Gilli: ಗಿಲ್ಲಿ ಬಿಗ್‌ಬಾಸ್ ಗೆಲ್ಲಲ್ಲ: ಫಿನಾಲೆ ಹೊತ್ತಲ್ಲೇ ಖ್ಯಾತ ಜ್ಯೋತಿಷಿ ಅಚ್ಚರಿ ಭವಿಷ್ಯ
Kannada Bigg Boss 12 Finale: ಕನ್ನಡ ಬಿಗ್‌ಬಾಸ್ ಸೀಸನ್-12ರ ಗ್ರ್ಯಾಂಡ್ ಫಿನಾಲೆ ಇಂದು ನಡೆಯಲಿದ್ದು, ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಅಂತಿಮವಾಗಿ ಆರು ಸ್ಪರ್ಧಿಗಳು ಫಿನಾಲೆ ಅಂಗಳದಲ್ಲಿದ್ದಾರೆ. 'ಈ ಬಾರಿ ಬಿಗ್‌ಬಾಸ್ ಟ್ರೋಫಿ ಗೆಲ್ಲೋದು ಗಿಲ್ಲಿನೇ' ಎಂದು ಅನೇಕರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಅಷ್ಟರಮಟ್ಟಿಗೆ ಗಿಲ್ಲಿ ಕ್ರೇಜ್ ಎಲ್ಲೆಡೆ ಇದೆ. ಸುದೀಪ್ ಕೂಡ ಒಬ್ಬ ಸ್ಪರ್ಧಿಗೆ ಈ ಬಾರಿ ದಾಖಲೆಯ ವೋಟಿಂಗ್ ಆಗಿದೆ ಎನ್ನುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಸದ್ಯ ಎಲ್ಲರ ಕಣ್ಣು ಗಿಲ್ಲಿ ಮೇಲಿದ್ದರೆ, ಖ್ಯಾತ ಜ್ಯೋತಿಷಿಯೊಬ್ಬರು 'ಗಿಲ್ಲಿ ಈ ಬಾರಿ ಬಿಗ್‌ಬಾಸ್ ಗೆಲ್ಲಲ್ಲ' ಎಂಬ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಅವರ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.
ಇಂದು ನಡೆಯಲಿರುವ ಕನ್ನಡ ಬಿಗ್‌ಬಾಸ್ ಸೀಸನ್-12ರ ಬಹುನಿರೀಕ್ಷಿತ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ದೀರ್ಘ ಪ್ರಯಾಣದ ಬಳಿಕ ಆರು ಮಂದಿ ಸ್ಪರ್ಧಿಗಳು ಫಿನಾಲೆಗೆ ಕಾಲಿಟ್ಟಿದ್ದು, ಯಾರು ಟ್ರೋಫಿ ಎತ್ತಿ ಹಿಡಿಯಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ಪರ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದರೆ, ಗಿಲ್ಲಿ ಗೆಲುವಿನ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ (Prashanth Kini) ಅವರ ಅಚ್ಚರಿ ಭವಿಷ್ಯವಾಣಿ ಈ ಎಲ್ಲ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದೆ.

'ಗಿಲ್ಲಿ ನಿಜಕ್ಕೂ ಅರ್ಹ ಸ್ಪರ್ಧಿ'
ಪ್ರಶಾಂತ್ ಕಿಣಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಾಮಾನ್ಯವಾಗಿ ಭವಿಷ್ಯವಾಣಿ ನುಡಿಯುತ್ತಿರುತ್ತಾರೆ. ಗಿಲ್ಲಿ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, 'ನಾನು ಗಿಲ್ಲಿ ಬಿಗ್‌ಬಾಸ್ ಗೆಲ್ಲುವುದಿಲ್ಲ ಎಂದು ಮೊದಲೇ ಭವಿಷ್ಯ ನುಡಿದಿದ್ದೇನೆ. ಇದರರ್ಥ ಗಿಲ್ಲಿ ವಿರುದ್ಧ ನನಗೆ ಯಾವುದೇ ದ್ವೇಷವಿದೆ ಎನ್ನುವುದಲ್ಲ. ಗಿಲ್ಲಿ ನಿಜಕ್ಕೂ ಅತ್ಯಂತ ಅರ್ಹ ಸ್ಪರ್ಧಿ' ಎಂದಿದ್ದಾರೆ. 'ಆದರೆ ಈ ಹಿಂದೆಯೂ ಸಹ ಅತ್ಯಂತ ಅರ್ಹ ಸ್ಪರ್ಧಿಗಳಲ್ಲಿ ಅನೇಕರು ಬಿಗ್‌ಬಾಸ್ ಗೆಲ್ಲಲು ಸಾಧ್ಯವಾಗಲಿಲ್ಲ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಗಿಲ್ಲಿ ಅಭಿಮಾನಿಗಳು ಮಾತ್ರ 'ಯಾರು ಏನೇ ಹೇಳಲಿ, ಗೆಲ್ಲೋದು ನಮ್ ಗಿಲ್ಲಿನೇ..' ಅಂತಿದ್ದಾರೆ.
ಕಿಣಿ ಭವಿಷ್ಯವಾಣಿ ವೈರಲ್
ಕಳೆದ ಡಿಸೆಂಬರ್‌ನಲ್ಲೂ ಗಿಲ್ಲಿ ಬಗ್ಗೆ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದರು. 'ಗಿಲ್ಲಿ ಬಿಗ್‌ಬಾಸ್ ಫಿನಾಲೆ ತಲುಪುತ್ತಾರೆ. ಆದರೆ ಟ್ರೋಫಿ ಗೆದ್ದು ವಿನ್ನರ್ ಆಗುವುದಿಲ್ಲ' ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಪ್ರಶಾಂತ್ ಕಿಣಿ ಅವರ ಹಲವು ಹಿಂದಿನ ಭವಿಷ್ಯವಾಣಿಗಳು ನಿಜವಾಗಿರುವ ಉದಾಹರಣೆಗಳು ಇದ್ದು, ಈ ಕಾರಣದಿಂದಲೇ ಗಿಲ್ಲಿ ಅಭಿಮಾನಿಗಳಲ್ಲಿ ಆತಂಕ ಮತ್ತು ಚರ್ಚೆ ಹೆಚ್ಚಾಗಿದೆ. 'ಈ ಭವಿಷ್ಯವೂ ನಿಜವಾಗುತ್ತದೆಯೇ?' ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
I had made prediction that GILLI won't win Big Boss that doesn't mean I have any hatred against GILLI Nata....
— Prashanth Kini (@AstroPrashanth9) January 17, 2026
GILLI is the most deserving contestant...
In the past also many of the most deserving contestants unable to win Big Boss... https://t.co/5HzvMUZWZS
ಒಂದು ಕಡೆ ಜನಾಭಿಪ್ರಾಯ ಮತ್ತು ವೋಟಿಂಗ್ ಅಂಕಿಅಂಶಗಳು, ಇನ್ನೊಂದು ಕಡೆ ಜ್ಯೋತಿಷಿಯ ಅಚ್ಚರಿ ಭವಿಷ್ಯವು ಕನ್ನಡ ಬಿಗ್‌ಬಾಸ್-12ರ ಫಿನಾಲೆಯನ್ನು ಇನ್ನಷ್ಟು ಕುತೂಹಲಕರವನ್ನಾಗಿಸಿದೆ. ಇಂದು ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬುದಕ್ಕೆ ಉತ್ತರ ಸಿಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
-
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ










Click it and Unblock the Notifications