Bigg Boss Kannada 13: ಗಂಧರ್ವರು Vs ರಾಕ್ಷಸರು ಟಾಸ್ಕ್; ಕಿರಣ್ ಶಾಸ್ತ್ರಿ ಕಣ್ಣಿಗೆ ಕಾರದ ಪುಡಿ ಹಾಕಿದ ಮಂಜು, ಕಿತ್ತಾಟ ವೈರಲ್
Bigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಗಂಧರ್ವರು Vs ರಾಕ್ಷಸರು ಟಾಸ್ಕ್ ನಡೆದಿದ್ದು, ಮಂಜು ಮತ್ತು ಕಿರಣ್ ಶಾಸ್ತ್ರಿ ನಡುವೆ ನಡೆದಿರುವ ಟಾಸ್ಕ್ ವೈರಲ್ ಆಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 13 ನಡೆಯುತ್ತಿದೆ. ಇದರ ಭಾಗವಾಗಿ ಗಂಧರ್ವರು Vs ರಾಕ್ಷಸರು ಟಾಸ್ಕ್ ನಡೆದಿದ್ದು, "ಗಂಧರ್ವರು ಬಂದ್ರು...ರಾಕ್ಷಸರು ಎದುರು ನಿಂತ್ರು!' ಎನ್ನುವ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಕಿರಣ್ ಶಾಸ್ತ್ರಿ ಕಣ್ಣಿಗೆ ಮಂಜು ಕಾರದ ಪುಡಿ ಹಾಕಿದ್ದಾರೆ. ರಾಕ್ಷಸರ ಅಟ್ಟಹಾಸಕ್ಕೆ ಗಂಧರ್ವರು ಒದ್ದಾಡಿದ್ದಾರೆ!
ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿನ ಆಟವೊ ಮತ್ತೊಂದು ಹೊಸ ಹಂತಕ್ಕೆ ತಲುಪಿದೆ. ಬಿಗ್‌ಬಾಸ್‌ನಲ್ಲಿ ಗಂಧರ್ವರು Vs ರಾಕ್ಷಸರು ಎಂದು ಎರಡು ತಂಡಗಳನ್ನು ವಿಭಜಿಸಲಾಗಿದ್ದು, ಈ ತಂಡದ ನಡುವೆ ಪೈಫೋಟಿ ಶುರುವಾಗಿದೆ.

Bigg Boss Kannada 13: ಮನೆಯಲ್ಲಿ ಮುಂದುವರಿದ ರಾಕ್ಷಸರ ಅಟ್ಟಹಾಸ!
ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಕೊಡಲಾಗಿರುವ ಟಾಸ್ಕ್‌ನಲ್ಲಿ ರಾಕ್ಷಸರ ತಂಡದಲ್ಲಿ ಇರುವವರು ಅಟ್ಟಹಾಸ ಮೆರೆದಿದ್ದಾರೆ. ರಾಕ್ಷಸರ ಅಟ್ಟಹಾಸಕ್ಕೆ ಗಂಧರ್ವರು ಕಣ್ಣೀರು ಹಾಕಿದ್ದಾರೆ. ರಾಕ್ಷಸ ತಂಡದಲ್ಲಿರುವ ಮಂಜು ಅವರು, ಗಂಧರ್ವರಿಗೆ ಸಾಷ್ಟಾಂಗ ನಮಸ್ಕಾರ ಹಾಕುವಂತೆ ಮಾಡಿದ್ದಾರೆ.
ಅಲ್ಲದೆ 50 ಬಸ್ಕಿಗಳನ್ನು ಹೊಡೆಯುವಂತೆ, ಮೆಣಸಿನಕಾಯಿ ತಿನ್ನುವಂತಹ ಕಠಿಣಾತಿ ಕಠಿಣವಾಸ ಟಾಸ್ಕ್‌ಗಳನ್ನು ಕೊಟ್ಟಿದ್ದಾರೆ. ಅಲ್ಲದೆ ಗಂಧರ್ವ ತಂಡದಲ್ಲಿರುವ ಕಿರಣ್ ಶಾಸ್ತ್ರಿ ಅವರು, ಊಟದಲ್ಲಿ ಉಪ್ಪು ಜಾಸ್ತಿ ಹಾಕಿದ್ದಾರೆ ಎನ್ನುವ ಕಾರಣಕ್ಕೆ ಮಂಜು ಅವರ ಕಣ್ಣಿಗೆ ಖಾರದ ಪುಡಿ ಸುರಿದಿದ್ದಾರೆ! ಇದರಿಂದ ಕಿರಣ್ ಶಾಸ್ತ್ರಿ ಜೋರಾಗಿ ಕೂಗಾಡಿಕೊಂಡು ಅತ್ತಿರುವುದು ಪ್ರೋಮೋ ವಿಡಿಯೋದಲ್ಲಿದೆ. ಆದರೆ ಮಂಜು ಅವರು ಇದು ಅವನು ಮಾಡುತ್ತಿರುವ ದೊಡ್ಡ ನಾಟಕ ಅಂತ ಕಿರುಚಾಡಿದ್ದಾರೆ. ಮನೆಯಲ್ಲಿ ಗಂಧರ್ವರು ಇರಿಸಿದ್ದ ಬಟ್ಟೆಗಳನ್ನು ರಾಕ್ಷಸರು ಎತ್ತೆಸೆದಿದ್ದಾರೆ. ಮೆಣಸಿನಕಾಯಿಗಳನ್ನು ತಿನ್ನಿಸಲಾಗಿದೆ.
ರಾಕ್ಷಸರ ತಂಡದಲ್ಲಿ ಇರುವವರು
ಮಂಜು, ಜಗದೀಶ್, ಸೌಂದರ್ಯ, ಪ್ರಶಾಂತ್, ಗಗನ್ ಹಾಗೂ ಸಂಗೀತಾ ಇದ್ದಾರೆ.
ಗಂಧರ್ವರ ತಂಡದಲ್ಲಿ
ತಾಂಡವ್, ಗಾನವಿ, ಸೋನಿಕಾ, ಕಿರಣ್ ಶಾಸ್ತ್ರಿ, ಯಶಸ್, ಧನುಷ್ ಹಾಗೂ ಕಾವ್ಯ ಇದ್ದಾರೆ.
Counter ಕೊಟ್ಟು ಗಗನ್‍ನ encounter ಮಾಡಿದ್ರಾ ಧನುಷ್?
ಬಿಗ್‌ಬಾಸ್ ಮನೆಯಲ್ಲಿ ಕೌಂಟರ್ ಕೊಟ್ಟ ಗಗನ್ ಚಿನ್ನಪ್ಪ ಅವರಿಗೆ ಧನುಷ್ ಅವರು ರೀ ಎನ್‌ಕೌಂಟರ್ ಕೊಟ್ಟಿದ್ದಾರೆ. ಧನುಷ್ ಮತ್ತು ಗಗನ್ ನಡುವೆ ವಾಕ್ಸಮರ ನಡೆದಿದೆ. 50% ನನ್ನ ಆತ್ಮೀಯನ ವೋಟ್ ತಗೊಂಡು ಅವನನ್ನ ಹೊರಗೆ ಕಳುಹಿಸಿ ಬಿಟ್ಟು, ನೀನಿಲ್ಲಿ ಬಂದು ಮೊಸಳೆ ಕಣ್ಣೀರು ಹಾಕ್ತೀಯಾ ಅಂತ ಗಗನ್ ಹೇಳಿದ್ದಾರೆ. ಇದಕ್ಕೆ ಧನುಷ್ ಇದು ನಿಮ್ಮ ವೈಯಕ್ತಿಕ ರೀಸನ್ ಅಂತ ಹೇಳಿದ್ದಾರೆ. ಪಾಪದ ಕೊಡ ತುಂಬಿಸ್ತಾ ಇದ್ದೀನಿ ಹೆಂಗ್ ಕಳ್ಸಬೇಕು ಅಂತನೂ ಗೊತ್ತು ನನಗೆ ಅಂತ ಹೇಳಿದ್ದಾರೆ. ನೀನು ಬರೀ ನಾಟಕ ಕಣೋ ಅಂದಿದ್ದಕ್ಕೆ ಧನುಷ್ ಗರಂ ಆಗಿದ್ದಾರೆ. ಯಾವಾಗ ಹಾಕಿದ್ದೀನೋ ರೆಸ್ಪೆಕ್ಟ್ ಕೊಟ್ಟು ಮಾತನಾಡ್ರಿ.. ರೆಸ್ಪೆಕ್ಟ್ ಅಂತ ಹೇಳಿದ್ದಾರೆ.
ಅದಕ್ಕೆ ಗಗನ್ ಲೇ ಅಪ್ಪಿ ಅಂದಿದ್ದಾರೆ. ಅಪ್ಪಿ ಅಲ್ಲ ಅಂತ ಧನುಷ್ ಹೇಳಿದ್ದಾರೆ. ಮುಂದುವರಿದು ಇದರಲ್ಲಿ ಗಂಡಸಿನ ತಾಕತ್ತು... ಧೈರ್ಯದ ವಿಷಯವೂ ಚರ್ಚೆ ಆಗಿದೆ. ಬೆಣ್ಣೆ ರಾಜ ಅಂತ ಧನುಷ್ ಹೇಳಿದ್ದಾರೆ. ಮುಂದುವರಿದು ಲೇ ಬಂಗಾರ.. ಚಿನ್ನ ಅಂತಲೂ ಧನುಷ್ ಹೇಳಿದ್ದಾರೆ.


Click it and Unblock the Notifications
