ಬಿಗ್ಬಾಸ್ ಏನು ನಿಮ್ಮ ಅಪ್ಪನದ್ದಾ ಎಂದಿದ್ಯಾಕೆ: ಸ್ಪರ್ಧಿಗಳಿಗೆ ಅಲ್ಲ, ಕರ್ನಾಟಕದ ಜನತೆಗೆ ಮೊದಲ ‘ಕಿಚ್ಚನ ಚಪ್ಪಾಳೆ’!
Bigg Boss Kannada 13: ಬಿಗ್ಬಾಸ್ ಕನ್ನಡ ಸೀಸನ್ 13ರ ಕಿಚ್ಚನ ಮೊದಲ ಚಪ್ಪಾಳೆ ಸ್ಪರ್ಧಿಗಳಿಗೆ ಅಲ್ಲ, ಕರ್ನಾಟಕದ ಜನರಿಗೆ ಕೊಟ್ಟಿದ್ದಾರೆ. ಇದರೊಂದಿಗೆ ಬಿಗ್ಬಾಸ್ ಕನ್ನಡದಲ್ಲಿ ಹಲವು ಪ್ರಮುಖ ಬೆಳವಣಿಗೆಗಳು ನಡೆದಿವೆ. ಕಾಮನ್ ಮ್ಯಾನ್ಗಳ ವರ್ತನೆಗೆ ಸಂಬಂಧಿಸಿದಂತೆ ಪರ - ವಿರೋಧ ಚರ್ಚೆ ಶುರುವಾಗಿದೆ. ಬಿಗ್ಬಾಸ್ನ ಸ್ಪರ್ಧಿಗೆ ಕ್ಯಾರೆಕ್ಟರ್ ಲೆಸ್ ಅಂತ ಪದ ಬಳಕೆ ಮಾಡಿದ್ದಾರೆ ಎನ್ನುವುದು ತೀವ್ರ ಆಕ್ಷೇಪಕ್ಕೂ ಕಾರಣವಾಗಿದೆ.
ಕಾಮನ್ ಮ್ಯಾನ್ / ಅಗ್ನಿ ಪರೀಕ್ಷೆಯ ಮೂಲಕ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿರುವ ಮಾಡ್ರನ್ ಮಹಾ ಕವಿ ಮಂಜಾ ಅವರು ನಾಮಿನೇಟ್ ಮಾಡುವಾಗ ಬಳಸಿದ ಪದಗಳ ಚರ್ಚೆ ನಡೆದಿದೆ. ಮಂಜಾ ಅವರೇ ನಾಮಿನೇಟ್ ಮಾಡುವಾಗ ಏನ್ ಹೇಳಿದ್ರಿ ಅಂತ ಕಿಚ್ಚ ಸುದೀಪ್ ಅವರು ಕೇಳಿದ್ದಾರೆ. ಅದಕ್ಕೆ ಮಂಜಾ ಅವರು, ರೊಮ್ಯಾನ್ಸ್ ಮಾಡುವುದಕ್ಕೆ ಬಂದಿಲ್ಲ, ಕೈ ಕೈ ಹಿಡಿದುಕೊಂಡು ಓಡಾಡೋಕೆ ಬಂದಿಲ್ಲ. ಈ ತರ ಎಲ್ಲ ಮಾಡಿದ್ರೆ ಕ್ಯಾರೆಕ್ಟರ್ ಲೆಸ್ಅಂತಾರೆ ಅಂತ ಹೇಳ್ದೆ ಎಂದಿದ್ದಾರೆ.

Bigg Boss Kannada 13: ನಿಮ್ಮ ಸಹಾಯ ಬೇಕಾಗಿದೆ ಎಂದ ಸೌಂದರ್ಯ ಶೆಟ್ಟಿ!
ಮಂಜು ಅವರು ನಾಮಿನೇಟ್ ಮಾಡುವಾಗ ಬಳಸಿದ ಪದಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಈ ವಿಷಯ ಪ್ರಸ್ತಾಪಿಸಿದಾಗ ಸೌಂದರ್ಯ ಶೆಟ್ಟಿ ಅವರು ಆ ಸಂದರ್ಭದಲ್ಲಿ ನನಗೆ ಏನು ಮಾಡಬೇಕು ಅಂತ ತಿಳಿಯಲಿಲ್ಲ ಸರ್, ನನಗೆ ನಿಮ್ಮ ಸಹಾಯ ಬೇಕಾಗಿದೆ. ದಯವಿಟ್ಟು ಸಹಾಯ ಮಾಡಿ ಅಂತ ಕಿಚ್ಚ ಸುದೀಪ್ ಅವರ ಬಳಿ ಹೇಳಿಕೊಂಡಿದ್ದಾರೆ. ಮುಂದುವರಿದು ಕಿಚ್ಚ ಸುದೀಪ್ ಅವರು ದೃಷ್ಟಿಕೋನ ಅಂತ ಒಂದಿದೆ. ಕಣ್ಣಿಂದ ಏನಿದೆ ಸರ್ ಬದನೆಕಾಯಿ... ನೋಡುವ ದೃಷ್ಟಿ ಅದು ನೋಡುತ್ತೆ ಬಾಯಿ ಹೇಳುತ್ತೆ... ತಲೆಓಡಿಸೋದು ಏನ್ ಹೇಳಿ ಬುದ್ಧಿ. ನಾಮಿನೇಷನ್ನಲ್ಲಿ ನೀವು ಮಾತನಾಡಿರುವ ಮಾತುಗಳು ಒಬ್ಬ ವ್ಯಕ್ತಿಗೆ ಎಷ್ಟು ಕೊ* ಮಾಡಬಹುದು ಮಂಜು ಅಂತ ಕೇಳಿದ್ದಾರೆ. ಮಾತಿನ ಮೇಲೆ ನಿಗಾ ಇರಲಿ ಅಂತಲೂ ಕಿಚ್ಚ ಸುದೀಪ್ ಅವರು ಎಚ್ಚರಿಕೆ ಕೊಟ್ಟಿದ್ದಾರೆ.
Bigg Boss Kannada 13: ಬಿಗ್ಬಾಸ್ ಯಾರು ನಿಮ್ಮ ಅಪ್ಪನಾ ಎಂದ ಕಿಚ್ಚ ಸುದೀಪ್!
ಇನ್ನು ಬಿಗ್ಬಾಸ್ನ ಕರೆಯುವ ವಿಧಾನಕ್ಕೂ ಕಿಚ್ಚ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕಾಮನ್ ಮ್ಯಾನ್ಗಳಾದ ಮಂಜಾ ಹಾಗೂ ಕಿರಣ್ ಶಾಸ್ತ್ರಿ ಬಿಗ್ಬಾಸ್ನ ಕರೆಯುವುದು ಹಾಗೂ ಆಹಾರದ ವಿಚಾರವಾಗಿ ಮಾತನಾಡಿರುವ ಕಿಚ್ಚ ಸುದೀಪ್ ಅವರು, ಬಿಗ್ಬಾಸ್ನ ಕರೆಯುವಾಗ ನೀವು ಏ ಬಿಗ್ಬಾಸ್ ಅಂತ ಕರೆಯುತ್ತೀರಿ, ನಿಮಗೆ ಶಾಸ್ತ್ರಿಗಳಿಗೆ ಕೇಳಬೇಕು ಯಾರಾದರೂ ಊಟದ ವಿಚಾರಕ್ಕೆ ಬಂದರೆ ಇದೇನು ನಿಮ್ಮ ಅಪ್ಪನ ಮನೆದಾ ಅಂತ ಕೇಳ್ತೀರ... ಬಿಗ್ಬಾಸ್ ಏನು ನಿಮ್ಮ ಅಪ್ಪನಾ ಅಂತ ಕಿಚ್ಚ ಸುದೀಪ್ ಅವರು ಗರಂ ಆಗಿಯೇ ಕೇಳಿದ್ದಾರೆ. ನೆನಪಿದ್ಯಾ ಮಂಜು ಯಾವಾಗ ಅಂತ ಕಿಚ್ಚ ಸುದೀಪ್ ಅವರು ಕೇಳಿದ್ದಾರೆ. ಇದಕ್ಕೆ ಮಂಜು ಅವರು, ಸೌಂದರ್ಯ ಅವರು ಹೊಡೆದಾಗ ಇರಬೇಕು ಅಂದ್ಕೋತಿನಿ ಅಂತ ಮಂಜು ಅವರು ಹೇಳಿದ್ದಾರೆ.
ಮುಂದೆ ನೀವು ಬಿಗ್ ಬಾಸ್ನ ಕರೆದಿದ್ದೇ ಒಂದು ವಿಟಿ ಮಾಡ್ತೀನಿ ಅಂತ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಏ ಬಿಗ್ಬಾಸ್ ಯಾರಂದ್ರೆ ಅವರನ್ನ ಉಸ್ತುವಾರಿ ಮಾಡ್ತೀರ ಅಂತ ಕೇಳಿದ್ದೀರಿ ಅಂದರೆ ಬಿಗ್ಬಾಸ್ ಅವರ ನಿರ್ಧಾರವೇ ಸರಿಯೇ ಅಂತ ಕೇಳಿದ್ದಾರೆ.
ಕಾಮನ್ ಮ್ಯಾನ್ ಮಾತ್ರನಾ ಸೆಲೆಬ್ರಿಟಿಗಳು ತಪ್ಪೇ ಮಾಡಿಲ್ವಾ ?
ಕಿಚ್ಚ ಸುದೀಪ್ ಅವರು ಕಾಮನ್ ಮ್ಯಾನ್ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಇದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಸೆಲೆಬ್ರಿಟಿಗಳು ತಪ್ಪೇ ಮಾಡಿಲ್ವಾ ಅವರ ಬಗ್ಗೆಯೂ ಮಾತನಾಡಬೇಕಿತ್ತು ಎಂದು ಕೆಲವು ನೆಟ್ಟಿಗರು ಡಿಮ್ಯಾಂಡ್ ಮಾಡಿದ್ದಾರೆ. "ಮತ್ತೆ ಎದೆ ಮೇಲೆ ಕಾಲಿಡ್ತೀನಿ ಅಂತ ಹೇಳಿದ್ರಲ್ಲ ಅದನ್ನೂ ಹೇಳಲೇ ಇಲ್ಲ' ಅಂತ ಕೆಲವರು ಕೇಳಿದ್ದಾರೆ. ಕಾಮನ್ ಮ್ಯಾನ್ ಗಳಿಗೆ ಅತಿಯಾಗಿ ಬೈದು ಸೆಲೆಬ್ರಿಟಿಗಳಿಗೆ ಏನು ಅನ್ನದೆ ಇರುವುದು ತುಂಬಾ ಬೇಜಾರಾಗಿದೆ ಅದರಲ್ಲೂ ಗಗನ್ ಮತ್ತು ತಾಂಡವ ಬಗ್ಗೆ ಮಾತಾಡಬೇಕಾಗಿತ್ತು ಅಂತಲೂ ಕೆಲವರು ಹೇಳಿದ್ದಾರೆ.
Bigg Boss Kannada 13: ವಾರದ ಕಿಚ್ಚನ ಚಪ್ಪಾಳೆ ಕರ್ನಾಟಕದ ಜನತೆಗೆ !
ಇನ್ನು ಸಾಮಾನ್ಯವಾಗಿ ವಾರದ ಕಿಚ್ಚನ ಚಪ್ಪಾಳೆಯನ್ನು ಆ ವಾರ ಉತ್ತಮವಾಗಿ ಆಟವಾಡಿದ ಸ್ಪರ್ಧಿಗೆ ಕೊಡುವುದು ಇದೆ. ಆದರೆ, ಈ ಬಾರಿ ವಾರದ ಕಿಚ್ಚನ ಚಪ್ಪಾಳೆಯನ್ನು ಕಿಚ್ಚ ಸುದೀಪ್ ಅವರು ಇದೇ ಮೊದಲ ಬಾರಿ ಕರ್ನಾಟಕದ ಜನರಿಗೆ ಕೊಟ್ಟಿದ್ದಾರೆ.


Click it and Unblock the Notifications
