Gilli: ಗಿಲ್ಲಿ ವಿಚಾರಕ್ಕೆ ಇಬ್ಬರ ನಡುವೆ ದೊಡ್ಡ ಗಲಾಟೆ, ಬಿಗ್‌ಬಾಸ್‌ ಮನೆಯಲ್ಲಿ ಆಗಿದ್ದೇನು?

ಬಿಗ್‌ಬಾಸ್‌ ಮನೆ ಅಂದ್ಮೇಲೆ ಅಲ್ಲಿ ಕಿರಿಕ್‌ ಆಗೋದು, ಗಲಾಟೆ, ಜಗಳ ದಿನಾ ಇದ್ದಿದ್ದೇ. ಈ ಸೀಸನ್‌ನಲ್ಲೂ ಗಲಾಟೆ ಜೋರಾಗೇ ಇದೆ. ಜಂಟಿಯಾಗಿ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದ ಗಿಲ್ಲಿ ಹಾಗೂ ಕಾವ್ಯಾ ಈಗಷ್ಟೇ ಫ್ರೀಯಾಗಿದ್ದಾರೆ. ಸದ್ಯ ದೊಡ್ಮನೆಯಲ್ಲಿ ನಡೆದಿರುವ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಕಾವ್ಯ ಶೈವ ಹಾಗೂ ಅಶ್ವಿನಿ ಗೌಡ ಮತ್ತೊಮ್ಮೆ ರಣರಂಗದಲ್ಲಿ ಸೆಣಸಾಟ ನಡೆಸಿದ್ದಾರೆ. ಶೋ ಆರಂಭದಲ್ಲೇ ಕಾವ್ಯ ಹಾಗೂ ಅಶ್ವಿನಿ ನಡುವೆ ಕಿರಿಕ್‌ ಆಗಿತ್ತು. ಇದೀಗ ಮತ್ತೊಮ್ಮೆ ಅವರ ಗಲಾಟೆ ಮುಂದುವರಿದಿದೆ. ಈ ವೇಳೆ ಗಿಲ್ಲಿಗೆ ಹೋಗಿ ಬಕೆಟ್‌ ಹಿಡಿ ಎಂದು ಅಶ್ವಿನಿ ಗೌಡ ಅವಾಜ್‌ ಹಾಕಿದ್ದಾರೆ.

ಕಲರ್ಸ್‌ ಹಂಚಿಕೊಂಡಿರುವ ಪ್ರೋಮೋದಲ್ಲಿ ಈ ಗಲಾಟೆಯ ದೃಶ್ಯಗಳು ಇವೆ. ಬಿಗ್‌ಬಾಸ್‌ ಸ್ಪರ್ಧಿಗಳ ಕೆಲಸದ ವಿಚಾರವಾಗಿ ಮೊದಲಿಗೆ ಅಶ್ವಿನಿ ಗೌಡ ಮಾತು ಶುರು ಮಾಡಿದ್ದಾರೆ. ಆಗ ಗಿಲ್ಲಿ ಹಾಗೂ ಕಾವ್ಯ ಮಧ್ಯಪ್ರವೇಶಿಸಿದ್ದಾರೆ. ಬಳಿಕ ಸಿಟ್ಟಾದ ಅಶ್ವಿನಿ ಕಾವ್ಯ ವಿರುದ್ಧ ಗರಂ ಆಗಿದ್ದಾರೆ. ನೀನ್ಯಾಕೆ ಮಾತಾಡ್ತೀಯ? ಕೊನೆಗೆ ನಿನ್ನ ವಿಷ್ಯಕ್ಕೆ ನಾನ್‌ ಬಂದಿಲ್ಲ ಅಂತ ಕಾವ್ಯ ಕೂಡ ಜೋರು ಮಾಡಿದ್ದಾರೆ. ಏಯ್‌ ಅಂತೆಲ್ಲ ಮಾತಾಡೋದು ಇಟ್ಕೋಬೇಡ ಎಂದು ಅಶ್ವಿನಿ ಗಲಾಟೆ ಶುರು ಮಾಡಿದ್ದಾರೆ.

Bigg Boss Kannada 12 Gilli Kavya Clash Ashwini Sparks Major Fight Inside The House

ಗಿಲ್ಲಿಗೆ ಬಕೆಟ್‌ ಹಿಡಿದಿದ್ದು ನೋಡಿದ್ಯಾ?

ನೀವು ಅಂದಿದ್ದೆಲ್ಲ ಅನಿಸ್ಕೋಬೇಕಾ? ಎಂದು ಕಾವ್ಯ ಕೂಡ ಅಲ್ಲಲ್ಲೇ ಕೌಂಟರ್‌ ಕೊಟ್ಟಿದ್ದಾರೆ. ಹೋಗಿ ಗಿಲ್ಲಿಗೆ ಬಕೆಟ್‌ ಹಿಡಿ ಎಂದು ಅಶ್ವಿನಿ ಅವಾಜ್‌ ಹಾಕಿದ್ದು, ಇದರಿಂದ ಕಾವ್ಯಾ ಸಿಟ್ಟಾಗಿದ್ದಾರೆ. ನಾನು ಬಕೆಟ್‌ ಹಿಡಿದಿದ್ದು ನೀನು ನೋಡಿದ್ಯಾ? ಎಂದು ಕಿರುಚಾಡಿದ್ದಾರೆ. ಇಬ್ಬರೂ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಎಲ್ಲ ಸ್ಪರ್ಧಿಗಳು ಗಲಾಟೆ ನಿಲ್ಲಿಸಲು ಹರಸಾಹಸಪಟ್ಟಿದ್ದಾರೆ. ಬಳಿಕ ಏನಾಯಿತು ಎನ್ನುವುದು ಇಂದಿನ ಎಪಿಸೋಡ್‌ನಲ್ಲಿ ಪ್ರಸಾರವಾಗಲಿದೆ.

ತನ್ನ ಜಂಟಿಯಾಗಿದ್ದ ಕಾವ್ಯಾಗಾಗಿ ಗಿಲ್ಲಿ ತನ್ನ ಗೆಟಪ್‌ ಚೇಂಜ್‌ ಮಾಡಿಕೊಂಡಿದ್ದಾರೆ. ಕೆಂಪೇಗೌಡ ಸಿನಿಮಾದಲ್ಲಿ ಸುದೀಪ್‌ ಅವರಂತೆ ಖಡಕ್‌ ಮೀಸೆ ಬಿಟ್ಟಿದ್ದು, ಇದಕ್ಕೆ ಚಂದ್ರಪ್ರಭ ಸಹಾಯ ಮಾಡಿದ್ದಾರೆ. ಗಿಲ್ಲಿಯ ಹೊಸ ಅವತಾರ ಕಂಡು ಉಳಿದ ಸ್ಪರ್ಧಿಗಳೆಲ್ಲ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

ಕ್ಯಾಪ್ಟನ್ಸಿ ಕಿರಿಕ್‌

ಕ್ಯಾಪ್ಟನ್ಸಿ ವಿಚಾರವಾಗಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಹಾಗೂ ಹಳೆಯ ಸ್ಪರ್ಧಿಗಳ ನಡುವೆ ವಾಗ್ವಾದ ನಡೆದಿದೆ. ಈ ಪೈಕಿ ಇಬ್ಬರು ಬಿಗ್‌ಬಾಸ್‌ ಟಾಸ್ಕ್‌ಗೆ ಒಪ್ಪಿದ್ದಾರೆ. ಸೂರಜ್‌ ನಾನು ಇದನ್ನು ತೆಗೆದುಕೊಳ್ಳುತ್ತಿಲ್ಲ, ತಂಡ ಗೆದ್ದರೆ ನಾನು ಮುಂದುವರಿಯುತ್ತೇನೆ ಎಂದಿದ್ದಾರೆ. ಸೂರಜ್‌ ನಿರ್ಧಾರಕ್ಕೆ ಬಾಕಿ ಸ್ಪರ್ಧಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ರಘು ಹಾಗೂ ರಿಷಾ ಗೌಡ ನಿರ್ಧಾರದಿಂದ ಎಲ್ಲರೂ ಗರಂ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+