Bigg Boss Kannada 13: ಘಾಟಿ ಗಾನವಿ ಸೇರಿ 3 ರಿಂದ 5 ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ? ತಾಂಡವ್ ಜರ್ನಿ ಇನ್ನೂ ಬಾಕಿ!
Bigg Boss Kannada 13: ಬಿಗ್ ಬಾಸ್ ಕನ್ನಡ 13 (Bigg Boss Kannada 13) ಮತ್ತೊಂದು ಮಹತ್ವದ ಟ್ವಿಸ್ಟ್ ಕೊಡಲಾಗಿದೆ. ವೈಲ್ಡ್ ಕಾರ್ಡ್ ಮೂಲಕ ಮೂವರು ಸ್ಪರ್ಧಿಗಳು ಬಿಗ್‌ಬಾಸ್‌ಗೆ ಎಂಟ್ರಿ ಕೊಡಲಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಈ ಬಾರಿ ಹಲವು ಟ್ವಿಸ್ಟ್ ಕೊಡಲಾಗಿದೆ. ತಾಂಡವ್ ರಾವ್ ಅವರನ್ನು ಎಲಿಮಿನೇಟ್ (Eliminate) ಮಾಡಿರುವಂತೆ ತೋರಿಸಲಾಗಿತ್ತು. ಇದೀಗ ಬಿಗ್‌ಬಾಸ್‌ಗೆ 3 ಜನ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ ಎಂದು ಕಿಚ್ಚ ಸದೀಪ್ ಅವರು ಹೇಳಿದ್ದಾರೆ. ಮೊದಲು ಮೂರು ಜನ ಅಂತ ಹೇಳಲಾಗಿತ್ತಾದರೂ ಇದೀಗ 5 ಜನ ಹೋಗುವ ಸಾಧ್ಯತೆ ಇದೆ ಎನ್ನುವ ಚರ್ಚೆ ನಡೆದಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ಮೂರು ಜನ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎಂದು ಹೊಸ ಪ್ರೋಮೋದಲ್ಲಿ ತೋರಿಸಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಸಿ ಕೆಲವೇ ವಾರದಲ್ಲಿ ಹೊರ ಬಂದಿದ್ದ ನಟ ಆದಿ ಲೋಕೇಶ್, ಸೀಸನ್ 5ರಲ್ಲಿ ದೊಡ್ಮನೆ ಪ್ರವೇಶಿಸಿ ಗಮನ ಸೆಳೆದಿದ್ದ ನಟಿ ತೇಜಸ್ವಿನಿ ಪ್ರಕಾಶ್ ಅವರು ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿದೆ. ಸೀಸನ್ 7ರ ಸ್ಪರ್ಧಿಸಿದ್ದ ಮತ್ತು ಡ್ಯಾನ್ಸರ್ ಕಿಶನ್ ಬಿಳಗಲಿ ಅವರ ಹೆಸರು ಕೂಡ ವೈಲ್ಡ್ ಕಾರ್ಡ್ ಪಟ್ಟಿಯಲ್ಲಿ ಇದೆ ಎನ್ನಲಾಗಿದೆ. ಕಿಶನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈಚೆಗೆ ಹಾಕಿಕೊಂಡಿದ್ದ ಪೋಸ್ಟ್‌ಗಳು ವೈರಲ್ ಆಗಿದ್ದವು. ಇದು ಸಹ ಅವರು ಮತ್ತೆ ಬಿಗ್‌ಬಾಸ್‌ಗೆ ಬರಲಿದ್ದಾರೆ ಎನ್ನುವ ಕುತೂಹಲವನ್ನು ಹೆಚ್ಚಿಸಿದೆ.

ಅಲ್ಲದೆ ಗಿಚ್ಚಿ ಗಿಲಿಗಿಲಿ - ಕ್ವಾಟ್ಲೆ ಕಿಚನ್ ಸೇರಿದಂತೆ ವಿವಿಧ ಹಾಸ್ಯ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾಗಿರುವ ಕಾಮಿಡಿ ಕಲಾವಿದರಾದ ಪ್ರಶಾಂತ್ ಗೌಡ, ಹಿರಿಯ ನಟಿ ವಿಜಯಲಕ್ಷ್ಮಿ ಅವರ ಬರಲಿದ್ದಾರೆಯೇ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ.
Bigg Boss Kannada 13: ಘಾಟಿ ಗಾನವಿ ಮಾಸ್ ಎಂಟ್ರಿ!
ಇನ್ನು ವೈಲ್ಡ್ ಕಾರ್ಡ್ ಮೂಲಕ ಘಾಟಿ ಗಾನವಿ (ಗಾನವಿ ಗೌಡ) ಅವರು ಎಂಟ್ರಿ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ. ಹೊಸ ಪ್ರೋಮೋದಲ್ಲಿ ಮಾತನಾಡಿರುವುದು ಘಾಟಿ ಗಾನವಿ ಅವರೇ ಅಂತ ಅಭಿಮಾನಿಗಳು ಹೇಳಿದ್ದಾರೆ. ಘಾಟಿ ಗಾನವಿ ಅವರು ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಸ್ಪರ್ಧಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದಾರೆ. ಇವರು ರಿಯಾಲಿಟಿ ಶೋಗಳ ಮೂಲಕ ಮನೆ ಮಾತಾಗಿದ್ದಾರೆ.
ಜೀ ಕನ್ನಡ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ ಆದ ಹಳ್ಳಿ ಪವರ್ (ಸೀಸನ್ 1) ನಲ್ಲಿ ಭಾಗವಹಿಸಿ, ತಮ್ಮ ನೇರ ಹಾಗೂ ಖಡಕ್ ಸ್ವಭಾವದಿಂದಾಗಿ 'ಘಾಟಿ ಗಾನವಿ' ಅಂತಲೇ ಇವರು ಜನಪ್ರಿಯರಾಗಿದ್ದಾರೆ. ಇನ್ನು ಈ ಶೋನಲ್ಲಿ ಇವರು ಫಸ್ಟ್ ರನ್ನರ್ ಅಪ್ ಸಹ ಆಗಿದ್ದರು. ಗಾನವಿ v/s ಮಂಜ ಎನ್ನುವಂತೆ ಇನ್ಮುಂದೆ ಕನ್ನಡ ಬಿಗ್‌ಬಾಸ್ ಇರಲಿದೆ. ಮಜವಾಗಿ ಇರಲಿದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಗಾನವಿ v/s ಮಂಜ ಇವ್ರ ಜಗಳ ನೋಡೋಕೆ ಇನ್ಮೇಲೆ Big Boss ನೋಡ್ಬೇಕಾ.. Entertainment ಇರಲ್ಲ ಬರಿ ಕಿರುಚಾಟ ಅಂತಲೂ ಕೆಲವರು ಕಾಮೆಂಟ್ ಮಾಡಿದ್ದಾರೆ.
Bigg Boss Kannada 13: ತಾಂಡವ್ ರಾವ್ ಜರ್ನಿ ಇನ್ನೂ ಮುಗಿದಿಲ್ಲ!
ಇನ್ನು ಇತ್ತೀಚೆಗೆ ತಾಂಡವ್ ಮಧ್ಯರಾತ್ರಿ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನುವಂತೆ ತೋರಿಸಲಾಗಿತ್ತು. ತಾಂಡವ್ ಅವರನ್ನು ಈ ರೀತಿ ಏಕಾಏಕಿ ಮನೆಯಿಂದ ಹೊರಗೆ ಕಳುಹಿಸಬಾರದಿತ್ತು. ಅವರು ಉತ್ತಮ ಸ್ಪರ್ಧಿ ಎಂದು ಅಭಿಮಾನಿಗಳು ಹೇಳಿದ್ದರು. ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ದೊಡ್ಡ ಬದಲಾವಣೆಯಾಗಿದೆ.
ವಾರಾಂತ್ಯದಲ್ಲಿ ಇನ್ನಿಬ್ಬರು ಸ್ಪರ್ಧಿಗಳು ಎಲಿಮಿನೇಷನ್ ಎದುರಿಸಲಿದ್ದಾರೆ ಎಂಬ ಚರ್ಚೆಯ ನಡುವೆ, ಬರೋಬ್ಬರಿ ಐವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ ಅಂತಲೂ ಹೇಳಲಾಗುತ್ತಿದೆ. ತಾಂಡವ್ ರಾವ್ ಅವರ ಜರ್ನಿ ಇನ್ನೂ ಮುಗಿದಿಲ್ಲ ಎನ್ನುವುದು ಕನ್ಫರ್ಮ್ ಆಗಿದೆ. ಇಂದಿನ ಬಿಗ್‌ಬಾಸ್ ಕನ್ನಡ ಸೀಸನ್ 13ರ ಶೋನಲ್ಲಿ ಎಲ್ಲ ಕುತೂಹಲಗಳಿಗೆ ಬ್ರೇಕ್ ಬೀಳಲಿದೆ.


Click it and Unblock the Notifications
