Bigg Boss: ಬಿಗ್‌ಬಾಸ್ ವಿನ್ನರ್ ರೇಸ್‌ನಲ್ಲಿ ಗಾಯಕ ಹನುಮಂತ- 11ನೇ ವಾರದ ಮತದಾನದ ಫಲಿತಾಂಶ
ಬಿಗ್‌ಬಾಸ್ ಮನೆಯಲ್ಲಿ ಗಾಯಕ ಹನುಮಂತ ಸಖತ್ತಾಗಿ ಆಟ ಆಡುತ್ತಿದ್ದಾರೆ. ಅವಶ್ಯಕತೆ ಇರುವಷ್ಟು ಮಾತು, ಅವಶ್ಯಕತೆ ಇದ್ದಲ್ಲಿ ಮಾತ್ರ ವಾದ ಹೀಗೆ ಹನುಮಂತನ ಹಾಡು, ಕಾಮಿಡಿ, ಸರಳತೆ ಎಲ್ಲವೂ ಬಿಗ್‌ಬಾಸ್ ಅಭಿಮಾನಿಗಳ ಮನ ಗೆದ್ದಿದೆ. ಹೀಗಾಗಿ ಈ ಬಾರಿ ಹನುಮಂತನೇ ಬಿಗ್‌ಬಾಸ್ ಟಾಪ್ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಯಾವ ಸ್ಪರ್ಧಿಗಳಿಗೆ ಜನ ಮೆಚ್ಚುಗೆ ನೀಡುತ್ತಿದ್ದಾರೆ? ಯಾರಿಗೆ ಮತಗಳು ಹೆಚ್ಚಾಗಿದೆ? ಹನುಮಂತ ಯಾವ ಸ್ಥಾನದಲ್ಲಿ ಇದ್ದಾರೆ? ಟಾಪ್ 5 ಸ್ಪರ್ಧಿಗಳು ಯಾರು? ಎಲ್ಲವನ್ನೂ ಈಗ ತಿಳಿಯೋಣ.
11ನೇ ವಾರ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ದೊಡ್ಮನೆಯಿಂದ ಎಲಿಮಿನೇಟ್ ಆಗಲು ಎಂಟು ಜನ ನಾಮಿನೇಟ್ ಆಗಿದ್ದರು. ಈ ಎಂಟು ಜನರಿಗೆ ಬಂದಿರುವ ಓಟುಗಳನ್ನು ಗಮನಿಸಿದಾಗ ಐದು ಜನ ಸೇಫ್ ಝೋನ್ ಅಲ್ಲಿ ಇದ್ದಾರೆ. ಉಳಿದಂತೆ ಮೂರು ಜನ ಡೇಂಜರ್ ಝೋನ್‌ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಈ ಡೇಂಜರ್ ಝೋನ್ ಅಲ್ಲಿ ಇರುವ ಮೂವರಲ್ಲಿ ಯಾರಬೇಕಾದರೂ ಎಲಿಮಿನೇಟ್ ಆಗಬಹುದು. ಹಾಗಾದರೆ ಈವರೆಗೆ ಬಂದಿರುವ ಓಟುಗಳ ಪ್ರಕಾರ ಯಾರು ಡೇಂಜರ್ ಝೋನ್ ನಲ್ಲಿ ಇದ್ದಾರೆ ಅನ್ನೋದನ್ನು ತಿಳಿಯೋಣ.

ಬಿಗ್‌ಬಾಸ್ ಟಾಪ್ 5 ಸ್ಪರ್ಧಿಗಳು
ಬಿಗ್‌ಬಾಸ್ ಮನೆಯಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳು ಅಂದರೆ ತ್ರಿವಿಕ್ರಮ್, ಭವ್ಯ, ಧನ್‌ರಾಜ್, ಮೋಕ್ಷಿತಾ, ಶಿಶಿರ್, ಚೈತ್ರಾ, ಹನುಮಂತ, ರಜತ್. ಇವರಲ್ಲಿ ತುಂಬಾ ಜನರಿಗೆ ತುಂಬಾ ಒಳ್ಳೆಯ ಓಟುಗಳು ಬಂದಿವೆ. ಹೀಗೆ ಅಧಿಕ ಓಟುಗಳನ್ನು ಗಳಿಸಿಕೊಂಡು ಮೊದಲ ಸ್ಥಾನದಲ್ಲಿ ಇರುವುದು ಹನುಮಂತ ಅವರು. ಹೌದು... ಈ ವಾರವೂ ಕೂಡ ಅತ್ಯಂತ ಹೆಚ್ಚು ಓಟುಗಳು ಹನುಮಂತ ಅವರಿಗೇ ಬಂದಿವೆ.
ಇನ್ನೂ ಎರಡನೇ ಸ್ಥಾನದಲ್ಲಿ ತ್ರಿವಿಕ್ರಮ್ ಕಾಣಿಸಿಕೊಂಡಿದ್ದಾರೆ. ಅಂದರೆ ಹನುಮಂತನ ನಂತರ ಹೆಚ್ಚು ಮತಗಳನ್ನು ತ್ರಿವಿಕ್ರಮ್ ಅವರು ಗಳಿಸಿದ್ದಾರೆ. ಇನ್ನೂ ಮೂರನೇ ಸ್ಥಾನದಲ್ಲಿ ಮೋಕ್ಷಿತಾ ಪೈ ಅವರು ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ರಜತ್, ಐದನೇ ಸ್ಥಾನದಲ್ಲಿ ಭವ್ಯ ಗೌಡ ಅವರು ಇದ್ದಾರೆ.
ಉಳಿದಂತೆ ಮೂರು ಜನ ಸ್ಪರ್ಧಿಗಳು ಅಂದರೆ ಶಿಶಿರ್, ಚೈತ್ರಾ, ಧನ್‌ರಾಜ್ ಬಾಟಮ್ ಅಲ್ಲಿ ಉಳಿದುಕೊಂಡಿದ್ದಾರೆ. ಈ ಮೂವರಲ್ಲಿ ನೋಡಿದರೆ ಶಿಶಿರ್ ಅವರ ಆಟ ಸ್ವಲ್ಪ ಉತ್ತಮವಾಗಿದೆ. ಹೀಗಾಗಿ ಈ ವಾರ ಶಿಶಿರ್ ಸೇವ್ ಆಗಬಹುದು. ಆದರೆ ಇದನ್ನು ಖಚಿತವಾಗಿ ಹೇಳಲು ಆಗುವುದಿಲ್ಲ. ಯಾಕೆಂದರೆ ಬಿಗ್‌ಬಾಸ್ ಈ ಮೂವರಲ್ಲಿ ಯಾರನ್ನಬೇಕಾದರೂ ಹೊರಗೆ ಕಳುಹಿಸಬಹುದು.
ಈ ಮೂವರಲ್ಲಿ ಯಾರು ಔಟ್?
ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಟ್ ಮಾಡಲು ಕೇವಲ ಓಟಿಂಗ್ ಅನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಓಟಿಂಗ್ ರಿಸಲ್ಟ್‌ನೊಂದಿಗೆ ಬಿಗ್‌ಬಾಸ್ ತಂಡದ ನಿರ್ಧಾರ ಕೂಡ ತುಂಬಾ ಮುಖ್ಯವಾಗಿರುತ್ತದೆ. ಹೀಗಾಗಿ ಈ ಮೂವರಲ್ಲಿ ಯಾರನ್ನಬೇಕಾದರೂ ಎಲಿಮಿನೇಟ್ ಮಾಡಬಹುದು. ಆದರೆ ಇವರಲ್ಲಿ ಶಿಶಿರ್ ಸೇವ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಧನ್‌ರಾಜ್ ಹಾಗೂ ಚೈತ್ರಾ ಬಾಟಮ್ ಅಲ್ಲಿ ಬಂದು ನಿಲ್ಲುವ ಲಕ್ಷಣಗಳು ಇವೆ.
ಚೈತ್ರಾಕುಂದಾಪುರ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕರೂ ಕೂಡ ಅವರು ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಜಗಳ ಬಿಟ್ಟರೆ ಅವರು ಆಟದಲ್ಲೂ ಅಷ್ಟಕಷ್ಟೇ. ಹಲವಾರು ಬಾರಿ ಬಿಗ್‌ಬಾಸ್ ಮನೆಯಿಂದಲೂ ಅವರು ಹೊರಗಡೆ ಹೋಗಿ ಬಂದಿದ್ದಾರೆ. ಇದೆಲ್ಲದನ್ನೂ ನೋಡಿದರೆ ಚೈತ್ರಾ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಗಡೆ ಹೋಗಬಹುದು. ಇನ್ನೂ ಧನ್‌ರಾಜ್ ಕೂಡ ತುಂಬಾ ಕಾಮಿಡಿ ಮಾಡ್ತಾರೆ ಅನ್ಕೊಂಡಿದ್ರು ಜನ. ಆದರೆ ಕಾಮಿಡಿ ಅನ್ನೋದು ಸಂಪೂರ್ಣವಾಗಿ ಕಾಣೆಯಾಗಿ ಹೋಗಿದೆ. ಧಣ್‌ರಾಜ್ ಅವರ ಹನುಮಂತ ಜೊತೆಗೆ ಸೇರಿಕೊಂಡು ಕಾಲ ಕಳೆಯುತ್ತಾರೆ ಅನ್ನೋದು ಮಾತ್ರ ಕಾಣಿಸುತ್ತಿದೆ.
ಹನುಮಂತ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟಿಲ್ಲ ಅಂದಿದ್ದರೆ ಈಗಾಗಲೇ ಧನ್‌ರಾಜ್ ಎಲಿಮಿನೇಟ್ ಆಗಿ ಹೊರಬಂದಿರುತ್ತಿದ್ದರು. ಹನುಮಂತ ಅವರೊಂದಿಗೆ ಹೆಚ್ಚು ಸಮಯ ಕಳೆದು ಸ್ವಲ್ಪ ಹೈಲೆಟ್ ಆಗಿದ್ದು ಬಿಟ್ಟರೆ ಬೇರೆ ಯಾರೊಂದಿಗೂ ಧನ್‌ರಾಜ್ ಕಾಣಿಸಿಕೊಂಡಿಲ್ಲ. ಹೀಗಾಗಿ ಇವರು ತುಂಬಾ ಡೇಂಜರ್ ಝೋನ್ ಅಲ್ಲಿ ಇದ್ದಾರೆ. ಇಂದು ವಾರದ ಕತೆ ಕಿಚ್ಚನ ಜೊತೆ ನಡೆಯಲಿದ್ದು ಯಾರು ಬಿಗ್‌ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇದೆ. ಇದಕ್ಕಾಗಿ ಸಂಜೆವರೆಗೂ ಕಾಯಲೇಬೇಕು.











Click it and Unblock the Notifications