Bigg Boss Kannada 13: ಸ್ಪರ್ಧಿಗಳಿಗೆ ಎಮರ್ಜನ್ಸಿ ಎಕ್ಸಿಟ್ ಶಾಕ್; ಇಂದು ಈ ನಾಲ್ವರಲ್ಲಿ ಯಾರ ಪಾಲಿಗೆ ಕೊನೆಯ ದಿನ?
Bigg Boss Kannada 13: ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಯಾರೂ ನಿರೀಕ್ಷೆಯೇ ಮಾಡದೆ ಇರುವ "EMERGENCY EXIT!' ಆಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 13 ಉಳಿದ 12 ಸೀಸನ್‌ಗಳಿಗೆ ಹೋಲಿಕೆ ಮಾಡಿದರೆ ತುಂಬಾ ಭಿನ್ನವಾಗಿದೆ. ಎಲಿಮಿನೇಷನ್ - ಎಲಿಮಿನೇಟ್ ಪ್ರಕ್ರಿಯೆಯು ಯಾರೂ ನಿರೀಕ್ಷೆ ಸಹ ಮಾಡದೆ ಇರುವ ರೀತಿಯಲ್ಲಿ ಆಗುತ್ತಿದೆ. ಬಿಗ್‌ಬಾಸ್ ಕನ್ನಡ ಸೀಸನ್ 13ನಲ್ಲಿ ದಿಢೀರ್ ಎಲಿಮಿನೇಷನ್ ರೌಂಡ್ ಸ್ಟಾರ್ಟ್ ಆಗಿದೆ. ನಿಮ್ಮಲ್ಲಿ ಯಾರದ್ದೂ ಬೇಕಾದರೂ ಇಂದೇ ಕೊನೆಯ ದಿನವಾಗಬಹುದು. ಇಂದು ನಿಮ್ಮಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದೀರಿ ನೀವು ಮನಸ್ಸು ಬಿಚ್ಚಿ ವ್ಯಕ್ತಪಡಿಸಲು ಇದು ಕಟ್ಟ ಕಡೆಯ ಅವಕಾಶವಾಗಿರಲಿದೆ ಎಂದು ಬಿಗ್‌ಬಾಸ್ ಹೇಳಿದ್ದಾರೆ.
ಬಿಗ್‌ಬಾಸ್ ನೀಡಿರುವ ಟಾಸ್ಕ್ ಹಲವು ಬಿಗ್‌ಬಾಸ್ ಸ್ಪರ್ಧಿಗಳಲ್ಲಿ ಕಣ್ಣೀರು ತರಿಸಿದೆ. ನಾನು ಇಲ್ಲಿಯ ಬರುವುದಕ್ಕೆ, ನಾನು ಈ ಸ್ಥಾನಕ್ಕೆ ತಲುಪಿರುವುದಕ್ಕೆ ನೀವೇ ಕಾರಣ ಅಂತ ಲಿಖಿತ್ ಹೇಳಿದ್ದಾರೆ. ನಟ ತಾಂಡವ್ ರಾಮ್ ಅವರು ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ, ಮಾತು ಗಂಟಲಿನಲ್ಲೇ ಸಿಕ್ಕಿ ಹಾಕಿಕೊಂಡ ಅನುಭವವಾಗ್ತಿದೆ ಅಂತ ಹೇಳಿದ್ದಾರೆ. ತುಂಬಾ ನೋವು ಆಗ್ತಿದೆ ಬಿಗ್‌ಬಾಸ್ ಅಂತಲೂ ಹೇಳಿದ್ದಾರೆ. ತಾಂಡವ್ ರಾಮ್ ಅವರು ಧನುಷ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವಂತೆಯೂ ಇದೆ. ಇದನ್ನು ನೋಡಿ ಗಗನ್ ಚಿನ್ನಪ್ಪ ಅವರು ಸಹ ಕಣ್ಣೀರು ಹಾಕಿದ್ದಾರೆ.

"ಜಗ್ಗಿ ಮಮ್ಮಿ' ಜಗದೀಶ್ ಎಂ.ಬಿ. ಅವರು ಈ ಟಾಸ್ಕ್ ಮಾಡುವಾಗ ಕಣ್ಣೀರು ಹಾಕಿದ್ದಾರೆ. ನನಗೆ ಎನ್ನುವವರು ಯಾರೂ ಇಲ್ಲ ಆದರೂ ನಾನು ಇಲ್ಲಿ ಆಟವಾಡುತ್ತಿದ್ದೆ. ಇವೊತ್ತು ಕೊನೆಯ ದಿನ ಅಂತ ಕಣ್ಣೀರು ಸುರಿಸಿದ್ದಾರೆ. ಆಯ್ದ ಬಿಗ್‌ಬಾಸ್ ಸ್ಪರ್ಧಿಗಳಿಗೆ ಲಕೋಟೆ / ಕಾರ್ಡ್ ಕೊಡಲಾಗಿದೆ.
ಇದು ನಿಮ್ಮ ಪೈಕಿಯೊಬ್ಬರಿಗೆ ಮನೆಯಲ್ಲಿನ ಕೊನೆಯ ಕ್ಷಣವಾಗಲಿದೆ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಈ ವಾರ "EMERGENCY EXIT!' ಇರಲಿದೆ. ಈ ವಾರ ಯಾರೂ ಬೇಕಾದರೂ ಯಾವಾಗ ಬೇಕಾದರೂ ಮನೆಯಿಂದ ಹೊರಗೆ ಹೋಗಬಹುದು ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದರು. ಅದರಂತೆಯೇ ಇಂದಿನ ಎಪಿಸೋಡ್‌ನಲ್ಲಿ "EMERGENCY EXIT!' ಶುರುವಾಗಿದೆ.
Bigg Boss Kannada 13: "EMERGENCY EXIT!' ಲಿಸ್ಟ್‌ನಲ್ಲಿ ಇರುವವರು ಯಾರು ?
ಇನ್ನು ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ "EMERGENCY EXIT!' ನಲ್ಲಿ ಜಗದೀಶ್. ಸೌಂದರ್ಯ ಶೆಟ್ಟಿ, ಲಿಖಿತ್ ಗೊಂದಿ ಹಾಗೂ ತಾಂಡವ್ ರಾಮ್ ಅವರು ಇರುವಂತೆ ಇದೆ. ಇದರೊಂದಿಗೆ ಧನುಷ್ ಅವರು ಸಹ ಕಣ್ಣೀರು ಹಾಕಿದ್ದಾರೆ. ಹೀಗಾಗಿ, ಬಿಗ್‌ಬಾಸ್ ಮನೆಯಿಂದ ಯಾರು ಹೊರ ಬರಲಿದ್ದಾರೆ ಎನ್ನುವುದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ. ಈಚೆಗೆ ಮಳೆಯಲ್ಲಿ ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ಸಖತ್ ಎಂಜಾಯ್ ಮಾಡಿದ್ದರು.
ಇದರ ಬೆನ್ನಲ್ಲೇ ಸ್ಪರ್ಧಿಗಳಿಗೆ ಎಮರ್ಜನ್ಸಿ ಎಕ್ಸಿಟ್ ಶಾಕ್ ಎದುರಾಗಿದೆ. ಈ ವಾರದ ಎಮರ್ಜನ್ಸಿ ಎಕ್ಸಿಟ್‌ನ ಬಗ್ಗೆ ಮೊದಲೇ ತಿಳಿಸಲಾಗಿತ್ತು. ಆದರೆ ಏಕಾಏಕಿ ಎದುರಾದ ಶಾಕ್‌ಗೆ ಹಲವರು ಕಣ್ಣೀರು ಹಾಕಿದ್ದಾರೆ. ಗಗನ್ ಚಿನ್ನಪ್ಪ, ಆಸಿಯಾ ಫಿರ್ದೋಸ್ ಸೇರಿದಂತೆ ಹಲವರು ಅಳುತ್ತಿರುವುದು ಇದೆ.


Click it and Unblock the Notifications
