ್ಯಾ ನಾನಲ್ಲ. ನಾನೂ ಇವಾಗ ನಿನ್ನ ಹೋಗೋಲೋ ಬಾರೋಲೋ.. ಅಂತ ಮಾತನಾಡಿಸಬಹುದು. ತಂಡವ್ ಅವರು ಏನ್ ಏನ್ ಹೇಳಿದ್ರು ಅಂತ ಇವಾಗ ಹೇಳ್ತೀನಿ. ಒಂದಲ್ಲ ಎರಡಲ್ಲ.. ನಿಮಗೆ ಶನಿವಾರ ಮಟನ್ ಬಿರಿಯಾನಿ ಕಾದಿದೆ ಅಂದ್ರು.. ಸೆಕೆಂಡ್ ಹೀರೋ ಅಂತ ಹೇಳಿದ್ರಲ್ಲ ನೀವು 25ನೇ ವಯಸ್ಸಿನಲ್ಲಿ ಫಸ್ಟ್ ಹೀರೋ ಆಗಿದ್ರಾ ಅಂತ ಯಶಸ್ ಕೃಷ್ಣ ಅವರು ಪ್ರಶ್ನೆ ಮಾಡಿದ್ದಾರೆ.
ಹ್ಯಾಪಿಯಾದ ಬಿಗ್‌ಬಾಸ್ ವೀಕ್ಷಕರು
ಇನ್ನು ರಕ್ಷಿತಾ ಶೆಟ್ಟಿ ಎಂಟ್ರಿಯಿಂದ ಬಿಗ್‌ಬಾಸ್ ವೀಕ್ಷಕರು ಹ್ಯಾಪಿಯಾಗಿದ್ದಾರೆ. ಶೈನ್ ಶೆಟ್ಟಿ, ರೂಪೇಶ್ ಶೆಟ್ಟಿ ಅವರನ್ನೂ ಕರೆಸಿ ಎಂದು ಕೆಲವರು ಮನವಿ ಮಾಡಿದ್ದಾರೆ. ಗಿಲ್ಲಿ ಮತ್ತು ಕಾವ್ಯ ಇಬ್ಬರನ್ನು ಕರೆಸಿ ಅಂತಲೂ ಕೆಲವರು ರಿಕ್ವೆಸ್ಟ್ ಮಾಡಿದ್ದಾರೆ. ನಮಗೆ ಗೊತ್ತಿತ್ತು ಹೋದ ಸರ್ತಿ ಬಿಗ್ ಬಾಸ್ ನಡೆಯತ್ತಿರುವಗಲೇ ನಾವು ಅನ್ಕೊಂಡಿದ್ವಿ, ರಕ್ಷಿತಾ ಮುಂದಿನ ಸರ್ತಿ ಬಿಗ್ ಬಾಸ್‌ಗೆ ಬಂದೇ ಬರ್ತಾಳೆ ಅಂತ. ಅವಳಿದ್ರೆನೇ ಒಂದು ಖುಷಿ ಈಗ ಬಿಗ್‌ಬಾಸ್ ನೋಡುತ್ತೀವಿ ಅಂತಲೂ ಕೆಲವರು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications
