Gilli: ಉಲ್ಟಾ ಹೊಡೆದ ಕಾವ್ಯ, ಗಿಲ್ಲಿ ನನ್ನ ಟಾರ್ಗೆಟ್ ಎಂದಿದ್ದೇಕೆ?
ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿರುವ ಸ್ಪರ್ಧಿ ಅಂದ್ರೆ ಅದು ಗಿಲ್ಲಿ. ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಈಗಾಗಲೇ ಹಲವರು ಗಿಲ್ಲಿನೇ ಟ್ರೋಫಿ ಗೆಲ್ಲೋದು ಅಂತಿದ್ದಾರೆ. ಆದರೆ, ಬಿಗ್‌ಬಾಸ್ ಮನೆಯಲ್ಲಿ ಎಲ್ಲವೂ ಉಲ್ಟಾ ಆಗಿದೆ. ಕಾವ್ಯ ಶೈವ ಕೂಡ ಗಿಲ್ಲಿ ವಿರುದ್ಧ ಉಲ್ಟಾ ಹೊಡೆದಿದ್ದು, ಉಳಿದ ಸ್ಪರ್ಧಿಗಳು ಕೂಡ ಗಿಲ್ಲಿಯನ್ನ ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಗಿಲ್ಲಿಯನ್ನು ಮನೆಯಿಂದ ಹೊರಗೆ ಕಳಿಸಲು ಖೆಡ್ಡಾ ತೋಡಿರುವ ಲಕ್ಷಣಗಳು ಕಂಡುಬಂದಿವೆ.
ಬಿಗ್‌ಬಾಸ್ ಮನೆಯಲ್ಲಿ ಇವರು ನನ್ನ ಟಾರ್ಗೆಟ್ ಅನ್ನೋದಾದ್ರೆ ಯಾರು? ಅಂತ ಕಿಚ್ಚ ಸುದೀಪ್ ಕೇಳಿದ್ದಾರೆ. ಆಗ ಹಲವರು ಗಿಲ್ಲಿ ಹೆಸರನ್ನು ಹೇಳಿದ್ದು ಮಾತ್ರವಲ್ಲದೆ, ಇದಕ್ಕೆ ಶಾಕಿಂಗ್ ಕಾರಣಗಳನ್ನು ಕೊಟ್ಟಿದ್ದಾರೆ. ಆರಂಭದಲ್ಲಿ ಗಿಲ್ಲಿ ಜಂಟಿಯಾಗಿದ್ದ ಕಾವ್ಯ ಶೈವ ಕೂಡ ತಿರುಗಿಬಿದ್ದಿದ್ದಾರೆ.
"ನಂಬಿಕೆ ಇಟ್ಟು ಮೋಸ ಮಾಡೋದ್ರಲ್ಲಿ ಗಿಲ್ಲಿ ಎತ್ತಿದ ಕೈ" ಎಂದು ರಿಷಿ ಗೌಡ ಹೇಳಿದ್ದಾರೆ. "ಗಿಲ್ಲಿ ಕಾಮಿಡಿ ಮಾಡುತ್ತಾನೆ, ನಾವು ವಾಪಸ್ ಕಾಮಿಡಿ ಮಾಡಿದಾಗ ಸೀರಿಯಸ್ ಆಗಿ ತೆಗೆದುಕೊಳ್ತಾನೆ" ಎಂದು ಧನುಷ್ ಗೌಡ ಹೇಳಿದ್ದಾರೆ. ಇನ್ನು ಅಶ್ವಿನಿ ಗೌಡ ಅವರು ಗಿಲ್ಲಿ ಎಲ್ಲೋ ಒಂದು ಕಡೆ ಈ ಮನೆಗೆ ಕಾಲಿಟ್ಟಾಗಿನಿಂದ ಗಿಲ್ಲಿ ನನ್ನ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾನೆ ಅಂತ ಅನಿಸಿತು. ಆಟ ಅಂತ ಬಂದಾಗಲೂ ಗಿಲ್ಲಿ ತುಂಬಾ ಸ್ವಾರ್ಥಿ ಎಂದಿದ್ದಾರೆ.

ಕಾವ್ಯ ಶೈವ ಹಾಗು ಗಿಲ್ಲಿ ಜಂಟಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಪರಸ್ಪರ ಜಗಳ ಬಂದಾಗಲೂ ಒಬ್ಬರಿಗೊಬ್ಬರು ಸಾಥ್ ಕೊಡುತ್ತಿದ್ದರು. ಗಿಲ್ಲಿ ಮೇಲೆ ಯಾರಾದ್ರೂ ಗಲಾಟೆ ಬಂದರೆ ಕಾವ್ಯ ಮೊದಲು ಮಧ್ಯಪ್ರವೇಶಿಸಿ ಬೆನ್ನೆಲುಬಿನಂತೆ ನಿಂತಿದ್ದರು. ಆದರೆ ಕಾವ್ಯ ಕೂಡ ಗಿಲ್ಲಿಯನ್ನ ಟಾರ್ಗೆಟ್ ಮಾಡುವ ಮೂಲಕ ಶಾಕ್ ಕೊಟ್ಟಿದ್ದಾರೆ. ಜಂಟಿಯಾಗಿ ಒಳಗೆ ಬಂದಾಗ ಗಿಲ್ಲಿ ಸೂಪರ್ ಆಕ್ಟೀವ್ ಅಂತ ಎರಡು ರೀತಿಯ ಪರ್ಸನಾಲಿಟಿ ಇತ್ತು. ಆಗ ನನ್ನ ಸ್ಟ್ಯಾಂಡ್ ಕಾಣಿಸ್ತಿರಲಿಲ್ಲ. ಹಾಗಾಗಿ ಗಿಲ್ಲಿಯನ್ನೇ ಟಾರ್ಗೆಟ್ ಮಾಡ್ತೀನಿ ಎಂದು ಕಾವ್ಯ ಶೈವ ಕೂಡ ಉಲ್ಟಾ ಹೊಡೆದಿದ್ದಾರೆ.
ಗಿಲ್ಲಿ ಕಾಲೆಳೆದ ಕಿಚ್ಚ
ಇತ್ತೀಚೆಗೆ ಸೂರಜ್ ಹಾಗೂ ಕಾವ್ಯ ಡ್ಯಾನ್ಸ್ ಮಾಡಿದ ವಿಚಾರವನ್ನು ಸುದೀಪ್ ಪ್ರಸ್ತಾಪಿಸಿದ್ದಾರೆ. ಅವರಿಬ್ಬರು ಡ್ಯಾನ್ಸ್ ಮಾಡುವಾಗ ಗಿಲ್ಲಿಗೆ ಏನೋ ಆಗ್ತಿರುತ್ತೆ ಎಂದು ರೇಗಿಸಿದ್ದಾರೆ. ಅಣ್ಣ ಅದು ಸತ್ಯವಾಗಿಯೂ ರೊಮ್ಯಾಂಟಿಕ್ ಅಂತ ಕಾಣಿಸುತ್ತಿರಲಿಲ್ಲ. ಅದು ಜಲ್ಲಿಕಟ್ಟಿನಲ್ಲಿ ಗೂಳಿ ಹಿಡಿದಂತೆ ಇತ್ತು ಎಂದು ಗಿಲ್ಲಿ ಹೇಳಿದ್ದಾರೆ. ನಾವು ತುಂಬಾ ಚೆನ್ನಾಗಿ ಪ್ರಾಕ್ಟೀಸ್ ಮಾಡಿದ್ವಿ, ಆದ್ರೆ ಎಲ್ಲ ಹಾಳಾಗೋಯ್ತು ಎಂದು ಕಾವ್ಯ ಹೇಳಿದ್ದಾರೆ. ನೀವು ಗಿಲ್ಲಿ ಹತ್ರ ಹೆಲ್ಪ್ ಬೇರೆ ಕೇಳಿದ್ರಿ ಅಲ್ವಾ? ಎಂದು ಸುದೀಪ್ ಮತ್ತೆ ರೇಗಿಸಿದ್ದಾರೆ. ನಾನ್ಯಾಕೆ ಹೆಲ್ಪ್ ಮಾಡಲಿ? ನನ್ನ ಗುಂಡಿ ನಾನೇ ತೋಡಿಕೊಳ್ಳಾ? ಎಂದು ಗಿಲ್ಲಿ ಹೇಳಿದ ಮಾತಿಗೆ ಎಲ್ಲರೂ ನಕ್ಕಿದ್ದಾರೆ.
ಇದು ನಿಮ್ಮನ್ನ ಉರ್ಸೋಕೆ ಮಾಡಿದಂತಿತ್ತು ಗಿಲ್ಲಿ ಎಂದು ಸುದೀಪ್ ಕೇಳಿದಾಗ, ಗಿಲ್ಲಿಗೆ ಹೊಟ್ಟೆ ಉರಿಯೋದು ನೋಡಿ ನನಗೆ ಖುಷಿ ಆಯ್ತು ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಇವರು ಯಾಕೆ ನನ್ನ ಹಿಂದೆ ಬಿದ್ದಿದ್ದಾರೋ ಗೊತ್ತಿಲ್ಲ. ನಾನು ಈಗಾಗಲೇ ಕಮಿಟೆಡ್, ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಗಿಲ್ಲಿ ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications