BBK-12: ಬಿಗ್‌ ಬಾಸ್‌ ಮೊದಲ ದಿನವೇ ಬಿಗ್‌ ಶಾಕ್‌, ಇಂದೇ ಎಲಿಮಿನೇಟ್ ಆಗ್ತಾರೆ ಆ ಸ್ಪರ್ಧಿ

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಅದ್ಧೂರಿಯಾಗಿ ಶುರುವಾಗಿದೆ. ಈ ಬಾರಿ 19 ಸ್ಪರ್ಧಿಗಳು ಬಿಗ್‌ಬಾಸ್‌ ಮನೆಯೊಳಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ. ಅಬ್ಬಾ ಮನೆ ಒಳಗೆ ಬಂದಾಯ್ತಲ್ಲ? ಎಂದು ಸ್ಪರ್ಧಿಗಳು ನಿಟ್ಟುಸಿರು ಬಿಡುವಷ್ಟರಲ್ಲಿ ಬಿಗ್‌ ಶಾಕ್‌ ಎದುರಾಗಿದೆ. ಪ್ರತಿ ಸೀಸನ್‌ನಲ್ಲಿ ಒಂದು ವಾರದ ನಂತರ ಎಲಿಮಿನೇಷನ್‌ ನಡೆಯುತ್ತಿತ್ತು. ಆದರೆ ಈ ಬಾರಿ ಕಾರ್ಯಕ್ರಮದ ಮೊದಲ ದಿನವೇ ಎಲಿಮಿನೇಷನ್‌ ಶಾಕ್‌ ಕೊಟ್ಟಿದೆ.

ಹೌದು ಪ್ರತಿ ವಾರ ಕಳಪೆ ಪ್ರದರ್ಶನ ತೋರುವವರನ್ನು ಎಲ್ಲರೂ ಸೇರಿ ಎಲಿಮಿನೇಟ್‌ ಮಾಡುತ್ತಿದ್ದರು. ಈ ಬಾರಿ ಮನೆಯೊಳಗೆ ಕಾಲಿಟ್ಟ ತಕ್ಷಣವೇ ಎಲಿಮಿನೇಷನ್‌ ಭೂತ ಬೆನ್ನುಬಿದ್ದಿದೆ. ಸ್ಪರ್ಧಿಗಳ ನಡುವೆ ಇನ್ನೂ ಹೆಚ್ಚಿನ ಪರಿಚಯ, ಹೊಂದಾಣಿಕೆ ಇಲ್ಲದೆ ಈಗಷ್ಟೇ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಆಗಲೇ ಮನೆಯಿಂದ ಒಬ್ಬ ಸ್ಪರ್ಧಿ ಔಟ್‌ ಆಗುವುದು ಪಕ್ಕಾ ಎಂದು ಬಿಗ್‌ ಬಾಸ್ ಘೋಷಿಸಿದ್ದಾರೆ. ಹಾಯ್ ಹೇಳೋಕೂ ಮುನ್ನವೇ ಟಾಟಾ-ಬಾಯ್ ಹೇಳೋದು ಯಾರು? ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿ ಕೂತಿದೆ.

Bigg Boss Kannada 12 Shocker First Day Elimination Twist Revealed

ಮನೆಗೆ ಬಂದ ಮೊದಲ ದಿನವೇ ಭರ್ಜರಿ ಟ್ವಿಸ್ಟ್‌, ನಾನು ಬಂದಿರೋ ಉದ್ದೇಶ ಸ್ವಾಗತ ಮಾಡೋಕಲ್ಲ, ನಿಮ್ಮಲ್ಲಿ ಒಬ್ಬರಿಗೆ ವಿದಾಯ ಹೇಳೋದಕ್ಕೆ ಎಂದು ಬಿಗ್‌ಬಾಸ್‌ ಶಾಕ್‌ ಕೊಟ್ಟಿದ್ದಾರೆ. ಪರಸ್ಪರ ಚರ್ಚಿಸಿ ಒಬ್ಬರಿಗೆ ಮುಖ್ಯದ್ವಾರ ತೋರಿಸಿ ಎಂದು ಪ್ರೋಮೋದಲ್ಲಿ ಬಿಗ್‌ಬಾಸ್‌ ಹೇಳಿದ್ದಾರೆ. ಈ ವಿಚಾರವಾಗಿ ಮೊದಲ ದಿನವೇ ಸ್ಪರ್ಧಿಗಳ ನಡುವೆ ಚರ್ಚೆ ನಡೆದಿದೆ. ಯಾರನ್ನು ಮನೆಯಿಂದ ಹೊರಗೆ ಕಳಿಸೋದು ಎಂದು ಹಲವರ ಹೆಸರನ್ನು ಸ್ಪರ್ಧಿಗಳೇ ಹೇಳುತ್ತಿದ್ದಾರೆ. ಈ ಪೈಕಿ ಆ ಮೂವರ ಹೆಸರು ಮುನ್ನೆಲೆಗೆ ಬಂದಿದೆ.

ಎಲಿಮಿನೇಟ್‌ ಆಗೋದು ಯಾರು?

ಮಾಳು, ಸ್ಪಂದನಾ ಹಾಗು ರಕ್ಷಿತಾ ಶೆಟ್ಟಿ ಅವರ ಹೆಸರನ್ನು ಉಳಿದ ಸ್ಪರ್ಧಿಗಳು ನಾಮಿನೇಟ್‌ ಮಾಡಿದ್ದಾರೆ. ಈ ಮೂವರಲ್ಲಿ ಒಬ್ಬರು ಇಂದೇ ಬಿಗ್‌ಬಾಸ್‌ ಮನೆಯಿಂದ ಹೊರಬರಲಿದ್ದಾರೆ. ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ಎಲಿಮಿನೇಟ್‌ ಆಗುವ ಸ್ಪರ್ಧಿ ಯಾರೆಂದು ತಿಳಿಯಲಿದೆ.

ಕರಿಮಣಿ ಧಾರಾವಾಹಿ ಖ್ಯಾತಿಯ ಸ್ಪಂದನಾ ಸೋಮಣ್ಣ, ನಾ ಡ್ರೈವರಾ, ನೀ ನನ್ನ ಲವ್ವರಾ ಹಾಡಿನ ಖ್ಯಾತಿಯ ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ, ಕರಾವಳಿ ಮೂಲದ ಸೋಷಿಯಲ್‌ ಮೀಡಿಯಾ ಸ್ಟಾರ್‌ ರಕ್ಷಿತಾ ಶೆಟ್ಟಿ ಈ ಮೂವರನ್ನು ಉಳಿದ ಸ್ಪರ್ಧಿಗಳು ಆಯ್ಕೆ ಮಾಡಿದ್ದು, ಮನೆಯಿಂದ ಹೊರಹೋಗುವುದು ಯಾರು? ಉಳಿದುಕೊಳ್ಳುವುದು ಯಾರು? ಎಂಬ ಕುತೂಹಲ ಹೆಚ್ಚಾಗಿದೆ.

ನಿನ್ನೆಯಷ್ಟೇ ಹಾಯ್‌ ಎಂದಿರುವ ಸ್ಪರ್ಧಿ ಒಂದೇ ದಿನ ಬಿಗ್‌ಬಾಸ್‌ ಮನೆಯಲ್ಲಿ ಕಾಲ ಕಳೆದಿದ್ದು, ಮೊದಲ ದಿನವೇ ಬಿಗ್‌ಬಾಸ್‌ ಮನೆಗೆ ಗುಡ್‌ಬೈ ಹೇಳಲಿದ್ದಾರೆ. ಆರಂಭದಲ್ಲೇ ಬಿಗ್‌ಬಾಸ್‌ ನೀಡಿರುವ ಈ ಶಾಕ್‌ನಿಂದ ಉಳಿದ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+