Bigg Boss Kannada 13: ‘ಆಂಟಿ’ ಎಂದಿದ್ದಕ್ಕೆ ಗರಂ ಆದ ನಟಿ ವಿನಯಾ ಪ್ರಸಾದ್ ಪುತ್ರಿ ಪ್ರಥಮಾ; ಚಾಣಾಕ್ಷದಿಂದ ಡೈಮಂಡ್ ಗೆದ್ದ ಗಗನ್
Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13 (Bigg Boss Kannada Season 13) ಪ್ರಾರಂಭವಾದ ಎರಡೇ ದಿನಗಳಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ, ನಟಿ ಪ್ರಥಮಾ ಅವರು ಹಲವು ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಅದರಲ್ಲಿ ನನ್ನನ್ನು ಆಂಟಿ ಅಂತ ಕರಿಬೇಡಿ ಅಂತ ಹೇಳಿರುವುದು ಸಹ ಒಂದು. ವಿನಯಾ ಪ್ರಸಾದ್ ಅವರ ಪುತ್ರಿ, ನಟಿ ಪ್ರಥಮಾ ಅವರು ಎಲ್ಲರೂ ನನ್ನನ್ನು ನನ್ನ ತಾಯಿ ಅವರ ಸಾಧನೆಯ ಮೂಲಕ ಗುರುತಿಸುತ್ತಾರೆ. ಇದು ನನಗೆ ಬೇಡ ನಾನು ಸಹ ನೃತ್ಯಗಾರ್ತಿ, ಈಜುಗಾರ್ತಿ ಹಾಗೂ ಚಿತ್ರಕಲಾವಿದೆ ಎಂದು ಪ್ರಥಮಾ ಅವರು ಬಿಗ್‌ಬಾಸ್‌ಗೆ ಎಂಟ್ರಿ ಕೊಡುವಾಗ ಹೇಳಿಕೊಂಡಿದ್ದರು.
ಇದೀಗ ಮನೆಯಲ್ಲಿ ಪ್ರಥಮಾ ಅವರು ಮೊದಲ ದಿನದಿಂದಲೇ ಸದ್ದು ಮಾಡುತ್ತಿದ್ದಾರೆ. ಇದರಲ್ಲಿ ಕಿರಿಕ್ ವಿಷಯಗಳೂ ಸಹ ಇವೆ! ಆಂಟಿ ಅಂತ ಕರೆದಿರುವುದಕ್ಕೆ ಪ್ರಥಮಾ ಅವರು ಗರಂ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಗ್‌ಬಾಸ್‌ನಲ್ಲಿ ಪ್ರಥಮಾ ಅವರ ಆಟ ಹೆಂಗಿದೆ, ಇದಕ್ಕೆ ನೆಟ್ಟಿಗರು ಏನಂದ್ರು ಎನ್ನುವ ವಿವರ ಇಲ್ಲಿದೆ.

Bigg Boss Kannada 13: ಆಂಟಿ ಎಂದು ಕರೆದಿದ್ದಕ್ಕೆ ಗರಂ ಆದ ಪ್ರಥಮಾ
ನಟಿ ಪ್ರಥಮಾ ಅವರನ್ನು ಕಿರಣ್ ಶಾಸ್ತ್ರೀ ಅವರು ಬಾಡಿ ಶೇಮಿಂಗ್ ಮಾಡಿದ್ದು, ಪ್ರಥಮಾ ಅವರು ಗರಂ ಆಗಿದ್ದಾರೆ. ಪ್ರಥಮಾ ಪ್ರಸಾದ್‌ಗೆ ಕಿರಣ್ ಅವರು ಬಾಡಿ ಶೇಮಿಂಗ್ ಮಾಡಿದ್ದಾರೆ. ಮುಖ ನೋಡಿ ಭವಿಷ್ಯ ಹೇಳಬೇಕಾದ ಟಾಸ್ಕ್ ಕಿರಣ್ ಶಾಸ್ತ್ರಿ ಅವರಿಗೆ ಬಂದಿತ್ತು. ಈ ಸಂದರ್ಭದಲ್ಲಿ ಪ್ರಥಮಾ ಪ್ರಸಾದ್ ಅವರನ್ನು ಕಿರಣ್ ಶಾಸ್ತ್ರಿ "ಆಂಟಿ' ಇಲ್ಲಿ ಬನ್ನಿ ಅಂತ ಕರೆದಿದ್ದಾರೆ. ಈ ರೀತಿ ಕರೆದಿದ್ದು ಪ್ರಥಮಾಗೆ ಇಷ್ಟವಾಗಲಿಲ್ಲ. 'ನಾನು ಇಲ್ಲಿ ನಿಮಗೆ ಅಮ್ಮ ಆಗುವುದಕ್ಕೋ, ಅಕ್ಕ ಆಗೋದಕ್ಕೆ, ಆಂಟಿ ಆಗೋದಕ್ಕೆ ಬಂದಿಲ್ಲ. ಇಲ್ಲಿ ಎಲ್ಲರೂ ಸಹ ಸ್ಪರ್ಧಿಗಳು. ನನ್ನ ಹೆಸರು ಪ್ರಥಮಾ ಅಂತ. ಆಂಟಿ ಅಂತ ಕರೆಯಬೇಡಿ ಎಂದು ಗರಂ ಆಗಿದ್ದಾರೆ.
ಇದಕ್ಕೆ ಕಿರಣ್ "ನೀವು ಅಮ್ಮನ ಥರ ಕಂಡ್ರಿ' ಎಂದಿದ್ದಾರೆ... "ಸಂತೋಷ.. ಮತ್ತೆ ಅಮ್ಮ ಅಂತಲೇ ಕರೆಯಿರಿ. ಆಂಟಿ ಬೇಡ' ಅಂತ ಹೇಳಿದ್ದಾರೆ ಪ್ರಥಮ ಪ್ರಸಾದ್. ಇದೇ ವೇಳೆ ಇವರಿಗೆ ʼನೋಡೋದಕ್ಕೂ ಆನೆ ಥರ ಇದ್ದೀರ ಬಿಡಿʼ ಅಂದು ಕಿರಣ್ ಹೇಳಿರುವುದು ಪ್ರಥಮಾ ಅವರು ಗರಂ ಆಗುವುದಕ್ಕೆ ಕಾರಣವಾಗಿದೆ. ಬಾಡಿ ಶೇಮಿಂಗ್ ಮಾಡುವವರ ವಿರುದ್ಧ ಪ್ರಥಮ್ ಅವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಥಮಾ ಅವರು ಬಿಗ್‌ಬಾಸ್‌ನಲ್ಲಿ ಹಲವು ಕಾರಣಗಳಿಗೆ ಸುದ್ದಿ ಆಗುತ್ತಿದ್ದಾರೆ. ಬಿಗ್‌ಬಾಸ್ ಮನೆಯ ವಿಮಾನದಲ್ಲಿ ಕಿರಣ್ ಶಾಸ್ತ್ರೀ ಅವರ ಮಾತಿಗೆ ಪ್ರಥಮಾ ಅವರು ಗರಂ ಆಗಿದ್ದಾರೆ. ಮೂರ್ಖರಂತೆ (Stupid) ಮಾತನಾಡಬೇಡಿ. ಅವರಿಗೂ ಮದುವೆಯಾಗಿದೆ ನನಗೂ ಮದುವೆಯಾಗಿದೆ. ನಮ್ಮ ನಮ್ಮ ಪಾರ್ಟನರ್ಸ್ (ಸಂಗಾತಿ) ಹೊರಗಡೆ ನೋಡ್ತಿರ್ತಾರೆ. ಈ ತರ ಕಾಮೆಂಟ್ ಮಾಡಬಾರದು ಅಂತ ಗರಂ ಆಗಿದ್ದಾರೆ. ಆದರೆ, ಕಿರಣ್ ಅವರು ನಾನು ನಿಮಗೆ ಹೇಳಿಲ್ಲ ಮೇಡಂ... ಬಿಗ್‌ಬಾಸ್ ಕ್ಯಾಮೆರಾ ಕಣ್ಣಿ ಎಂಬರ್ಥದಲ್ಲಿ ಹೇಳಿದ್ದೀನಿ ಅಂತ ಸಮರ್ಥಿಸಿಕೊಂಡಿದ್ದಾರೆ.
Bigg Boss Kannada 13: ಚಾಣಾಕ್ಷತನ ಅನ್ನೋ "Diamond' Quality ಗಗನ್ ಬಳಿ ಇದೆ!
ಇನ್ನು ಬಿಗ್‌ಬಾಸ್ ಕೊಟ್ಟ ಡೈಮಂಡ್ ಟಾಸ್ಕ್‌ನಲ್ಲಿ ನಟ ಗಗನ್ ಚಿನ್ನಪ್ಪ ಅವರು ಚಾಣಾಕ್ಷತನದ ಆಟವಾಡಿದ್ದಾರೆ. ಬಿಗ್‌ಬಾಸ್ ಡೈಮಂಡ್ ಟಾಸ್ಕ್‌ವೊಂದನ್ನು ಕೊಟ್ಟಿದ್ದಾರೆ. ಇದರಲ್ಲಿ ಒಂದು ಬಾಕ್ಸ್ ಅನ್ನು ಎಲ್ಲ ಸ್ಪರ್ಧಿಗಳಿಗೂ ಕೊಡಲಾಗಿದೆ. ಒಬ್ಬ ಸದಸ್ಯರ ಬಳಿ (Diamond - ಡೈಮಂಡ್) ವಜ್ರ ಇದೆ ಅಂತ ಬಿಗ್‌ಬಾಸ್ ಹೇಳಿದ್ದಾರೆ. ವಜ್ರ ಇರುವ ಸದಸ್ಯ ಸೀಕ್ರೆಟ್ ಕಾಪಾಡಿಕೊಳ್ಳುವಲ್ಲಿ ಸೋತಲ್ಲಿ ನೇರವಾಗಿ ನಾಮಿನೇಷನ್ ಪಟ್ಟಿ ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಂದರ್ಭದಲ್ಲಿ ಶಕ್ತಿಯಿಂದ ಅಲ್ಲ ಯುಕ್ತಿಯಿಂದ ಆಟವಾಡಬೇಕು ಅಂತ ಗಗನ್ ಚಿನ್ನಪ್ಪ ಅವರು ಹೇಳಿದ್ದಾರೆ. ಯಾರಿಗೆಲ್ಲ ಡೌಟ್ ಇದೆ ನೋಡಿಕೊಳ್ಳಿ ಅಂತಲೂ ಗಗನ್ ಅವರು ಹೇಳಿದ್ದಾರೆ. ಈ ಟಾಸ್ಕ್ ಅನ್ನು ಅತ್ಯಂತ ಚಾಣಾಕ್ಷತನದಿಂದ ಗಗನ್ ಗೆದಿದ್ದಾರೆ.


Click it and Unblock the Notifications
